ಪೌರಾಣಿಕ ಕತೆ

ಕಾವ್ಯ ಭಾಗವತ 61 : ಯಯಾತಿ – 2

Share Button

ನವಮ ಸ್ಕಂದ – ಅಧ್ಯಾಯ – 4
ಯಯಾತಿ – 2

ಆಕಾಲ ಮುಪ್ಪು ಪ್ರಾಪ್ತಿಯಿಂದ
ಅತೀವ ಸಂಕಟಕ್ಕೊಳಗಾದ ಯಯಾತಿ
ಶುಕ್ರಾಚರ‍್ಯರ ಬಳಿಗೈದು
ತನ್ನ ಅಕಾಲ ಮುಪ್ಪಿನಿಂದ ಪತ್ನಿ
ದೇವಯಾನಿಗೂ ಅಪಾರ
ನಿರಾಶೆಯಾಗಿದೆಯೆಂದೂ, ತನ್ನ ಮತ್ತವಳ
ಪರ‍್ಣ ದಾಂಪತ್ಯಭೋಗವನನುಭವಿಸುವ
ಆಸೆಗೆ ತನ್ನ ಮುಪ್ಪನ್ನು ಬೇರಾರಿಗಾದೂ ನೀಡಿ
ಅವರ ಯೌವನದ ವಿನಿಮಯವಾಗಿ
ಪಡೆಯಲವಕಾಶ ನೀಡಬೇಕೆಂದು ಪ್ರರ‍್ಥಿಸೆ
ಮಗಳು ದೇವಯಾನಿಯ ಒಳಿತಿಗೆ
ಶುಕ್ರಾಚರ‍್ಯ ಸಮ್ಮತಿಸೆ
ಯಯಾತಿ ತನ್ನ ಜೇಷ್ಠಪುತ್ರ ಯದುವ
ಬಳಿ ಯೌವನ ವಿನಿಮಯದ ಬೇಡಿಕೆ ಇಟ್ಟಾಗ
ಅವಿಧೇಯನಾದ ಮಗನು ಅದನೊಪ್ಪದೆ
ಬಹುಕಾಲ ಯೌವನದ ಸುಖವನನುಭವಿಸಿದ
ಹಿರಿಯ ಪಿತನಿಗೇ ಕಾಮೋಪಭೋಗದಲಿ
ವಿರಕ್ತಿ ಉಂಟಾಗದಿರೆ ಇನ್ನೂ
ಯೌವನದ ಆರಂಭದಲ್ಲಿರುವವಗೆ ಆಸೆಯಿರದೇ
ಎಂದುತ್ತರಿಸಿ
ಪಿತನ ಬೇಡಿಕೆಯ ತಿರಸ್ಕರಿಸಿದ

ಮಿಕ್ಕ ಮೂವರು ಪುತ್ರರೂ ಒಪ್ಪದಿರೆ ಕೊನೆಗೆ
ಗುಣವಂತನಾದ ಚಿಕ್ಕಮಗ ಪುರುವು
ಪಿತನ ಮನೋಭೀಷ್ಟವ ತಿಳಿದು
ಅವನಿಚ್ಚೆಯ ತರ‍್ಪ ಸುತನೇ
ರ‍್ವೋತ್ತಮನೆಂದು
ಪಿತನಿಗೆ ಪ್ರಾಪ್ತವಾದ ಅಕಾಲ ಮುಪ್ಪನ್ನು
ಸ್ವೀಕರಿಸಿ ತನ್ನ ಯೌವನವ ದಾನಮಾಡಲೊಪ್ಪಿದ

ಮಗನಿಂದ ಪಡೆದ ಯೌವನದಮಲಿನಲಿ
ಬಹಳ ಕಾಲದವರೆಗೂ ಉಭಯ ಪತ್ನಿಯರಲ್ಲೂ
ದಾಂಪತ್ಯ ಸುಖವನನುಭವಿಸುತ್ತ
ಜಗದ ಭೋಗವನ್ನೆಲ್ಲ ಅನುಭವಿಸಿದರೂ
ಸಂತೃಪ್ತಿ ಉಂಟಾಗದೆ, ಯಯಾತಿಗೆ
ತನ್ನ ಅವಿವೇಕವು ಗೋಚರವಾಗಿ
ಕಾಮವು ಎಂದಿಗೂ ಭೋಗದಿಂ ಇಂಗಲಾರದು
ಸಮಸ್ತ ದುಃಖಗಳಿಗೆ ವಿಷಯಾಭಿಲಾಷೆಯೇ
ಮೂಲವೆಂದರಿತು, ಪುರುಷನು
ಹೆತ್ತ ತಾಯಿಯೊಡನಾಗಲೀ,
ಒಡಹುಟ್ಟಿದ ಸೋದರಿಯೊಡನಾಗಲೀ
ಹೆತ್ತ ಮಗಳೊಡನೆಯಾಗಲೀ
ರಹಸ್ಯದಲ್ಲಿರಬಾರದು
ಬಲಿಷ್ಟವಾದ ಇಂದ್ರಿಯಗಳು
ಎಂತಹವರಿಗೂ ಬುದ್ಧಿ ಕೆಡಿಸಬಲ್ಲದೆಂಬುದನರಿತು
ತನ್ನದೇ ಜನ್ಮ ವೃತ್ತಾಂತದಿಂ
ನಡೆದೆಲ್ಲ ವಿಪರೀತಗಳ
ನೆನಪಿಸಿಕೊಂಡು ವಿರಕ್ತ ಭಾವದಿಂ
ಪುತ್ರ ಪುರುವ ಬಳಿಗೆ ಕರೆದು
ಅವನ ಯೌವನವ ಹಿಂದುರುಗಿ ಕೊಟ್ಟು
ಅವನಲ್ಲಿದ್ದ ತನ್ನ ಮುಪ್ಪನು ಹಿಂಪಡೆದು
ತಪೋವನಕೆ ನಡೆದು ದೃಢವೈರಾಗ್ಯದಿಂ
ಭಗವಧ್ಯಾನಪರನಾಗಿ
ಮುಕ್ತಿ ಹೊಂದಿದ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43543

-ಎಂ. ಆರ್.‌ ಆನಂದ, ಮೈಸೂರು

4 Comments on “ಕಾವ್ಯ ಭಾಗವತ 61 : ಯಯಾತಿ – 2

  1. ಯಯಾತಿಯ ಮುಂದುವರಿದ ಭಾಗ ಚೆನ್ನಾಗಿಮೂಡಿಬಂದಿದೆ..ಸಾರ್

  2. ಯಯಾತಿ – ಭಾಗ೨, ನೈಸರ್ಗಿಕವಲ್ಲದ ಭೋಗಗಳನ್ನೂ ಆಶಿಸಿದಾಗ ಉಂಟಾಗುವ ಪರಿಣಾಮಗಳನ್ನು ಸರಳವಾಗಿ ಪರಿಣಾಮಕಾರಿಯಾಗಿ ಬಿಂಬಿಸಲ್ಪಟ್ಟಿದೆ.

  3. ಯಯಾತಿಯ ಕಥಾಭಾಗವು ಕಾವ್ಯ ಭಾಗವತದಲ್ಲಿ ಚೆನ್ನಾಗಿ ಮೂಡಿಬಂದಿದೆ ಸರ್.

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *