ಮನಸ್ಸಿನ ಭಾವನೆಗಳ ಕದವ
ತೆರೆಯೋಣ ಮೆಲ್ಲ ಮೆಲ್ಲಗೆ
ಮನದ ಮುಗಿಲ ತುಂಬಾ
ಹಾಸಿಕೊಳ್ಳಲಿ ನಗುವ ಮಲ್ಲಿಗೆ
ನೋವುಗಳೆಲ್ಲ ಉಕ್ಕಿ ಬರಲಿ
ಮನದ ಒಳಗಿಂದ ಹೊರಗೆ
ಒಮ್ಮೆ ಬಿಕ್ಕಿ ಬರಿದಾಗಿಬಿಡುವ
ಹೊಚ್ಚ ಹೊಸ ನಾಳೆಗಳಿಗೆ
ಕಳೆದು ಹೋಗಲು ಬಿಟ್ಟುಬಿಡುವ
ಮನದೊಳಗಿನ ಎಲ್ಲಾ ಬೇಗೆ
ಹೊಸದಾಗಿ ತುಂಬಿಕೊಳ್ಳೋಣ
ನಲಿವುಗಳನ್ನು ಈ ಬಾಳಿಗೆ
ಗೆಲುವಾಗಬೇಕು ಮನಸ್ಸು
ನಿನ್ನೆಯದನೆಲ್ಲಾ ಮರೆತು
ಖುಷಿ ಖುಷಿಯ ಕ್ಷಣಗಳಷ್ಟೇ
ಅವಿಸ್ಮರಣೀಯ ಇರುವಿಕೆಗೆ
ಮುಖದಲ್ಲಿನ ಮಂದಹಾಸವು
ತುಂಬಲಿ ಮನಸ್ಸಿಗೆ ಸ್ಪೂರ್ತಿ
ಒಲವ ಜಗದೊಳಗೆ ಬದುಕಿ
ಬಾಳಬೇಕು ನಾವು ಜೀವನಪೂರ್ತಿ

ನಾಗರಾಜ ಜಿ. ಎನ್. ಬಾಡ, ಕುಮಟ


ಮೊದಲ ಸಾಲಂತೆ, ಮನದ ಭಾವಬಾಗಿಲ ತೆರೆಸುವಲ್ಲಿ
ಯಶಸಾಗಿರುವಿರಿ.
ಕೊನೆಯ ಸಾಲಂತೆ, ಒಲವ ಜಗದೊಳಗೆ ಬಾಳಲು
ಪ್ರೇರಿಸಿರುವಿರಿ.
ಧನ್ಯವಾದ ಕವಿಗಳೇ, ನಿಮ್ಮ ಪದ್ಯಪಾದ ಹೀಗೆಯೇ ಮುಂದುವರಿಯಲಿ
ನಾವು ಸಹೃದಯರು ಓದುತಾ, ಹಾಡುತಾ ಖುಷಿಯಾಗಿರುವೆವು.
ಸ್ಫೂರ್ತಿ ತುಂಬುವ ಸಾಲುಗಳು, ಚೆನ್ನಾಗಿದೆ.
ಚಂದದ ಕವನ..