ಪ್ರವಾಸ

ಮಾಲ್ಗುಡಿ ಡೇಸ್ ನ ದೊಡ್ಡಮನೆ

Share Button
ಹೇಮಮಾಲಾ.ಬಿ

 ಧಾನ್ ಧಾನ್ ಮೇ ಲಿಖಾ ಹೆ ಖಾನೇವಾಲಾ ಕಾ ನಾಮ್ ಎನ್ನುತ್ತದೆ ಹಿಂದಿ ಗಾದೆಯೊಂದು. ನವೆಂಬರ್ 8, 2014 ರಂದು ನಮಗೆ ಮಧ್ಯಾಹ್ನದ ಊಟ  ‘ಆಗುಂಬೆಯ ದೊಡ್ಡಮನೆ’ ಯ ಧಾನ್ಯಗಳಲ್ಲಿ ಬರೆದಿತ್ತು!

ಇದು ಆಗುಂಬೆಯಲ್ಲಿರುವ ದೊಡ್ಡಮನೆ. 1986 ರಲ್ಲಿ,  ಶಂಕರನಾಗ್ ಅವರ ನಿರ್ದೇಶನದಲ್ಲಿ ನಿರ್ಮಾಣವಾದ  ಪ್ರಸಿದ್ಧ ‘ಮಾಲ್ಗುಡಿ ಡೇಸ್‘ ಧಾರಾವಾಹಿಯ ಕೆಲವು ಭಾಗಗಳನ್ನು ಇಲ್ಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 150  ವರ್ಷ ಹಿಂದೆ ಕಟ್ಟಲ್ಪಟ್ಟ ಬಹಳ ವಿಶಾಲವಾದ ತೊಟ್ಟಿಮನೆಯು ಈಗಲೂ ದೃಢವಾಗಿದೆ.  ಕುಸುರಿ ಕೆಲಸವುಳ್ಳ ಬಾಗಿಲುಗಳು, ಕಂಭಗಳು, ಪಾತ್ರೆಪರಡಿಗಳು, ದೇವರ ಮನೆಯ ಮುಂದಿ ಬಿಡಿಸಿದ ರಂಗೋಲಿ ಇವಲ್ಲಾ ಮಲೆನಾಡಿನ ಸಂಪ್ರದಾಯಗಳನ್ನು ಸೂಚಿಸುತ್ತವೆ.

 

ಇನ್ನು ಮನೆಮಂದಿಯೆಲ್ಲಾ ಸೇರಿ, ಮಲೆನಾಡಿನ ವಿಶೇಷ ಅಡಿಗೆ ತಯಾರಿಸಿ,  ಆದರದಿಂದ ಬಡಿಸುವ ಪರಿ…ವಾವ್.. ವರ್ಣಿಸಲಸಾಧ್ಯ! ಅನ್ನದಾತ ಸುಖೀಭವ!

ಮೈಸೂರಿನ ಯೈ.ಚ್.ಎ.ಐ. ತಂಡದ ಶ್ರೀ ಅನಂತ ದೇಶಪಾಂಡೆ ಮತ್ತು ಶ್ರೀ ಗಣಪಯ್ಯ ಅವರು ಆಯೋಜಿಸಿದ್ದ  ‘ಕವಲೇದುರ್ಗ ಮತ್ತು ಕುಂದಾದ್ರಿ’ ಬೆಟ್ಟಗಳ ಚಾರಣ ಕಾರ್ಯಕ್ರಮದ ಅಂಗವಾಗಿ, ದಾರಿಯಲ್ಲಿ ಸಿಗುವ ಆಗುಂಬೆಯ ಈ ‘ದೊಡ್ಡಮನೆಯ ಊಟ’ ನಮಗೆ ಬೋನಸ್ ಆಗಿ ಲಭಿಸಿತ್ತು.

– ಹೇಮಮಾಲಾ.ಬಿ

9 Comments on “ಮಾಲ್ಗುಡಿ ಡೇಸ್ ನ ದೊಡ್ಡಮನೆ

  1. The house and your introduction in poetic manner, both are fantastic and classic. One has to visit it…thank you Madam

  2. ಮಾಲ್ಗುಡಿಡೇಸ ನಲ್ಲಿ ನೋಡಿದ್ದು ನೆನಪಿದೆ .ಅಲ್ಲಿನ ಅನುಭವಗಳನ್ನು ಸು೦ದರವಾಗಿ ನಿರೂಪಿಸಿ ನಮ್ಮೊಡನೆ ಹ೦ಚಿ ಕೊ೦ಡಿದ್ದಕ್ಕೆ ವ೦ದನೆಗಳು.

Leave a Reply to savithrisbhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *