ಅಭೇರಿ…ದೇವಗಾಂಧಾರಿ..

Share Button
Photo-Shruthi

ಶ್ರುತಿ ಶರ್ಮಾ, ಕಾಸರಗೋಡು.

ಕನ್ನಡ ಚಿತ್ರಗೀತೆಗಳಲ್ಲಿ  ‘ವಿರಹಾ.. ನೂರು ನೂರು ತರಹಾ..’ ,‘ಬಣ್ಣಾ.. ನನ್ನ ಒಲವಿನ ಬಣ್ಣ…“, “ಹೂವು ಚೆಲುವೆಲ್ಲಾ ನಂದೆಂದಿತು...” ಇವು ಬಹುಶ: ಎಲ್ಲರೂ ಒಂದೇ ರೀತಿ ಇಷ್ಟ ಪಡುವ ಹಳೆಯ ಹಾಡುಗಳಲ್ಲಿ ಕೆಲವು. ಹಾಡಿನ ಭಾವಗಳತ್ತ ಗಮನಿಸಿದರೆ ಒಂದಷ್ಟು ಶೋಕ, ಕೋರಿಕೆ, ಪ್ರೀತಿ, ಕರುಣೆ, ಗಾಂಭೀರ್ಯಗಳ ಮಿಶ್ರಣವಾಗಿದ್ದು ಆಪ್ತವೆನಿಸುವ ಈ ಹೇಳಿದ ಹಾಡುಗಳು, ಸಂಯೋಜಿಸಲ್ಪಟ್ಟಿರುವುದು ರಾಗ “ಅಭೇರಿ“ಯಲ್ಲಿ.  ಮೂರೂ ಹಾಡುಗಳು ಶ್ರೀ ಎಂ. ರಂಗರಾವ್ ರವರ ಸಂಗೀತ ನಿರ್ದೇಶನದಲ್ಲಿ ಹೊರಬಂದಥವು.

ರಾಗ “ಅಭೇರಿ”ಯ ಮೂಲ ರೂಪದಿಂದ ಕೊಂಚ ವ್ಯತ್ಯಾಸವಾಗಿ ಈಗ ನಾವೆಲ್ಲ ಕೇಳಿ ಮುದಗೊಳ್ಳುವ “ಕರ್ನಾಟಕದೇವಗಾಂಧಾರಿ” ಅಥವಾ ಮುತ್ತುಸ್ವಾಮಿ ದೀಕ್ಷಿತರ ಪದ್ಧತಿಯಲ್ಲಿ ಮುದ್ದಾಗಿ ಕರೆದಂತೆ “ದೇವಗಾಂಧಾರಿ”, ಅದುವೇ ಹಿಂದುಸ್ಥಾನಿ ಸಂಗೀತದಲ್ಲಿ “ಭೀಮ್ ಪಾಲ್ಸಿ”! 22 ನೇ ಮೇಳಕರ್ತ ಖರಹರಪ್ರಿಯದಲ್ಲಿ ಜನ್ಯವಾಗಿರುವ ಈ ರಾಗದ ಆರೋಹಣ ಅವರೋಹಣಗಳು ಹೀಗೆ :

ಆರೋಹಣ : ಸ ಗ2 ಮ ಪ ನಿ2 ಸ ( ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿ ಧೈವತ, ಕೈಷಿಕಿ ನಿಶಾದ)
ಅವರೋಹಣ : ಸ ನಿ2 ದ2 ಪ ಮ1 ಗ2 ರಿ2 ಸ (ಷಡ್ಜ, ಕೈಷಿಕಿ ನಿಶಾದ, ಚತುಶ್ರುತಿ ಧೈವತ, ಪಂಚಮ, ಶುದ್ಧ ಮಧ್ಯಮ, ಸಾಧಾರಣ ಗಾಂಧಾರ, ಚತುಶ್ರುತಿ ರಿಷಭ).

abheri

 

ಈ ಸ್ವರಗಳ ಬೇರೆ ಬೇರೆ ರೀತಿಯ ಸಂಯೋಜನೆಗಳು ವಿಶೇಷವಾಗಿದ್ದು ಇದರ ವಿಭಿನ್ನ ರೂಪ, ಭಾವಗಳಿಗೆ ಸಾಕ್ಷಿಯಾಗುತ್ತದೆ.

ಕರ್ಣಾಟ ಸಂಗೀತದಲ್ಲಿ ಬಹಳ ಪ್ರಸಿದ್ಧವಾದ ಕೀರ್ತನೆ “ನಗುಮೋಮು ಘನಲೇನಿ ಇದನ್ನು ತ್ಯಾಗರಾಜರು ಸೃಷ್ಟಿ ಮಾಡಿದುದೂ ಕೂಡಾ ರಾಗ ಅಭೇರಿಯಲ್ಲಿ. ಈ ಕೀರ್ತನೆಯ ಹುಟ್ಟು ಸ್ವಾರಸ್ಯಕರವಾದುದು. ತಾವು ಪೂಜಿಸುತ್ತಿದ್ದ ರಾಮನ ಮೂರ್ತಿಯು ನದಿನೀರಿನಲ್ಲಿ ಕಳೆದು ಹೋದಾಗ ಪ್ರೀತಿಯ ರಾಮನನ್ನು ಕಳೆದುಕೊಂಡ ವಿರಹ ದುಃಖದಿಂದ, ಶ್ರೀರಾಮನೆಡೆಯಿರುವ ಪ್ರೀತಿ, ಭಕ್ತಿಗಳಿಂದ ಜನಿತವಾದ ಈ ಕೃತಿ ಸರ್ವಕಾಲಪ್ರಿಯವೆನಿಸುವುದು ಅದರ ಭಾವಪೂರ್ಣ ಸಾಹಿತ್ಯ ಮತ್ತ್ತು ರಾಗದ ಸೌಂದರ್ಯದ ಉನ್ನತ ಮಟ್ಟದ ಹೊಂದಾಣಿಕೆಯಿಂದಾಗಿ. ಇದೇ ರೀತಿ ಮೈಸೂರು ವಾಸುದೇವಾಚಾರ್ಯರ “ಭಜರೇ ರೇ ಮಾನಸ..” ದಲ್ಲಿ ಕರುಣೆ, ಭಕ್ತಿಗಳ ಜೀವಂತಿಕೆಯನ್ನು ಕಾಣಬಹುದು.

ಮುಂದೆ ಕೊಡಲಾಗಿರುವ ಕೊಂಡಿಗಳಲ್ಲಿ ಕರ್ಣಾಟ ಸಂಗೀತದಲ್ಲಿ ಅಭೇರಿ ರಾಗದಲ್ಲಿ ಸಂಯೋಜಿಸಲ್ಪಟ್ಟಿರುವ ಕೆಲವು ಪ್ರಸಿದ್ಧ ಕೃತಿಗಳನ್ನು ಕೇಳಬಹುದು:

 

ಕೃತಿ: ನಗುಮೊಮು ಘನಲೇನಿ (ತ್ಯಾಗರಾಜರು)
ತಾಳ: ಆದಿ
ಹಾಡಿದವರು:ಶ್ರೀ ಬಾಲಮುರಳೀಕೃಷ್ಣ

ಕೃತಿ: ಭಜರೇ ರೇ ಮಾನಸ(ಮೈಸೂರು ವಾಸುದೇವಚಾರ್)
ತಾಳ: ಆದಿ
ಹಾಡಿದವರು: ರಂಜಿನಿ ಹೆಬ್ಬಾರ್

ಕೃತಿ:ಎಪ್ಪಡಿ ಪಡಿನಾರೋ(ಸುಬ್ರಃಮಣ್ಯ ಭಾರತಿ)
ತಾಳ:ಆದಿ
ಹಾಡಿದವರು: ಡಿ. ಕೆ.ಪಟ್ಟಮ್ಮಾಳ್

ಕೃತಿ:ಪಂಚಾಶತ್ಪೀಠರೂಪಿಣೀ.
ತಾಳ:ಆದಿ
ಹಾಡಿದವರು: ನಿತ್ಯ ಶ್ರೀ

ಕೃತಿ: ಕಾಯರೋಹಣೇಶಂ
ತಾಳ: ರೂಪಕ
ಹಾಡಿದವರು:ದೀಕ್ಷಿತಾ ವೆಂಕಟರಾಮನ್

ಭಾರತೀಯ ಸಿನೆಮಾ ಸಂಗೀತದಲ್ಲಿ ರಾಗ ಅಭೇರಿಯು ಬುದ್ಧಿನವಂತಿಕೆಯಿಂದ ಬಳಕೆಯಾಗಿದೆ. ಇದಕ್ಕೆ “ಮೊಹ್ರಾ” ಚಿತ್ರದ ಹಾಡು “ತೂ ಚೀಜ಼್ ಬಡೀ ಹೆ ಮಸ್ತ್ ಮಸ್ತ್..!” ಒಂದು ಉತ್ತಮ ಉದಾಹರಣೆಯೆನ್ನಬಹುದು.

ಕೆಳಗೆ ಕೊಟ್ಟಿತುವ ಇನ್ನಷ್ಟು ಕೊಂಡಿಗಳಲ್ಲಿ ಭಾರತೀಯ ಸಿನೆಮಾ ಸಂಗೀತದಲ್ಲಿ, ಅಭೇರಿ ರಾಗದಲ್ಲಿ ಸಂಯೋಜಿಸಲ್ಪಟ್ಟಿರುವ ಕೆಲವು ಗೀತೆಗಳನ್ನು ಕೇಳಿ ಆನಂದಿಸಬಹುದು :

ಕನ್ನಡ:

ಹಾಡು: ವಿರಹಾ
ಚಿತ್ರ : ಎಡಕಲ್ಲು ಗುಡ್ದದ ಮೇಲೆ
ಸಂಗೀತ: ಎಮ್. ರಂಗ ರಾವ್
ಹಾಡಿದವರು: ಪಿ. ಸುಶೀಲ

ಹಾಡು: ಬಣ್ಣಾ
ಚಿತ್ರ : ಬಂಧನ
ಸಂಗೀತ: ಎಮ್. ರಂಗ ರಾವ್
ಹಾಡಿದವರು: ಎಸ್. ಪಿ. ಬಿ, ಎಸ್. ಜಾನಕಿ

ಹಾಡು: ಹೂವು ಚೆಲುವೆಲ್ಲಾ ನಂದೆಂದಿತು
ಚಿತ್ರ : ಹಣ್ಣೆಲೆ ಚಿಗುರಿದಾಗ
ಸಂಗೀತ: ಎಮ್. ರಂಗ ರಾವ್
ಹಾಡಿದವರು: ಪಿ. ಸುಶೀಲ

ಮಲಯಾಳಂ

ಹಾಡು: ಕಥಯಿಲೆ ರಾಜಕುಮಾರಿಯುಂ
ಚಿತ್ರ : ಕಲ್ಯಾಣರಾಮನ್
ಸಂಗೀತ: ಇಳಯರಾಜಾ
ಹಾಡಿದವರು: ಕೆ.ಜೆ. ಯೇಶುದಾಸ್

ಹಾಡು: ಮಿಂಡಾತತೆಂಡೆ
ಚಿತ್ರ : ವಿಷ್ಣು ಲೋಕಮ್
ಸಂಗೀತ: ಇಳಯರಾಜಾ
ಹಾಡಿದವರು: ಎಮ್. ಜಿ ಶ್ರೀಕುಮಾರ್

ತಮಿಳ್

ಹಾಡು: ಉನ್ನಕ್ಕುಳ್ ನಾನೇ
ಚಿತ್ರ : ಪಚ್ಚಕ್ಕಿಲಿ ಮುತ್ತುಚರಮ್
ಸಂಗೀತ: ಹಾರಿಸ್ ಜಯರಾಜ್
ಹಾಡಿದವರು: ಬಾಂಬೆ ಜಯಶ್ರೀ, ಮಧು ಶ್ರೀ

ಹಾಡು: ಕನ್ನೋಡು ಕಾನ್ಪತೆಲ್ಲಾಂ
ಚಿತ್ರ : ಜೀನ್ಸ್
ಸಂಗೀತ: ಎ. ಆರ್. ರಹಮಾನ್
ಹಾಡಿದವರು: ನಿತ್ಯಶ್ರೀ ಮಹಾದೇವನ್

ಹಾಡು: ಮಿಂಡಾತತೆಂಡೆ
ಚಿತ್ರ : ವಿಷ್ಣು ಲೋಕಮ್
ಸಂಗೀತ: ಪಾಪನಾಶನಂ ಶಿವನ್
ಹಾಡಿದವರು: ಎಮ್. ಎಸ್ ಸುಬ್ಬುಲಕ್ಷ್ಮಿ

ಹಿಂದಿ

ಹಾಡು:ಖಿಲ್ ತೆ ಹೆ ಗುಲ್ ಯಹಾಂ
ಚಿತ್ರ : ಶರ್ಮೀಲಿ
ಸಂಗೀತ: ಸಚಿನ್ ದೇವ್ ಬರ್ಮಾನ್
ಹಾಡಿದವರು: ಕಿಶೋರ್ ಕುಮಾರ್

ಹಾಡು: ಖೋಯ ಖೋಯ ಚಾಂದ್
ಚಿತ್ರ : ಕಾಲ ಬಸಾರ್
ಸಂಗೀತ: ಸಚಿನ್ ದೇವ್ ಬರ್ಮಾನ್
ಹಾಡಿದವರು: ಮೊಹಮ್ಮದ್ ರಫಿ

ಹಾಡು:ತೂ ಚೀಸ್ ಬದೀ ಹೆ
ಚಿತ್ರ : ಮೊಹ್ರ
ಸಂಗೀತ:
ಹಾಡಿದವರು: ಉದಿತ್ ನಾರಾಯನ್, ಅಬ್ದುಲ್ಲ, ಕವಿತಾ ಕೃಷ್ಣಮೂರ್ತಿ

 

– ಶ್ರುತಿ ಶರ್ಮಾ, ಕಾಸರಗೋಡು.

