ಸೌತೆಕಾಯಿಯ ದಿಢೀರ್ ಉಪ್ಪಿನಕಾಯಿ

Share Button

 

Cucumber

ಮನೆಯ ಹಿಂದಿನ ಅತಿ ಸಣ್ಣ ಕೈತೋಟದಲ್ಲಿ, ಯಾವತ್ತೋ ಎಸೆದಿದ್ದ ಸಾಂಬಾರು ಸೌತೆಕಾಯಿಯ ಬೀಜ ಮೊಳೆತು ಪುಟ್ಟ ಬಳ್ಳಿಯಾಗಿತ್ತು. ಈವತ್ತು ಅದರಲ್ಲಿ ಒಂದು ಸಣ್ಣ ಸೌತೆಕಾಯಿ ಬಿಟ್ಟದ್ದು ಕಾಣಿಸಿತು. ಈ ಸೌತೆಕಾಯಿ ಚಿಕ್ಕದು, ಪಲ್ಯ/ಹುಳಿ ಇತ್ಯಾದಿ ಅಡುಗೆಗೆ ಸಾಲದು, ಏನು ಮಾಡಲಿ? ಎಂದು ಆಲೋಚಿಸಿದಾಗ ‘ಯುರೇಕಾ’!!!!!. ಐಡಿಯ ಸಿಕ್ಕಿತು.

ಅಡುಗೆಮನೆಯೆಂಬ ಪ್ರಯೋಗಶಾಲೆಯಲ್ಲಿ, ಸೌತೆಕಾಯಿಯ ತಿರುಳನ್ನು ಮಾತ್ರ ಬೇರ್ಪಡಿಸಿ, ಕಾಯಿಯನ್ನು ಸಿಪ್ಪೆ ಸಮೇತ ಹೆಚ್ಚಿ,ಹೋಳುಗಳನ್ನಾಗಿ ಮಾಡಿ ಆಯಿತು. ಒಂದು ಕಪ್ ಆಗುವಷ್ಟಿದ್ದ ಹೋಳುಗಳಿಗೆ ತಕ್ಕಷ್ಟು ಮಸಾಲೆಯಾಗಿ 8-10 ಒಣಮೆಣಸು, 3 ಚಮಚ ಸಾಸಿವೆಯನ್ನು ಪುಡಿಮಾಡಿ ಸೇರಿಸಿ, ಮೇಲೆರಡು ಚಮಚ ಉಪ್ಪು ಮತ್ತು ಚಿಟಿಕೆ ಅರಶಿನ ಪುಡಿಯನ್ನು ಉದುರಿಸಿದೆ. ಚಮಚೆಯಲ್ಲಿ ಕದಕುವಾಗ ಸೌತೆಕಾಯಿಯಿಂದಲೇ ಬಿಟ್ಟ ನೀರು ಸೇರಿ, ದಿಢೀರ್ ಉಪ್ಪಿನಕಾಯಿ ಸಿದ್ದವಾಯಿತು. 

Cucumber pickle

ಇದು ಮೊಸರು-ಅನ್ನದ ಜೊತೆಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ. ಆದರೆ ಇದು ಅಲ್ಪಾಯುಷಿ. ತಯಾರಿಸಿದ ದಿನ ಚೆನ್ನಾಗಿರುತ್ತದೆ, ಫ್ರಿಜ್ ನಲ್ಲಿಟ್ಟರೆ ಇನ್ನೂ 2-3 ದಿನ ಬಳಸಬಹುದು. ಬಿಳಿ/ಹಸಿರು ಸೌತೆಕಾಯಿಯಂದಲೂ ಇದೇ ರೀತಿ ಉಪ್ಪಿನಕಾಯಿ ತಯಾರಿಸಬಹುದಾದರೂ, ಮಂಗಳೂರು ಸೌತೆ ಅಥವಾ ಸಾಂಬಾರು ಸೌತೆಯ ಉಪ್ಪಿನಕಾಯಿ ಹೆಚ್ಚು ರುಚಿ. ಸೌತೆಕಾಯಿ ಎಳೆಯದಾಗಿರಬೇಕು.

 

– ಹೇಮಮಾಲಾ.ಬಿ

.

 

 

 

 

2 Responses

  1. Shivanand Endigeri says:

    ಊಟ ಚೆನ್ನಾಗಿ ಮಾಡಲಿ ಎಂಬ ಭಾವನೆಯಿಂದ ಅಡಿಗೆ ಮಾಡಿದರೆ ಎಲ್ಲವೂ ರುಚಿ ಆಗುತ್ತದೆ

  2. Hanumagouda Kc says:

    ಮನಸಿಟ್ಟು ಅಡುಗೆ ಮಾಡಿದರೆ

    ಏನೇಲ್ಲಾ ಮಾಡಬಹುದು ಎಂದು ತೋರಿಸಿಕೋಟ್ಟಿದ್ದಿರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: