ಸೂಪರ್ ಪಾಕ

ಸಪಾದ ಭಕ್ಷ್ಯ

Share Button

 

Hema trek Aug2014
ಹೇಮಮಾಲಾ.ಬಿ

ಈ ಸಿಹಿಯ ಹೆಸರು ಸಪಾದ ಭಕ್ಷ್ಯ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಪಾದ ಭಕ್ಷ್ಯವನ್ನು  ಸತ್ಯನಾರಾಯಣ ಪೂಜೆಯ ಪ್ರಸಾದವಾಗಿ, ಶ್ರದ್ಧಾ-ಭಕ್ತಿಯಿಂದ ತಯಾರಿಸುತ್ತಾರೆ. ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒಂದೂಕಾಲು – ಸಪಾದ ಅಳತೆಯಲ್ಲಿ (ಉದಾ:1.25 ಕೆ.ಜಿ) ಬಳಸುವ ಪದ್ಧತಿಯಿಂದಾಗಿ ಈ ಸಿಹಿಗೆ  ‘ಸಪಾದ ಭಕ್ಷ್ಯ’ ಎಂಬ ಹೆಸರು ಬಂದಿದೆ.

Sapada bhakshya ingredientsಇದನ್ನು ತಯಾರಿಸಲು ಸಮಾನ ಅಳತೆಯಲ್ಲಿ ಮೈದಾಹಿಟ್ಟು, ಹಾಲು, ಸಕ್ಕರೆ,ತುಪ್ಪ ಮತ್ತು ಹೆಚ್ಚಿದ ಬಾಳೆಹಣ್ಣು ಬೇಕು. ಮೊದಲಿಗೆ  ದಪ್ಪ ತಳದ ಪಾತ್ರೆಯಲ್ಲಿ ಹೆಚ್ಚಿದ ಬಾಳೆಹಣ್ಣನ್ನು ಹಾಕಿ, ತುಪ್ಪ ಸೇರಿಸಿ, ಸಣ್ಣ ಉರಿಯಲ್ಲಿ ಕೆಂಪಗೆ ಹುರಿಯಬೇಕು. ಅದಕ್ಕೆ ಮೈದಾ ಹಿಟ್ಟನ್ನು ಹಾಕಿ 2-3 ನಿಮಿಷ  ಸೌಟಿನಲ್ಲಿ ಕೈಯಾಡಿಸಬೇಕು. ಆಮೇಲೆ ಸಕ್ಕರೆ ಹಾಕಿ ಕದಡಿಸಿ, ಕೊನೆಯದಾಗಿ ಹಾಲನ್ನೂ ಸೇರಿಸಬೇಕು. ಕೂಡಲೇ ಮಿಶ್ರಣವು ಮುದ್ದೆಯಾಗಿ, ಪಾತ್ರೆಯ ತಳ ಬಿಡುತ್ತದೆ.  ಬಹಳ ರುಚಿಯಾದ ಸಪಾದ ಭಕ್ಷ್ಯ ಸಿದ್ಧ. (ಇದಕ್ಕೆ ಇತರ ಸಿಹಿತಿಂಡಿಗಳಂತೆ ಏಲಕ್ಕಿ,ಗೋಡಂಬಿ-ದ್ರಾಕ್ಷಿ ಸೇರಿಸುವ ಪದ್ಧತಿಯಿಲ್ಲ) .

ಸುಮ್ಮನೆ ತಿನ್ನಲೆಂದು ಇದನ್ನು ತಯಾರಿಸುವ ಪದ್ಧತಿಯಿಲ್ಲವಾದುದರಿಂದ, ಅದಕ್ಕೆ ಪರ್ಯಾಯ ಉಪಾಯವಿದೆ.  ಮೈದಾಹಿಟ್ಟಿನ ಜತೆಗೆ 2 ಚಮಚ ಅಕ್ಕಿಹಿಟ್ಟನ್ನೂ ಸೇರಿಸಿ , ಮೇಲೊಂದಿಷ್ಟು ಗೋಡಂಬಿ, ದ್ರಾಕ್ಷಿ  ಉದುರಿಸಿ ಈ ಸಿಹಿಯನ್ನು ತಯಾರಿಸಿದರಾಯಿತು!  ಒಟ್ಟಿನಲ್ಲಿ ಇದು ಬಹಳ ರುಚಿಯಾದ ಭಕ್ಷ್ಯ.

 

 

Sapada bhakshya

 

– ಹೇಮಮಾಲಾ.ಬಿ

 

13 Comments on “ಸಪಾದ ಭಕ್ಷ್ಯ

  1. ಈ ಸಜ್ಜಿಗೆ ಖಾದ್ಯ . ನೋಡಿದರೆ ಬಾಯಿಯಲ್ಲಿ ನೀರುರೂಸುವುದಲ್ಲದೆ . ದೇವರ ಪ್ರಸಾದವೆಂಬ ಭಕ್ತಿ ಬಾವ ಅಲ್ಲದೇ ಇದರ ರುಚಿಗೆ ಸರಿಸಾಟಿ ಇಲ್ಲಾ ..

  2. ಆಶ್ಚರ್ಯ ಎಂದರೆ ಸ್ವಲ್ಪ ದಿವಸವಾಗಿ ಸಪಾದ ಮಾಡೊದು ಹೇಗೆ ಅಂತ ಯೋಚಿಸ್ತಾ ಇದ್ದೆ. ನಿನ್ನೆ ಪೂಜೆ ಮಾಡಿಸುವಾಗ ಯೋಗ ಬಂತು ಕೂಡ.

    1. ಹೌದು, ಗೋಧಿಯಲ್ಲಿ ಮೈದಾಕ್ಕಿಂತ ಹೆಚ್ಚು ನಾರಿನಂಶ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಉತ್ತಮ 🙂 . ತಯಾರಿಸಿ ನೋಡಬಹುದು. ಸಾಮಾನ್ಯವಾಗಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ, ಸತ್ಯನಾರಾಯಣ ಪೂಜೆಯ ಪ್ರಸಾದವಾಗಿ ತಯಾರಿಸುವ ‘ಸಪಾದ ಭಕ್ಷ್ಯ’ ವನ್ನು ಮೈದಾದಿಂದ ತಯಾರಿಸುವುದು ಸಂಪ್ರದಾಯವಾಗಿದೆ. ಹಾಗಾಗಿ ಅದರ ರೆಸಿಪಿಯನ್ನು ಬರೆದಿದ್ದೇನೆ.

      1. ಇಲ್ಲ, ಹವ್ಯಕರು ಎಂದಿಗೂ ಮೈದದಿಂದ ಸಪಾದ ತಯಾರಿಸೋದಿಲ್ಲಾ! ಬದಲಾಗಿ ಗೋದಿ ಹಿಟ್ಟನ್ನೇ ಬಳಸ್ತಾರೆ

  3. ಹೇಮಮಾಲ , ನಿಮ್ಮ ಹೆಸರಿನ ಬದಲಿಗೆ ‘ಸಪಾದ ಭಕ್ಷ್ಯ’ ಅಂತ ತಪ್ಪಾಗಿ ಮುದ್ರಿಕೆಯಾಗಿದೆ ನೋಡಿ ನಿಮ್ಮ ಭಾವಚಿತ್ರದ ಕೆಳಗೆ.

    1. ಶ್ರೀವಿದ್ಯಾ ಅವರೇ, ಮುದ್ರಣದ ತಪ್ಪನ್ನು ಗಮನಕ್ಕೆ ತಂದುದಕ್ಕೆ ತುಂಬಾ ಧನ್ಯವಾದಗಳು. ಈಗ ಸರಿಪಡಿಸಿದ್ದೇವೆ. 🙂

  4. ಶ್ರೀವಿದ್ಯಾ ಮೇಡಮ್,
    ಕೆಲವು ಅಡುಗೆಗಳನ್ನು (ಹೆಸರು ಒಂದೇ ಆಗಿದ್ದರೂ), ಸ್ವಲ್ಪ ಸ್ಥಳೀಯ ಬದಲಾವಣೆಯೊಂದಿಗೆ ತಯಾರಿಸುವ ಪದ್ಧತಿ ಸಹಜ. ಹಾಗಾಗಿ ನಿಮ್ಮ ಮಾತನ್ನು ಸಾರಾಸಗಟಾಗಿ ಒಪ್ಪಲಾಗದು. ಹಾಗೆಂದು ನೀವು ಹೇಳಿದುದೂ ಸ್ವಲ್ಪ ಮಟ್ಟಿಗೆ ನಿಜ. ಮೈದಾ,ಗೋಧಿ ಹಾಗೂ ರವೆ- ಇವುಗಳನ್ನು (ಬೇರೆ ಬೇರೆಯಾಗಿ) ಬಳಸಿ ಮಾಡಿದ ಮೂರು ವಿಧದ ಸಪಾದ ಭಕ್ಷ್ಯಗಳನ್ನು ಬೇರೆ ಬೇರೆ ಮನೆಗಳಲ್ಲಿ ಸವಿದಿದ್ದೇನೆ. ಕರಾವಳಿ ಮೂಲದ ಹವ್ಯಕಳಾದುದರಿಂದ ಈ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ ಈ ಅಡುಗೆಯ ಬಗ್ಗೆ ಚರ್ಚೆ ಇನ್ನು ಸಾಕು.

    ನಿಮಗೂ ಆಸಕ್ತಿಯಿದ್ದಲ್ಲಿ ರೆಸಿಪಿಗಳನ್ನು ಕಳುಹಿಸಿ. ಪ್ರಕಟಿಸುತ್ತೇವೆ.

  5. ನಾವೂ ಕರಾವಳಿಯ ಹವ್ಯಕರೇ. ನಮ್ಮ ಕಡೆ ಮೈದಾ ಉಪಯೋಗಿಸಿ ಸಪಾದ ಭಕ್ಷ್ಯ ಮಾಡುವುದು.

  6. ಸತ್ಯ ನಾರಾಯಣ ವೃತದ ಮಾತು ತೆಗೆದರೆ ನನ್ನ ಮನಸ್ಸು ಓಡುತ್ತಿರೋದು ಈ ಸಪಾದ ಭಕ್ಷ ದ ಸುವಾಸನೆ ಮತ್ತು ರುಚಿಯ ಕಡೆ.
    ನಮ್ಮಲ್ಲಿ ಮೈದಾ ದಿಂದ ತಯಾರು ಮಾಡುತ್ತಿದ್ದು ನನ್ನಮ್ಮನ ಕೈ ರುಚಿ ಇನ್ನೂ ನನ್ನ ನಾಲಿಗೆಯ ತುದಿಯಲ್ಲಿದೆ.
    ಆಗೆಲ್ಲಾ ಸ್ವಲ್ಪಸ್ವಲ್ಪವೇ ಸವಿಯುತ್ತಲಿದ್ದ ( ಸದಸ್ಯರು ಜಾಸ್ತಿ ಇರೋ ಕಾರಣವೂ ಇರಬಹುದು) ಕಾರಣ ಇದರೆಡೆಗಿನ ತಲಬು ಜಾಸ್ತಿಯೇ

  7. ಪೂಜಾ ವಿಧಿಯಲ್ಲಿ ಗೋದಿ ಹುಡಿ ಹಾಲು ಕಲ್ಲುಸಕ್ಕರೆ ಹಾಗು ತುಪ್ಪದ ನಮಪ್ರಮಾಣ ವೆಂದು ಬಣ್ಣಿಸಿದೆ ಸ ಪಾದ ವೆಂದರೆ ಕಾಲು ಸಹಿತ ಎಂದು ಅರ್ಥ ಬರುವಂತೆ ಸಮ ಪಾದ ಎಂದರೆ ಸಮಾನ ಭಾಗಗಳ ಎಂದು ಅರ್ಥ ಬರುತ್ತದೆ ಸಪಾದ ವೊಂದು ದೇವ ಪ್ರಸಾದ

Leave a Reply to Chittaranjan Das Cancel reply

 Click this button or press Ctrl+G to toggle between Kannada and English

Your email address will not be published. Required fields are marked *