3 Responses

  1. jayashree b kadri says:

    Nice Shruti. Well researched .

  2. krisnaveni kidoor says:

    ನಿಮ್ಮ “ನಗು ಮೋಮು” ಹಾಡು ಕೇಳಿ ಇಷ್ಟ ಪಟ್ಟಿದ್ದು ಸಾಕಷ್ಟು ಸಲ .ಆದರೆ ಆ ಹಾಡಿನ ಹಿನ್ನಲೆ ಗೊತ್ತಾಗಿದ್ದು ಈಗಲೇ .ಬಹು ಉತ್ತಮ ವಿಚಾರಗಳ ಆಗರ ಈ ಬರಹ.ಅಭಿನಂದನೆ .

  3. ಶ್ರುತಿಯವರೇ, ನಿಮ್ಮ ಅಭೇರಿ ರಾಗದ ಬಗೆಗಿನ ಬರವಣಿಗೆ ಚೆನ್ನಾಗಿತ್ತು. ನನಗೆ ಅಭೇರಿಗಿಂತಲೂ ದೀಕ್ಷಿತರ ಪದ್ಧತಿಯ ದೇವಗಾಂಧರಿಯೇ ತುಂಬಾ ಹೃದ್ಯ. ಇದಲ್ಲದೆ ಅಭೇರಿಯಲ್ಲೂ ದೇವಗಾಂಧರಿಯಲ್ಲೂ ಕೃತಿ ರಚಿಸಿದ್ದಾರೆನ್ನೂವುದು ವಿಶೇಷ. ದೀಕ್ಷಿತರು ರಚಿಸಿದ ಎರಡೂ ಬಗೆಯ ಕೃತಿಯು ಇಂತಿವೆ.
    ಪಂಚಾಷತ್ಪೀಠ ರೂಪಿಣೀ – ದೇವಗಾಂಧಾರಿ
    ವೀಣಾಭೇರಿ ವಾದ್ಯನುತೇ – ಅಭೇರಿ
    ಇನ್ನು ಸಿನಿಮಾ ಸಂಗೀತ ಎಂದಾಕ್ಷಣ ಅಭೇರಿರಾಗದ ರಚನೆಗಳಲ್ಲಿ ಎಂ ರಂಗರಾಯರದ್ದೇ ಸಿಂಹ ಪಾಲು ಎಂದೆನಿಸುತ್ತದೆ. ಅವರು ಅಭೇರಿಗಿಂತಲೂ ಸಿನಿಮಾ ಸಂಗೀತಕ್ಕೆ ಹೆಚ್ಚಾಗಿ ಹೊಂದಿಕೊಳ್ಳುವ ಹಿಂದೂಸ್ತಾನಿ ಪದ್ಧತಿಯ ಅಭೇರಿಗೆ ನಿಕಟವಾಗಿ ಹೊಂದಿಕೊಳ್ಳುವ ಭೀಮ್ ಪಲಾಸ್ ರಾಗವನ್ನು ಚೆನ್ನಾಗಿ ದುಡಿಸಿಕೊಂಡವರಲ್ಲಿ ಅಗ್ರಗಣ್ಯರು. ಹಾಗಾಗಿಯೇ ಅವರನ್ನು ಭೀಮ್ ಪಲಾಸ್ ನ ಭೀಮನೆಂದು ಕರೆಯುತ್ತಿದ್ದರಂತೆ. ನೀವು ಉಲ್ಲೇಖ ಮಾಡಿದ ಕೃತಿಗಳಲ್ಲದೆ ನನ್ನ ಗ್ರಹಿಕೆಗೆ ಬಂದ ರಂಗರಾಯರ ಭೀಮ್ ಪಲಾಸ್ ರಾಗದ ಇತರ ಹಾಡುಗಳು
    ಪ್ರಿಯತಮಾ ಕರುಣೆಯಾ… ತೋರೆಯಾ…
    ಅರಳಿದೇ ಅರಳಿದೇ…. ಮುದುಡಿದ ತಾವರೆ ಅರಳಿದೇ
    ಕಣ್ಣೀರ ಧಾರೆ ಇದೇಕೆ ಇದೇಕೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: