ಪುಸ್ತಕ-ನೋಟ

ಕೃತಿ ಪರಿಚಯ: ಮಂದಾರ ಮಲಕ (ತುಳು ನಾಟಕ)

Share Button

ಪುಸ್ತಕ :- ಮಂದಾರ ಮಲಕ (ತುಳು ನಾಟಕ)
ಮೂಲ ಕೃತಿ :- ಮಂದಾರ ರಾಮಾಯಣ
ಮೂಲ ಲೇಖಕರು :- ಕೇಶವ ಭಟ್
ಅನುವಾದಿಸಿದವರು :- ಶ್ರೀಮತಿ ಅಕ್ಷತ ರಾಜ್ ಪೆರ್ಲ
ಪ್ರಕಾಶಕರು:- ನವಸುಮ ರಂಗಮಂಚ
ಬೆಲೆ :- 120/-

ಮಂದಾರ ಮಲಕ ಸುಂದರವಾದ ಅನುವಾದಿತ ತುಳು ನಾಟಕ. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಬಹಳ ಗಟ್ಟಿಯಾಗಿ ತಮ್ಮ ಅಸ್ತಿತ್ವವನ್ನು ತೋರಿಸುತ್ತವೆ. ಇಲ್ಲಿ ಸಾಮಾನ್ಯ ಬೇಡನೊಬ್ಬ ಮಹಾನ್ ಋಷಿಯಾಗಿ ಪರಿವರ್ತನೆ ಗೊಳ್ಳುವ ಪ್ರಸಂಗವನ್ನು ಮನಸ್ಸಿಗೆ ತಟ್ಟುವ ರೀತಿ ಸಂಭಾಷಣೆಗಳ ಮೂಲಕ ಚಿತ್ರಿಸಲಾಗಿದೆ. ವಾಲ್ಮೀಕಿಯ ಪಾತ್ರ ಮಾತ್ರವಲ್ಲ ಎಲ್ಲ ಪಾತ್ರಗಳು ನಾಟಕ ಓದಿ ಮುಗಿಸುವ ಹೊತ್ತಿಗೆ ಮನ ಪಟಲದ ಮೇಲೆ ಮೂಡಿ ಮತ್ತೆ ಮತ್ತೆ ಸದ್ದು ಮಾಡುತ್ತವೆ.

ನಾವು ಮಾಡುವ ಒಳ್ಳೆಯ ಕರ್ಮ ಅಥವಾ ಕೆಟ್ಟ ಕರ್ಮ ಇದರಲ್ಲಿ ನಮಗೆ ಮಾತ್ರ ಪಾಲು, ಬೇರೆ ಯಾರೂ ಅದರ ಭಾರವನ್ನು ಹೊರಲು ಬರುವುದಿಲ್ಲ ಅನ್ನುವ ಸಂದೇಶ ಈ ನಾಟಕದ ಆರಂಭದಲ್ಲಿ ಓದುಗನಿಗೆ ದಕ್ಕುತ್ತದೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ ಒಂದೊಂದು ಉತ್ತಮ ಪಾಠವನ್ನು ಹೇಳುವುದರಲ್ಲಿ, ಒಳ್ಳೆಯ ಸಂದೇಶವನ್ನು ನೀಡುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ನನ್ನನ್ನು ಬಹುವಾಗಿ ಆವರಿಸಿಕೊಂಡ ಪಾತ್ರ ಮಂಥರೆಯ ಪಾತ್ರ. ಈ ನಾಟಕದಲ್ಲಿ ಅವಳು ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಕಾಣುತ್ತಾಳೆ ಅಂತಲೇ ಹೇಳಬಹುದು. ಮಂಥರೆಯ ಪಾತ್ರ ರಾಮ ಅರಮನೆಯನ್ನು ತೊರೆದು ಹೇಗೆ ಕಾಡು ಸೇರುವ ಪರಿಸ್ಥಿತಿ ಬರುತ್ತದೆ ಅನ್ನುವುದನ್ನು ಹಂತ ಹಂತವಾಗಿ ನಮ್ಮ ಮುಂದೆ ತೆರೆದಿಡುತ್ತದೆ. ಈ ನಾಟಕದಲ್ಲಿ ಮಂಥರೆ ಒಂದು ಅಚ್ಚರಿಯಾಗಿ ನನಗೆ ಕಾಣಿಸುತ್ತಾಳೆ. ಹೀಗನ್ನಿಸಲು ಕಾರಣ ಸಂಭಾಷಣೆಯ ಶೈಲಿ.

ಒಂದು ನಿರಾಳವಾದ ಓದಿನ ಅನುಭವವನ್ನು ನೀಡಿದ ಕೃತಿ, ತುಳು ನಾಟಕ- ಮಂದಾರ ಮಲಕ. ಅಕ್ಷತಾ ರಾಜ್ ಅವರ ತುಳು ಭಾಷೆಯ ಮೇಲಿನ ಹಿಡಿತ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಬಹಳ ಸರಳವಾದ ಭಾಷೆಯ ಶೈಲಿಯಲ್ಲಿ ಅವರು ವಿಷಯಗಳನ್ನು ಬರಹದ ಮೂಲಕ ಓದುಗರ ಮುಂದಿಡುತ್ತಾರೆ- ಹಾಗಾಗಿ ತುಳು ಭಾಷೆಯಾದರೂ ಅವರ ಕೃತಿಗಳು ಇಷ್ಟವಾಗುತ್ತವೆ.

ನಯನ ಬಜಕೂಡ್ಲು

4 Comments on “ಕೃತಿ ಪರಿಚಯ: ಮಂದಾರ ಮಲಕ (ತುಳು ನಾಟಕ)

  1. ತುಳು ನಾಟಕದ ಅನುವಾದ ಸಂಕ್ಷಿಪ್ತ ವಾಗಿ ತಿಳಿಸಿ, ಇದು ಏಕೆ ಮಹತ್ವವಾಗಿದೆ ಎಂದು ತಿಳಿಸಿರುವಿರಿ.. ರಾಮಾಯಣ ಸರ್ವರಿಗೂ ಪ್ರಿಯ. ಅಭಿನಂದನೆಗಳು

  2. ಚಂದದ ಕೃತಿ ಪರಿಚಯ. ಇನ್ನಷ್ಟು ತಿಳಿಸಿದ್ದರೆ ಚೆನ್ನಿತ್ತೇನೋ ಅನ್ನುವಷ್ಟರಲ್ಲಿ ಮುಕ್ತಾಯವಾಗಿ, ಓದುವ ಕುತೂಹಲ ಇಮ್ಮಡಿಯಾಗುವಂತೆ ಮಾಡಿದೆ.

  3. ತುಳು ಕೃತಿಯ ಸೂಕ್ಶ್ಮ ರೂಪದ ವಿಶ್ಲೇಷನಾತ್ಮಕ ಪರಿಚಯ ಲೇಖನವು ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *