ಸೂಪರ್ ಪಾಕ

ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು..

Share Button

ಕೆಲವು ವರ್ಷಗಳ ಹಿಂದೆ ನೆರೆಯ ಕೇರಳದ ವಯನಾಡ್ ನಲ್ಲಿರುವ ಎಡಕಲ್ ಕೇವ್ಸ್ ಗೆ ಚಾರಣಕ್ಕೆ ಹೋಗಿದ್ದೆ. ಅಲ್ಲಿ ಕೆಲವೆಡೆ ಚಿಕ್ಕ ಅಂಗಡಿಗಳಲ್ಲಿ ಉಪ್ಪು ನೀರಿನಲ್ಲಿ ನೆನೆಸಿದ ಬೆಟ್ಟದ ನೆಲ್ಲಿಕಾಯಿಗಳನ್ನು ಮಾರುತ್ತಿದ್ದರು.

ಇಲ್ಲಿ ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಶಿಸ್ತಿನಿಂದ ಪಾಲಿಸುತ್ತಾರೆ. ಅವರು ನೆಲ್ಲಿಕಾಯಿಗಳನ್ನು ಕಾಫಿ ಗಿಡದ ಎಲೆಗಳಲ್ಲಿ ಹಾಕಿ ತಿನ್ನಲು ಕೊಡುತ್ತಿದ್ದ ಶೈಲಿ ಇಷ್ಟವಾಯಿತು. ಪ್ಲಾಸ್ಟಿಕ್ ಕಪ್ ಅಲ್ಲೆಲ್ಲೂ ಕಾಣಿಸಿರಲಿಲ್ಲ.

Amla- brine

Amla

ಉಪ್ಪು ನೀರಿನಲ್ಲಿ ನೆನೆಸಿದ ನೆಲ್ಲಿಕಾಯಿ ಬಹಳ ರುಚಿಯಾಗಿತ್ತು. ತಯಾರಿಕೆಯ ವಿಧಾನವೂ ಅತಿ ಸುಲಭ. ಅಂಗಡಿಯಾತನನ್ನೇ ಕೇಳಿ ತಿಳಿದುಕೊಂಡೆ. ಒಂದು ಜಾಡಿಯಲ್ಲಿ ಶುಚಿಮಾಡಿದ ನೆಲ್ಲಿಕಾಯಿಗಳನ್ನು ಹಾಕಿ, ಸ್ವಲ್ಪ ಉಪ್ಪು, ಸೀಳಿದ ಹಸಿರು ಮೆಣಸಿನಕಾಯಿಗಳನ್ನು ಹಾಕಿ, ಕುದಿಸಿ ಆರಿಸಿದ ನೀರು ಸೇರಿಸಿ ಮುಚ್ಚಿಟ್ಟರಾಯಿತು.

2-3 ದಿನಗಳಲ್ಲಿ ನೆಲ್ಲಿಕಾಯಿಗಳು ಉಪ್ಪು-ಖಾರ ಹೀರಿಕೊಂಡು ತಿನ್ನಲು ಸಿದ್ಧ. ನೆನೆಸಿದ ನೀರು ಕೂಡ ಹುಳಿ-ಉಪ್ಪು-ಖಾರ ಸೇರಿ ಪಾನಿಪೂರಿಯ ‘ಪಾನಿ’ಯಂತೆ ಕುಡಿಯಲು ಚೆನ್ನಾಗಿರುತ್ತದೆ.

ನೆಲ್ಲಿಕಾಯಿ ‘ವಿಟಮಿನ್ ಸಿ’ಯ ಕಣಜ. ಬೆಟ್ಟದ ನೆಲ್ಲಿಕಾಯಿಗೆ ಸಮುದ್ರದ ಉಪ್ಪನ್ನು ಈ ರೀತಿ ಸೇರಿಸಿ ತಿಂದು ನೋಡಿ.

;

– ಹೇಮಮಾಲಾ.ಬಿ, ಮೈಸೂರು

l

8 Comments on “ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು..

  1. ಹೌದು,ಕಾಞ೦ಗಾಡ್ ಸಮೀಪದ ಪೆರಿಯೆ ನವೋದಯ ವಿದ್ಯಾಲಯದಲ್ಲಿದ್ದಾಗ ನನ್ನ ಸಹೋದ್ಯೋಗಿ ಶಿಕ್ಷಕಿಯರು ನನಗೂ ಇದರ ರುಚಿ ಹತ್ತಿಸಿದ್ದರು! 20 ವರ್ಷಗಳ ಹಿ೦ದೆ. ಬಲು ರುಚಿ.

Leave a Reply to Nagendra Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *