‘ಹರುಷಧಾರೆ’ e- ಪುಸ್ತಕ – ಅಶೋಕ್ ಕೆ.ಜಿ.ಮಿಜಾರ್
ಜನವರಿ 2014 ರಲ್ಲಿ, ಹವ್ಯಾಸಿ ಬರಹಗಾರರಿಗಾಗಿ ‘ಸುರಹೊನ್ನೆ’ ಜಾಲತಾಣವನ್ನು ಆರಂಭಿಸಿದಾಗ, ಈ ಉದ್ದೇಶವನ್ನು ಪ್ರೋತ್ಸಾಹಿಸಿ, ಓದುಗರಾಗಿ, ಬರಹಗಾರರಾಗಿ, ಸುರಗಿಬಳಗಕ್ಕೆ ಬಂದವರು, ಶ್ರೀ ಅಶೋಕ್ ಕೆ.ಜಿ.ಮಿಜಾರ್. ವಿಶಿಷ್ಟ ಶೈಲಿಯಲ್ಲಿ ಸದಭಿರುಚಿಯ ಕತೆಗಳನ್ನು ಸುರಹೊನ್ನೆಗಾಗಿ ಬರೆದಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಕೆಲವು ಬರಹಗಳನ್ನೂ ಬರೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾದ ಶ್ರೀ ಅಶೋಕ್ ಕೆ.ಜಿ.ಮಿಜಾರ್ ಅವರು ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರು.
ನಮ್ಮ ಅಂತರ್ಜಾಲ ಪತ್ರಿಕೆ ‘ಸುರಹೊನ್ನೆ’ಯಲ್ಲಿ ಇದುವರೆಗೆ ಪ್ರಕಟವಾದ ಇವರ ಕತೆಗಳನ್ನು ‘ಹರುಷಧಾರೆ’ ಯಾಗಿ ಪ್ರಕಟಿಸಲು ಹರುಷವಾಗುತ್ತಿದೆ.
ವೃತ್ತಿಯಾಗಿ ಅಕ್ಷರಸೇವೆ ಮಾಡುತ್ತಾ, ಪ್ರವೃತ್ತಿಯಾಗಿ ಅಕ್ಷರದ ಮೇಲೆ ಆಕ್ಕರೆಯುಳ್ಳ ಇವರ ಲೇಖನಿಯಿಂದ ಇನ್ನಷ್ಟು ಬರಹಗಳು/ಕತೆಗಳು ಮೂಡಿ ಬರಲಿ ಎಂದು ಆಶಿಸುತ್ತೇವೆ.
– ಸಂಪಾದಕಿ