ಬೆಳಕು-ಬಳ್ಳಿ

ಉದುರುವುದು ಎಂದರೆ ಹೊಸ ಚಿಗುರು ಮೂಡುವುದೇ

Share Button

ಕೊನೆಗಾದರೂ
ಮರವನ್ನು ಬಿಟ್ಟು ಹೋಗಲೇಬೇಕು
ಗೂಡನ್ನು ಬಿಟ್ಟ ಹಕ್ಕಿ
ಆಕಾಶವನ್ನೇ ನಂಬಲೇಬೇಕು
ಈ ‘ಇಂದು’ ಕೂಡ
ನಾಳೆಯ ನೆನಪಾಗಿ ಉಳಿಯುತ್ತದೆ.
ಋತುಗಳೆಲ್ಲವೂ
ಬದಲಾವಣೆ ಎಂಬ ಅಕ್ಷರಗಳನ್ನೇ ಬರೆಯುತ್ತವೆ

ನಿಂತೇ ಇರಬೇಕೆಂಬುದು
ಮರದ ಬೇರುಗಳ ಆಸೆ.
ಮುಂದೆ ಸಾಗುವುದು
ಬದುಕಿನ ಧರ್ಮ
ಮರದಿಂದ ಉದುರಿದ
ಎಲೆ ಹೇಳುವ ಪಾಠ ಒಂದೇ—
ತ್ಯಜಿಸುವುದು ಕೂಡ
ನವ ವಿಕಾಸಕ್ಕೆ ಆರಂಭವೇ
ಬದಲಾವಣೆಯನ್ನು ಅಪ್ಪಿಕೊಂಡ ಹೃದಯ
ಮತ್ತೆ ಹೊಸ ಚಿಗುರಾಗಿ ಹುಟ್ಟುತ್ತದೆ.

ತೆಲುಗು ಮೂಲ: ವಾರಾಲ ಆನಂದ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

6 Comments on “ಉದುರುವುದು ಎಂದರೆ ಹೊಸ ಚಿಗುರು ಮೂಡುವುದೇ

  1. ಮೌಲ್ಯ ಯುತವಾದ ಸಂದೇಶ ವನ್ನೊಳಗೊಂಡ ಕವನ..ಮೂಲ ಕವಿ..ಹಾಗೂ ಅನುವಾದಕರಿಬ್ಬರಿಗೂ….ವಂದನೆಗಳು.

  2. ಉತ್ತಮ ಸಂದೇಶವನ್ನು ನೀಡುವ ಕವನವು ಅತ್ಯಂತ ಸುಂದರವಾಗಿ ಅನುವಾದಗೊಂಡಿದೆ…ಧನ್ಯವಾದಗಳು.

  3. ಜೀವನ ಸತ್ಯ, ಸತ್ವವನ್ನು ಸಾರುವ ಚಂದದ ಅನುವಾದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *