ಕಿಡ್ನಿ ಕಲ್ಲು ನಿವಾರಣೆಗೆ ಸುಲಭ ಔಷಧಿ…
ಇಂದು ಅನೇಕರನ್ನು ಕಾಡುತ್ತಿರುವ ಆರೋಗ್ಯ ಬಾಧೆಗಳಲ್ಲಿ ಕಿಡ್ನಿ ಕಲ್ಲು ಕೂಡಾ ಪ್ರಮುಖವಾಗಿದೆ. ಅದಕ್ಕಾಗಿ ವೈದ್ಯಕೀಯ ನೆರವನ್ನು ಪಡೆಯಲೇಬೇಕಾಗುತ್ತದೆ. ಯಾಕೆಂದರೆ ಕಿಡ್ನಿಯ ವಿಚಾರದಲ್ಲಿ ಅಸಡ್ಡೆ ಕೂಡದು. ಅದುವೇ ಎಂದಲ್ಲ ದೇಹದ ಯಾವುದೇ ಅಂಗಾಗವನ್ನು ಕೂಡಾ ನಿರ್ಲಕ್ಷ್ಯಿಸುವಂತಿಲ್ಲ.ಕಿಡ್ನಿಯಲ್ಲಿ ಕಲ್ಲು ಇದ್ದು ಅದು ಮೂತ್ರ ವಿಸರ್ಜನೆಗೆ ತೊಂದರೆ ಕೊಡುವುದಕ್ಕೆ ಶುರುಮಾಡಿದಾಗ ಉಂಟಾಗುವ ನೋವು ಅಂತಿಂಥದ್ದಲ್ಲ. ಅನುಭವಿಸಿದವರಿಗೆನೆ ಗೊತ್ತು ನೋವಿನ ಯಾತನೆ, ಸಂಕಟ.
.
ಇನ್ನು ಮನೆ ಮದ್ದಿನಲ್ಲಿಯೇ ಅನೇಕ ಬಗೆಯವುಗಳಿವೆ.ಆಯುರ್ವೇದ ಪದ್ಧತಿಯಲ್ಲಿಯೂ ಕಿಡ್ನಿ ಕಲ್ಲನ್ನು ಕರಗಿಸುವುದಕ್ಕೆ ಸಾಧ್ಯವೆಂಬುದು ಎಲ್ಲರಿಗೂ ಗೊತ್ತು. ಆಸ್ಪತ್ರೆಯಲ್ಲಾದರೆ ಮೂರ್‍ನಾಲ್ಕು ಬಾಟಲುಗಳಷ್ಟು ದ್ರವ ಔಷಧಿಯನ್ನು ದೇಹಕ್ಕೆ ಕೊಟ್ಟು ಒತ್ತಡದಲ್ಲಿ ಮೂತ್ರ ಬರಿಸಿ ಕಲ್ಲನ್ನು ಹೊರ ಕಳಿಸುವ ಚಿಕಿತ್ಸೆ ಮಾಡಿಸುತ್ತಾರೆ.ಇನ್ನು ಕೆಲವು ಸಂದರ್ಭಗಳಲ್ಲಿ ಕಿಡ್ನಿ ಆಪರೇಷನ್ ಮಾಡಬೇಕೆಂಬ ಸಲಹೆ ಕೂಡಾ ಬರುತ್ತದೆ. ಸುಲಿಗೆಗಾಗಿ ಅನಗತ್ಯ ಸಲಹೆ ಕೊಡುವುದೂ ಈಗ ಜಾಸ್ತಿಯಾಗತೊಡಗಿದ್ದುದರಿಂದ ವೈದ್ಯಕೀಯ ಚಿಕಿತ್ಸೆ ಮೇಲೆ ನಂಬಿಕೆ ಕಡಿಮೆಯಾಗತೊಡಗಿದೆ.
.
ಇಲ್ಲೊಂದು ಸುಲಭವಾದ ಔಷಧಿ ಇದೆ.ಈ ಕ್ರಮವನ್ನು ಇತರರು ಕೂಡಾ ಮಾಡಿದರೆ ಒಳ್ಳೆಯದು.ಯಾಕೆಂದರೆ ಕಿಡ್ನಿಯಲ್ಲಿ ಹಾಗೂ ಮೂತ್ರಾಶಯದಲ್ಲಿ ಕಲ್ಲು ಕಟ್ಟುವುದಕ್ಕೆ ಅವಕಾಶವೇ ಬರುವುದಿಲ್ಲ, ಅಷ್ಟು ಸ್ವಚ್ಚವಾಗುತ್ತದೆ.ಇಲ್ಲಿ ಬೇಕಾಗಿರುವುದು ಹುಣಿಸೆ ಹುಳಿ(ಹುಣಿಸೆ ಹಣ್ಣು) ಮತ್ತು ಬೆಲ್ಲ,ನೀರು ಮಾತ್ರ.ಸೇವಿಸುವ ವಿಧಾನವನ್ನು ಓದಿ ತಿಳಿಯಿರಿ.
.
ಸುಮಾರು ಹತ್ತು/ಹದಿನೈದು ಗ್ರಾಂ ತೂಕದಷ್ಟು ಹುಣಿಸೆ ಹುಳಿ, ಅಷ್ಟೇ ಗ್ರಾಂ ಬೆಲ್ಲವನ್ನು ಒಂದು ದೊಡ್ಡದಾದ ಲೋಟದಲ್ಲಿ ನೀರಿಗೆ ಹಾಕಿಡಬೇಕು.ರಾತ್ರಿ ಮಲಗುವ ವೇಳೆ ಹೀಗೆ ಹಾಕಿಟ್ಟು ಅದನ್ನು ಮಲಗುವ ಕೋಣೆ ಅಥವಾ ಹಾಸಿಗೆ ಹತ್ತಿರವೇ ಇಟ್ಟುಕೊಂಡಿರಬೇಕು.ನೀವು ಬೆಳಿಗ್ಗೆ ಹಾಸಿಗೆಯಿಂದ ಏಳುವ ನಿಗದಿತ ಗಂಟೆಗೆ ಒಂದು ಗಂಟೆ ಮುಂಚೆ ಈ ಮಿಶ್ರಣವನ್ನು ಕುಡಿದು ಮತ್ತೆ ಒಂದು ಗಂಟೆ ನಿರಾಳವಾಗಿ ಮಲಗಬೇಕು.ನೀವು ಬೆಳಿಗ್ಗೆ ಏಳಕ್ಕೆ ಏಳುವವರಾದರೆ ಆರು ಗಂಟೆಗೆ, ಐದಕ್ಕೆ ಏಳುವುದಾದರೆ ನಾಲ್ಕು ಗಂಟೆಗೆ.ಒಟ್ಟಿನಲ್ಲಿ ಇದನ್ನು ಕುಡಿದು ಒಂದು ಗಂಟೆ ಮಲಗಿರಬೇಕು,ಬೇರೆ ಏನನ್ನೂ ಸೇವಿಸಕೂಡದು.
.
ಈ ಸೇವನೆಯನ್ನು ಒಟ್ಟು ನಲವತ್ತೆಂಟು ದಿನಗಳ ವರೆಗೆ ಮಾಡಬೇಕು.ಆದರೆ ಕಿಡ್ನಿ ಕಲ್ಲು ಮಾತ್ರ ಆರೇಳು ದಿನಗಳಲ್ಲಿ,ಬರೇ ಚಿಕ್ಕದಾಗಿದ್ದರೆ ಎರಡು ಮೂರು ದಿನಗಳಲ್ಲಿ ಮೂತ್ರದೊಂದಿಗೆ ಹೊರಗೆ ಬರುತ್ತದೆ.ಹಾಗಂತ 45 ದಿನಗಳು ಕುಡಿದರೆ ಮುಂದೆಗೆ ಒಳ್ಳೆಯದು. ಮತ್ತೆ ಮುಂದಿನ ಮೂರು ವರ್ಷಗಳ ತರುವಾಯ ಹಾಗೇ ಕುಡಿಯುವುದನ್ನು ಅಭ್ಯಾಸ ಮಾಡಬೇಕು.ಇದರಿಂದ ಮೂತ್ರಾಶ್ರಯದಲ್ಲಿ ಮೂತ್ರ ಹಣಿದು ಕಲ್ಲಾಗುವುದು ತಪ್ಪುತ್ತದೆ. ಆರೋಗ್ಯವಂತರೂ ಇದನ್ನು ಹೀಗೆ ಸೇವಿಸಿದರೆ ಕಿಡ್ನಿಯಲ್ಲಿ, ಮೂತ್ರಾಶ್ರಯದಲ್ಲಿ ಕಲ್ಲಾಗುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಲಿಕ್ಕೂ ಅವಕಾಶವಿರುವುದಿಲ್ಲ.
.
.
ನನ್ನ ಮಿತ್ರ ಕಂಗಿನಮನೆ ವಿಜಯ ಕುಮಾರ್ ಎಂಬವರಿಗೆ ಈ ಕಲ್ಲಿನ ಸಮಸ್ಯೆ ಉದ್ಭವಿಸಿತು.ಗಾತ್ರದಲ್ಲಿ ದೊಡ್ಡದೇ ಆಗಿದ್ದುದರಿಂದ ಬಹಳ ಸಂಕಟ ಅನುಭವಿಸಿದರು. ಮೂರು-ನಾಲ್ಕು ಬಾಟಲ್ ಡ್ರಿಪ್ಸ್ ಹಾಕಿದರೂ ಕಲ್ಲು ಹೊರಬಾರದೆ ನೋವು,ಸೆಡೆತ ಹೆಚ್ಚುತ್ತಲೇ ಇತ್ತು. ಅವರಿಗೆ ಮೇಲೆ ಹೇಳಿದ ಚಿಕಿತ್ಸೆ ಮಾಡಲಾಯಿತು,ಬರೇ ನಾಲ್ಕು ದಿನಗಳಲ್ಲಿಯೇ ಅಂಥದ್ದಾದ ಕಲ್ಲು ಕರಗಿ ಮೂತ್ರನಾಳದಲ್ಲಿ ಸರಾಗವಾಗಿ ಹೊರಬಂತು.ಹೀಗೆ ಕೆಲವರಿಗೆ ಈ ಮದ್ದನ್ನು ಹೇಳಿ ಅವರು ಅದರಿಂದ ತೃಪ್ತಿ ಕಂಡಿದ್ದಾರೆ.
.
ಇಲ್ಲಿ ಸೈಡ್ ಎಫೆಕ್ಟ್ ಎಂದು ಹೇಳುವುದಕ್ಕೆ ಅವಕಾಶವಿಲ್ಲ.ಎರಡೂ ಕೂಡಾ ಆಹಾರ ವಸ್ತುಗಳೇ ಆಗಿವೆ. ಹುಣಿಸೆ ಹುಳಿಯಿಂದ ಮೂತ್ರಾಶ್ರಯದ ಸ್ವಚ್ಚತಾ ಕೆಲಸ ನಡೆಯುತ್ತದೆ.ಪಾತ್ರೆ ತೊಳೆಯಲು ಹುಣಿಸೆ ಬಳಸಿದರೆ ಅದು ಹೇಗೆ ಕೊಳೆಯನ್ನು ಕರಗಿಸುವುದಿಲ್ಲ?ಅದೇ ಕೆಲಸವನ್ನು ಹುಳಿ ಮಾಡುತ್ತದೆ.ಇನ್ನು ಬೆಲ್ಲ ಯಾಕೆಂದರೆ ಹುಣಿಸೆ ಹುಳಿಯನ್ನು ಕರಗಿಸುವುದು ಬೆಲ್ಲ ಮಾತ್ರ.ಹುಳಿ ಚೆನ್ನಾಗಿ ಕರಗುವುದಕ್ಕೆ ಬೆಲ್ಲ ಸಹಕಾರಿಯಾಗುತ್ತದೆ.
.
ಬೆಳಿಗ್ಗೆ ಈ ಮದ್ದು ಸೇವಿಸಿದ ನಂತರದ ಒಂದು ಗಂಟೆ ಮೇಲೆ ದಿನವಿಡೀ ಹೊತ್ತಿಂದೊತ್ತಿಗೆ ನೀರು ಕುಡಿಯಲೇಬೇಕು.ಪ್ರತಿ ಒಂದು ಗಂಟೆಗೊಮ್ಮೆ ಎರಡೆರಡು ಲೋಟ ನೀರು ಕುಡಿಯಬಹುದು.ಯಾವುದೇ ದ್ರವ ಪದಾರ್ತ ಕೂಡಾ ನೀರು ಕುಡಿದಂತೆಯೇ ಲೆಕ್ಕಕ್ಕೆ ಸೇರುತ್ತದೆ.ಆದರೂ ಶುದ್ದವಾದ ನೀರು ಸೇವನೆ ಬಹಳ ಉತ್ತಮ.
.
– ವಿ.ಕೆ.ವಾಲ್ಪಾಡಿ
.
ತುಂಬಾ ಮಾಹಿತಿಪೂರ್ಣವಾಗಿದೆ ಮತ್ತು ಒಳ್ಳೆಯ ಶೈಲಿ.. ಬರೆಯುತ್ತಿರಿ.. 🙂
ಉತ್ತಮ ಮಾಹಿತಿ. ಧನ್ಯವಾದಗಳು.
ಒಳ್ಳೆಯ ಮಾಹಿತಿಯಿಂದ ಕೂಡಿದ ಬರಹ.
ಉಪಯುಕ್ತ ಮಾಹಿತಿಗೆ ಧನ್ಯವಾದಗಳು
ಒಳ್ಳೆ ಮಾಹಿತಿ …ನನಗೆ ತಿಳಿದ ಹಾಗೆ ಈ ಸಮಸ್ಯೆ ಗಂಡಸರಲ್ಲಿ ಹೆಚ್ಚು…
ಒಳ್ಳೆಯ ಸರಳ ಮಾಹಿತಿ
ಅರ್ಥಪೂರ್ಣ ಬಹು ಉಪಯೋಗಿ
ಬಹಳ ಉಪಯುಕ್ತ ಮಾಹಿತಿ .
ಉಪಯುಕ್ತ ಮಾಹಿತಿಗೆ ಧನ್ಯವಾದಗಳು
ಸರ್ ನಿನ್ನ ಮಗಳ ಮದುವೇಯಾಗಲ್ಲ ಅಂತಾ ಹೇಳಿದ್ದೆ.ಸೀಟ್ಟಾದ ಸೋದರ ಮಾವನ ಮೇಲೆ ನಿಮ್ಮ ಈ ದಿವ್ಯಾಷದಿಯನ್ನು ಎಕ್ಸಪರಿಮೆಂಟ ಮಾಡುತ್ತಿದ್ದೆನೆ.ಹೆಚ್ಚುಕಡಿಮೆಯಾದಲ್ಲಿ ಆ ದೇವರಲ್ಲ ನೀವೆ ನನ್ನನ್ನ ಅವರ ಮಗಳಿಂದ ಕಾಪಾಡಬೇಕು ಸರ್.ತುಂಬಾ ಸರಳವಾದ ಔಷದಿ ಇದಾಗಿದೆ.ದನ್ಯವಾದಗಳು…….
ನಮಸ್ತೆ
ನಾನು ಈ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ತೀವ್ರವಾಗಿ ಬಳಲಿದ್ದೇನೆ. ಮೂರು ಬಾರಿ ಶಸ್ತ್ರಕ್ರೀಯೆಗೂ ಒಳಪಟ್ಟಿದ್ದೇನೆ. ೨೦೧೨ರಿಂದ ೀ ಬಾದೆ ನನ್ನನ್ನು ಬಿಡದೆ ಕಾಡುತ್ತಿದೆ. ಈಗ ನಿಮ್ಮ ೀ ಸಲಹೆ ಓದಿ ಸಂತಷವಾಗಿದೆ ಇವತ್ತೆ ಈ ಪ್ರಯೋಗ ಮಾಡುತ್ತೇನೆ. ಧನ್ಯವಾದಗಳು ನಿಮಗೆ.
ಅದ್ಬುತ ಮಾಹಿತಿ ನಿಮ್ಮ ಸಲಹೇಯಿಂದ ನಾನೂ ಗುಣಮುಖನಾದೇ.. ತುಂಭಾ ಧನ್ಯವಾದಗಳು
ತುಂಬ ಒಳ್ಳೆಯ ಮಾಹಿತಿ, ತಮಗೆ ಧನ್ಯವಾದಗಳು
ಒಳ್ಳೆಯ ಔಷದಿ ಧನ್ಯವಾದಗಳು
sir please give me your number at list please send me your what up number sir this my number 9535223877