ತಾಯಿ-ಮಗು-ಮನಸ್ಸು-ದೇವರು

Share Button
Malatesh AN

ಮಾಲತೇಶ್ ಅನಂತರಾವ್ ನಾಡಗೀರ್

ಪ್ರಾಣ ಎಂಬ ಚೇತನಶಕ್ತಿ (life-force)  ಇರುವವರೆಗೆ ಶಿವ-ಶಿವ. ಪ್ರಾಣ-ಅದಮ್ಯ ಚೇತನಾ (ಉಸಿರು) ಹೋದಮೇಲೆ ಶವ-ಶವ. ಸಂಕಟ ಬಂದಾಗ ವೆಂಕಟರಮಣ ಎಂಬ ವಾಡಿಕೆ ಸರ್ವೇಸಾಮಾನ್ಯ. ಸಂಕಟ ಬಂದಾಗ ದೇವರು ಬಂದೊದಗುತ್ತಾನೆ ಎಂಬ ಭಾವಾರ್ಥದಲ್ಲಿ ಹೇಳಿದ್ದು.ದೇವರು ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ಅದನ್ನು ತಮ್ಮೊಳಗೆ ಮಾತ್ರ ಅನುಭವಿಸಬಲ್ಲರು. ಪ್ರಾಣ ಎಂಬ ಚೇತನಶಕ್ತಿ ಜೀವಿಗಳಲ್ಲಿ ಪ್ರಾಣ ಅಥವಾ ಆತ್ಮವಾಗಿ, ನಿರ್ಜೇವಿಗಳಲ್ಲಿ ಸಾರ ರೂಪವಾಗಿರುತ್ತದೆ. ಈ ಶಕ್ತಿಯನ್ನು ದೈವಿಕ ಶಕ್ತಿ ಎನ್ನಬಹುದು.ಈ ಶಕ್ತಿಯು ಮನುಷ್ಯನ ಗುಣದಿಂದ ಮಾನವಗುಣಕ್ಕೆ ಅನುಸಾರವಾಗಿ ಪರಿವರ್ತನೆ ಆದಾಗ ದೈವಿಕ ಗುಣಗಳು ಮೇಲೈಸುತ್ತವೆ. ಆ ಗುಣ ಲಕ್ಷಣಗಳೇ ‘ಸ’ಕಾರಾತ್ಮಕ ಗುಣಗಳು. ಅವುಗಳಿಗೆ ವಿರೋಧವಾಗಿದ್ದರೆ ”ನ’ಕಾರಾತ್ಮಕ ಗುಣಗಳೆಂದು ತಿಳಿಯಬಹುದು.
 .
ಈ ಸ’ಕಾರಾತ್ಮಕ ಗುಣಗಳು ಮನುಷ್ಯನಲ್ಲಿಯೇ ಬೇರೆ ಆದರೆ ಮಾನವನಲ್ಲಿ ವಿವಿಧ ಹಾಗು ಅದರಲ್ಲಿ ಶ್ರೇಷ್ಟತೆಯನ್ನು ಕಂಡುಕೊಂಡರೆ ಅವನು ದೈವಿಕ ಪುರುಷನಾಗುತ್ತಾನೆ. ಆಗ ಅವನನ್ನು ಒಂದು ಹೆಸರಿನಿಂದ ಕರೆಯಬೇಕಲ್ಲವೇ.  ಅದಕ್ಕೆ ದೇವರೆಂದು ಅದು ಪುರುಷನಾಗಿರಬಹುದು ಅಥವಾ ಸ್ತ್ರೀಯಾಗಿರಬೇಕೆಂಬ ವಿಧಿಯಿಲ್ಲ. ಏನೋ ಒಂದು. ಮನುಷ್ಯನಲ್ಲಿ  ಈ  ಮೂಲಭೂತ ಗುಣಗಳಿರುತ್ತವೆ. ಇದನ್ನು ಜೀವನದ ಉದ್ದೇಶ (purpose of Life) ಅರಿತರೆ ಅವರ ಜೀವನದ ಗುರಿ ಸಾಧಿಸಿದ್ದಂತೆಯೇ. ಇದಕ್ಕೆ ಪುರುಷಾರ್ಥ (purpose of Life) ಎಂದು ಅನುಗುಣವಾಗಿ ಧರ್ಮ,ಅರ್ಥ,ಕಾಮ,ಮೋಕ್ಷ ಎಂದು ಒಟ್ಟಾಗಿ ಹೇಳುವರು. ಧರ್ಮ ಪಾಲಿಸುವುದರಿಂದ  ಶಾಂತಿ,  (ನಮ್ಮೊಳಗಡೆ ಇದೆಹುಡಿಕಿಕೊಂಡುಹೋಗಬೇಕಾಗಿಲ್ಲ),ಪ್ರೀತಿ,ಸತ್ಯಸಂಧತೆ,ಬೆಳೆಸಿಕೊಳ್ಳುತ್ತಾನೆ ಆತ್ಮರಕ್ಷಣೆಗಾಗಿ ಆತ್ಮ ವಿಶ್ವಾಸ, ಆತ್ಮಸ್ಥೈರ್ಯ, ಧೈರ್ಯ ಏರ್ಪಡುತ್ತದೆ. ಇವೆಲ್ಲವೂ ಮೆಲೈಸಿದಾಗ ‘ಸ’ಕಾರಾತ್ಮಕ ದೈವಿಕ ಸಿರಿ – ಸಂಪತ್ತು (ಅರ್ಥ), ನಮ್ಮೆಲ್ಲಾ ಇಷ್ಟರ್ಥಗಳನ್ನು ಪೋರೈಸುತ್ತವೆ ಮತ್ತು  ಸಿದ್ಧಿಸಿಕೊಳ್ಳಬಹುದು.

Moksha

ಕೊನೆಗೆ ಮೋಕ್ಷ ಅಂದರೆ  ಯಾವುದರಿಂದ?  ನ’ಕಾರಾತ್ಮಕ  ಅರಿಷಡ್ವರ್ಗ- ಕಾಮ,ಕ್ರೋಧ,ಲೋಭ,ಮೋಹ,ಮದ, ಮತ್ತ್ತು ಮತ್ಸರ (ಯಾವುದರಿಂದ ದುಃಖಕ್ಕೆ ಕಾರಣವೋ) ಅವುಗಳಿಂದ ಮುಕ್ತಿ.  ನೆಮ್ಮದಿಯಿಂದ ಜೀವನ ಸಾಗಿಸಿದ ಪೂರ್ಣತೆ ಮತ್ತು ತೃಪ್ತಿ. ಆಗ ಆತ್ಮಸಾಕ್ಷಾತ್ಕಾರಕ್ಕೆ,(self-realization or self-actualization) ಗೆ ಮಾರ್ಗದರ್ಶನ ನೀಡುತ್ತದೆ. ಧೈವತ್ವವಿದೆ ಹೊರತು ದೇವರ ಇರುವಿಕೆ ಇಲ್ಲದಿರುವಿಕೆ ಜೀವನದ ಕೊನೆಕೊನೆಗೆ ಎಲ್ಲವು ಗೌಣವೆನಿಸುವುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕೆ ಬುದ್ಧಿ ಜೀವಿಗಳಾಗಬೆಕಿಲ್ಲ.  ಅನುಭವಿಗಳಿಗೆ ಇದರ ಅರಿವಿನ  ಕೊರತೆಯಿದ್ದರೆ ಅದು ಯಾರ ತಪ್ಪ? ಅದನ್ನು ಪರಿಹರಿಸುವವರು ಯಾರು? ಉತ್ತರವನ್ನುಅವರವರೆ ಕಂಡುಕೊಳ್ಳಬೇಕು.

 .
  – ಮಾಲತೇಶ್ ಅನಂತರಾವ್ ನಾಡಗೀರ್

 

.

 

1 Response

  1. Sneha Prasanna says:

    ವಾವ್..ಸರ್ ಅರ್ಥಪೂರ್ಣವಾದ ಬರಹ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: