ದೇಹದಾನಕೆ ಮೂರು ಕಾರಣಗಳು..!

Share Button
veeralinganagoudar s (1)

ಕೆ.ಬಿ. ವೀರಲಿಂಗನಗೌಡ್ರ

        1

ಸಾವಿರಾರು ಚಿಂತೆಗಳು

ಚಿತೆಯ ರೂಪತಾಳಿ

ಸುಟ್ಟಿವೆ ಎನ್ನ ಜೀವವ..!!
ಸತ್ತಮೇಲೂ ಮತ್ತೆ ಸುಡುವ
ಆ ಹಾಳು ಸುಡುಗಾಡಿನ
ಸಮೀಪ ಸುಳಿಯದಿರಲೆಂದು..!

         

         2
ಕಣ್ಣಿಗೆ ಮಣ್ಣೆರಚಿ
ಮೋಸ ಮಾಡುವವರು
ಕಣ್ಣ್ತಪ್ಪಿಸಿ ಉಣ್ಣುವ
ಅನ್ನದಲ್ಲಿ ಮಣ್ಣು ಬೆರೆಸುವವರು
ನನ್ಮೇಲೆ ಮೂರುಹಿಡಿ ಮಣ್ಣಹಾಕಿ
ಕೈ ತೊಳೆಯದಿರಲೆಂದು..!

          3

ವೈದ್ಯರು ಶರೀರ ಛೇದನ
ಮಾಡಿ ವಿದ್ಯಾರ್ಥಿಗಳಿಗೆ
ವಿವರಿಸುವಾಗ ವ್ಯರ್ಥವಾಗುತಿದ್ದ
ಈ ದೇಹ ಭಾವಿ ವೈದ್ಯರಿಗೊಂದು
ಪಾಠವಾಗಿ ಅರ್ಥವಾದಾಗಲೇ
ನನಗೊಂದು ಮುಕ್ತಿ ಸಿಗಬಹುದೆಂದು.

 body donation

(ದೇಹದಾನ ಮಾಡಲು ಮೃತ್ಯುಪತ್ರ ಬರೆದಿಟ್ಟ ನಿಮಿತ್ಯ ಈ ಕವಿತೆ)

 

– ಕೆ.ಬಿ. ವೀರಲಿಂಗನಗೌಡ್ರ , ಬಾಗಲಕೋಟ ಜಿಲ್ಲೆ.

1 Response

  1. Niharika says:

    ಎಂಥಹಾ ಉನ್ನತ ಉದ್ದೇಶ ನಿಮ್ಮದು! ಈ ಕವನ ದೇಹದಾನಕ್ಕೆ ನನ್ನನ್ನೂ ಚಿಂತನೆಗೆ ಹಚ್ಛಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: