ಧನುರಾಸನ …ಲಾಭಗಳು
ಇನ್ನೊಬ್ಬರ ಕಾಲು ಹಿಡಿಯುವುದು (ಕಾಲೆಳೆಯುವುದು) ಸುಲಭದ ಕೆಲಸ. ಆದರೆ, ನಮ್ಮ ಕೈಗಳಿಂದ ಹಿಮ್ಮುಖವಾಗಿ ನಮ್ಮವೇ ಕಾಲುಗಳನ್ನು ಹಿಡಿದುಕೊಳ್ಳುವುದು ಎಷ್ಟು ಕಷ್ಟವಾಗುತ್ತದೆ!!! (ಉಂಡುಂಡು ಪುಷ್ಟವಾದ ಹೊಟ್ಟೆಯಿರುವಾಗ). ತಿಳಿಯಲು ಆಸಕ್ತಿಯಿದ್ದರೆ ನೀವೂ ‘ಧನುರಾಸನ’ ಮಾಡಿ ನೋಡಿ:
ವಿಧಾನ:
1) ಯೋಗಾಭ್ಯಾಸಿಯು ಮೊದಲು ನೆಲದಲ್ಲಿ ಮ್ಯಾಟ್ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ ಮಲಗಬೇಕು.
2) ಅನಂತರ ಎರಡೂ ಕಾಲುಗಳನ್ನು ಮಂಡಿಗಳ ಬಳಿ ಹಿಂದಕ್ಕೆ ಬಗ್ಗಿಸಬೇಕು.
3) ಆಮೇಲೆ, ಎಡಗೈಯಿಂದ ಎಡಗಾಲನ್ನು, ಬಲಗೈಯಿಂದ ಬಲಗಾಲನ್ನು ಹಿಡಿದುಕೊಳ್ಳಬೇಕು.
4) ಉಸಿರನ್ನು ಹೊರಗೆ ಬಿಟ್ಟು ಚಿತ್ರದಲ್ಲಿ ತೋರಿಸಿರುವಂತೆ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಬೇಕು.
ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಹೊಟ್ಟೆಯ ಮೇಲೆ ಇರುತ್ತದೆ.
ಧನುರಾಸನ ಅಭ್ಯಾಸದಿಂದಾಗುವ ಲಾಭಗಳು:
ಎದೆ, ಹೃದಯ, ಹೊಟ್ಟೆ ಮತ್ತು ಶ್ವಾಸಕೋಶಗಳು ಇನ್ನಷ್ಟು ಸದೃಢವಾಗುವುವು. ಬೆನ್ನುಮೂಳೆಯು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಪಡೆಯುವುದು. ಜಠರಾಗ್ನಿಯು ಹೆಚ್ಚು ಉದ್ದೀಪನಗೊಂಡು. ಜೀರ್ಣಶಕ್ತಿಯು ಹೆಚ್ಚುವುದು.
If possible, for learners, u can give simple Yoga Aasanas in the beginning and then slowly you may increasing the order of Aasanas. Thank u.
Congratulations for creating interest in Yogasanas by nice ,interesting & creative writing Hemaji !
ಜನರಲ್ಲಿ ಇತ್ತೀಚೆಗೆ ಸಮರ್ಪಕ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದ್ದಂತೆ ಯೋಗಾಸನದ ಲಾಭ ಹೆಚ್ಚು ಜನರನ್ನು ತಲುಪುವಂತೆ ಮಾಡುವುದೂ ಒಳ್ಳೆಯದೇ