ಬೆಳಕು-ಬಳ್ಳಿ

ಕನ್ನಡ ಕೀರ್ತಿ

Share Button

ಕನ್ನಡ ಅಕ್ಷರ
ಕಣ್ಣಿಗೆ ಸುಂದರ
ಕಲಿಯಲು ಬಲು ಸರಳ

ಕನ್ನಡ ನುಡಿಯಲು
ಕರ್ಣಕೆ ಮಧುರ
ಅರಿಯಬೇಕು ತಿರುಳ

ಕನ್ನಡ ನಾಡಲಿ
ಕಾನನ ಗಿರಿಗಳು
ಕಣ್ಸೆಳೆಯುವ ಕಡಲು

ಕನ್ನಡ ನೀರಲಿ
ಕಬ್ಬಿನ ಸಿಹಿ ಸವಿ
ಜೀವ ಪೊರೆವ ತಾಯಿ

ಕನ್ನಡ ಮಣ್ಣಿನ
ಕಣಕಣ ಚಿನ್ನವು
ನಾಡಿನಾಭರಣ

ಕನ್ನಡ ಚರಿತೆಯು
ಕೇಳಲು ರೋಚಕ
ಕಲಿಗಳಿರುವ ತವರು

ಕನ್ನಡ ಕಾವ್ಯ
ಕೋವಿದರಾ ನುಡಿ
ಜನಮಾನಸದುಸಿರು

ಕನ್ನಡ ಜನಮನ
ಕಲೆಗಳ ಸಂಗಮ
ಭಾವದ ರಸಧಾರೆ

ಕನ್ನಡ ಮೊಳಗಲಿ
ಕೀರ್ತಿ ಮೆರೆಯಲಿ
ಮಿಗಿಲೆನಿಸಲಿ ದಿವಕು

-ಅನಂತ ರಮೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *