ಐದು ದಳಗಳು!

Share Button

Ku.Sa Madhusudan Nair

1
ಹಸಿದವರಿಗೆ ಸಿಕ್ಕ ರೊಟ್ಟಿಯೇ
ತುಂಬು ಚಂದ್ರ
ಬೆಳದಿಂಗಳೆಂದರೆ ಬೇಸರ!

2
ಮರದಿಂದುರುವ ಹಣ್ಣೆಲೆ
ಗಮನಿಸು ಅರ್ಥವಾಗುವುದು
ಒಂಟಿತನ!

3
ದೇವಸ್ಥಾನದ ಗಂಟೆಯ ಸದ್ದು ಮೀರಿ
ಕೇಳಿಸುತ್ತಿದೆ ಹೊಲದೊಳಗೆ
ಕಳೆ ಕೀಳುತ್ತಿರುವ ಹೆಂಗಸರ ಹಾಡು!

4
ಸಿಕ್ಕಬಹುದೇನೊ ಅನಾಥ ಹೆಣಕೂ ಹೆಗಲು
ಕಷ್ಟ ಸಿಗುವುದು ಒಂಟಿತನಕೆ
ಊರುಗೋಲು!

5five petals
ಏರಿದಷ್ಟೂ ಎತ್ತರಕೆ
ಹೆಚ್ಚಾಗುವುದು ನೋವು ಬಿದ್ದರೆ
ಮೇಲಿಂದ!

 

 

– ಕು.ಸ.ಮಧುಸೂದನ್ ನಾಯರ್

4 Responses

  1. nishkalagorur says:

    ಹೊಸ ತರಹದ ಬರಹ

    • ಕು.ಸ.ಮಧುಸೂದನ್ says:

      ಕವಿತೆಯ ಓದಿ ಅನಿಸಿಕೆ ತಿಳಿಸಿದ ನಿಮಗೆ ದನ್ಯವಾದಗಳು!
      ನಿಮ್ಮವಿಶ್ವಾಸಿ.ಮಧು

  2. Ganesh says:

    ನಿರಶಾವಾದದಿಂದ ತುಂಬಿ ಋಣಾತ್ಮಕವಾದ ಚಿಂತನೆ ಅನ್ಸುತ್ತೆ.

Leave a Reply to Ganesh Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: