ಬೆಳಕು-ಬಳ್ಳಿ

ದ್ರೋಹ

Share Button

ಸಾಗುವ ಪಯಣದ ದಾರಿಯಲಿ
ಅಪರಿಚಿತರು ಜೊತೆಯಾಗುವರು
ಮಾತಿಗೆ ಮಾತು ಹಿತವಾಗಿ ಬೆಸೆಯಲು
ಅಪರಿಚಿತರು ಪರಿಚಿತರಾಗುವರು

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಇನ್ನೆಲ್ಲೋ ಬದುಕನು ಕಂಡುಕೊಳ್ಳುವರು
ಪ್ರೀತಿ ಆತ್ಮೀಯತೆಯ ಹಂಚಿಕೊಂಡು
ಭಾವನೆಗಳ ಅಭಿವ್ಯಕ್ತಿಯ ಪಡಿಸುವರು

ಸಮಯದ ಜೊತೆ ಜೊತೆಗೆ ಸಾಗುತ
ಒಂದೇ ಗೂಡಿನ ಹಕ್ಕಿಯಂತೆ ಬೆರೆಯುವರು
ನೋವು ನಲಿವುಗಳನ್ನು ಹಂಚಿಕೊಂಡು
ಬದುಕನು ಸುಂದರಗೊಳಿಸಿಕೊಳ್ಳುವರು

ನಂಬಿಕೆಯ ಜೊತೆಗೆ ಬದುಕು ಅರಳುವುದು
ಕಷ್ಟಗಳ ಮರೆತು ನೆಮ್ಮದಿಯ ಹೊಂದುವುದು
ಹೊಸ ಹೊಸ ಯೋಚನೆಗಳು ಜೊತೆಯಾಗುವುದು
ಬದುಕು ನವ ಚೈತನ್ಯದಿ ಮುಂದೆ ಸಾಗುವುದು

ಅನುದಿನವೂ ಇರದು ನಮಗೆ ಹಿತವಾಗಿ
ಚಿಕ್ಕ ಪುಟ್ಟ ತಪ್ಪುಗಳು ಹೆಚ್ಚುತ್ತಾ ಹೋಗಿ
ಕೊನೆಗೊಮ್ಮೆ ನಂಬಿಕೆಯ ದ್ರೋಹ ಆಗುವುದು
ಅರಳಬೇಕಾದ ಬದುಕು ಮುದುಡಿಹೋಗುವುದು

ಸುತ್ತಲೂ ನಡೆಯುವುದು ಒಳಿತು ಕೆಡುಕು
ನೋಡಿಯೂ ನೊಡದಂತಿರಬೇಕು ಹುಳುಕು
ಕೆಟ್ಟದ್ದನ್ನು ನಿರ್ಲಕ್ಷಿಸಿ ಒಳ್ಳೆಯದ ಅಪ್ಪೋಣ
ಸ್ವಾರ್ಥ ಸಾಧನೆಯ ಬಿಟ್ಟು ಒಳಿತ ಬಯಸೋಣ

ಹೊಂದಿಕೊಂಡು ಹೋದರಷ್ಟೇ ಇಲ್ಲಿ ಸುಖವು
ಮನದಿಚ್ಛೆಯಂತೆ ನಡೆದರೆ ಉಳಿಯದು ನಲಿವು
ಒಮ್ಮೊಮ್ಮೆ ಮೂಕ ಹಕ್ಕಿಯಂತೆ ಮೌನದಲ್ಲೇ
ಪರಿಪೂರ್ಣತೆಯ ಭಾವವನ್ನು ಹೊಂದೋಣ
ಈ ಜೀವನದಿ ಸಾರ್ಥಕತೆಯನ್ನು ಪಡೆಯೋಣ

ನಾಗರಾಜ ಜಿ. ಎನ್. ಬಾಡ, ಕುಮಟ

11 Comments on “ದ್ರೋಹ

  1. ಸಾರ್ಥಕ್ಯವನು ನಿದರ್ಶನಗಳ ಮೂಲಕ ಬೋಧಿಸುವ ಕವಿತೆಯು ಇಷ್ಟವಾಯಿತು.
    ಸಕಾರಾತ್ಮಕ ಚಿಂತನೆ ಕೈ ಹಿಡಿದು ಬರೆಸಿದೆ. ಇದಕಾಗಿ ಧನ್ಯವಾದ.

    ಚಿಕ್ಕಂದಿನಲ್ಲಿ ಹೊಂದಿಸಿ ಬರೆಯಿರಿ
    ಎಂಬ ಪ್ರಶ್ನೆ ಕೇಳುತಿದ್ದರು ಪರೀಕ್ಷೆಯಲಿ

    ಇದೀಗ ಹೊಂದಿಕೊಂಡು ಹೋಗುವುದು
    ಎಷ್ಟು ಸಂಕೀರ್ಣ? ಗೊತ್ತಾಗಿದೆ ಬದುಕಿನಲಿ

    1. ನಿಮ್ಮ ಅಕ್ಷರ ಪ್ರೀತಿಗೆ ಮೂಕ ವಿಸ್ಮಿತ ನಾ
      ನಿಮ್ಮ ಒಂದೊಂದು ಸಾಲುಗಳು ನನಗೆ ಪ್ರೇರಕ
      ನಿಮ್ಮ ಪ್ರೀತಿಯ ನಾಲ್ಕು ಸಾಲುಗಗಳೇ ಚೈತನ್ಯದಾಯಕ
      ಬರೆಯುವ ಖುಷಿಗೆ ಇದಕ್ಕಿಂತ ಹೆಚ್ಚಿನದು ಬೇರೇನೂ ಬೇಕಿಲ್ಲ
      ಧನ್ಯವಾದಗಳು ಸರ್

  2. ವಾಸ್ತವಿಕ ಸಂಗತಿಗಳನ್ನು ಕವಿತೆಯಲ್ಲಿ ಅನಾವರಣ ಮಾಡಿರರುವ ರೀತಿ.. ಚೆನ್ನಾಗಿ ದೆ ಸಾರ್…

    1. ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್

  3. ಸಕಾರಾತ್ಮಕ ಭಾವಗಳನ್ನು ಬಿತ್ತುತ್ತಲೇ ಸಾಗಿದ ಕವಿತೆ ಎಚ್ಚರಿಕೆಯೊಂದಿಗೆ ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳುವ ಕಿವಿ ಮಾತನ್ನೂ ಹೇಳಿರುವುದು ಆಪ್ಯಾಯಮಾನವಾಗಿದೆ.

    1. ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್

    1. ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್

  4. ಬಾಳಿನಲ್ಲಿ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಹಾಗೂ ಅಗತ್ಯತೆವನ್ನು ಬಿಂಬಿಸುವ ಸುಂದರ ಕವನ.

  5. ಸತ್ಯ ದ ಅನಾವರಣ ದ ಕವಿತೆ ತುಂಬಾ ಚೆನ್ನಾಗಿ ದೆ,,,

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *