ಆಗಸ್ಟ್ ತಿಂಗಳು ಮಕ್ಕಳ ಕಣ್ಣಿನ ಆರೋಗ್ಯ ಹಾಗೂ ಸುರಕ್ಷತೆಯ ಮಾಸವನ್ನಾಗಿ ವಿಶ್ವದ ಎಲ್ಲೆಡೆ ಆಚರಿಸಲಾಗುತ್ತಿದೆ. ಮಕ್ಕಳ ಬಹಳಷ್ಟು ಸಮಸ್ಯೆಗಳು ಕಣ್ಣಿನ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಟ್ಟರೆ ಅವುಗಳನ್ನು ಕಾಪಾಡಬಹುದು. ಆದರೆ ಆದಷ್ಟು ಬೇಗ ಇವುಗಳನ್ನು ಗಮನಿಸಿ, ಪತ್ತೆ ಹಚ್ಚಬೇಕು. ಚಿಕಿತ್ಸೆ ಪಡೆಯದ ದೃಷ್ಟಿದೋಷಗಳು ಮುಂದೆ ಅವರು ಓದುವಾಗ ಅವರ ದೃಷ್ಟಿಯನ್ನು, ನಡವಳಿಕೆಯನ್ನು ಹಾಗೂ ಅವರು ಅನುಭವಿಸುವ ಕಡಿಮೆ ಮರ್ಯಾದೆಯನ್ನು ಸೃಷ್ಟಿ ಮಾಡುತ್ತವೆ. ಇವುಗಳು ತಮಗೆ ತಿಳಿದು ಬಂದ ತಕ್ಷಣ ಆ ಬಗ್ಗೆ ನೇತ್ರ ತಜ್ಞರ ಬಳಿ ಹೋಗಿ ತಪಾಸಣೆ ಹಾಗೂ ಅಗತ್ಯವಿದ್ದರೆ ಚಿಕಿತ್ಸೆ ಪಡೆಯಬೇಕು. ಮಗುವಿನ ಪಂಚೇಂದ್ರಿಯಗಳಾದ ಕಣ್ಣು, ಮೂಗು, ಕಿವಿ, ಚರ್ಮ ಇವೆಲ್ಲ ಚೆನ್ನಾಗಿದ್ದರೆ ಮಾತ್ರ, ಮುಂದೆ ಆ ಮಗು ಚೆನ್ನಾಗಿ ಆಡುತ್ತಾ, ಓಡುತ್ತಾ, ಬೆಳೆದು ಬಂದು ದೊಡ್ಡವನಾಗಿ ಕುಟುಂಬಕ್ಕೆ ಹೆಸರು -ಸಂಪಾದನೆ ತರಬಹುದು. ಮಕ್ಕಳಲ್ಲಿ ಮಯೋಪಿಯ ಅಂದರೆ ಸಮೀಪದೃಷ್ಟಿ ಬರಬಹುದು. ಅಥವ ದೂರದೃಷ್ಟಿ ಬರಬಹುದು. ಇವುಗಳನ್ನು ಅಲಕ್ಷಿಸಿದರೆ, ಕಾಲಕ್ರಮೇಣ ಅವು ದುಸ್ಥಿತಿಗೆ ಹೋಗಿ ಮುಂದೆ ಜೀವನದಲ್ಲಿ ಗಂಭೀರ ಕಣ್ಣಿನ ಸಮಸ್ಯೆಗಳನ್ನು ಉಂಟು ಮಾಡಬಹುದು. ಮಗುವಿನ ಸರ್ವಾಂಗೀಣ ಅಭಿವೃದ್ದಿಯಲ್ಲಿ ಒಳ್ಳೆಯ ದೃಷ್ಟಿ ಅಂದರೆ ಚೆನ್ನಾಗಿ ಕಣ್ಣು ಕಾಣುವಿಕೆ ಬಹಳ ಮುಖ್ಯ. ಇದು ಅವರಿಗೆ ಓದಲು, ಆಡಲು, ಜೀವನದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅನುಕೂಲ ಮಾಡಿಕೊಡುತ್ತದೆ.
ಒಂದು ವೇಳೆ ಮಗುವಿನ ಕಣ್ಣು ಒಳ್ಳೆಯ ಸಾಮಾನ್ಯ ದೃಷ್ಟಿ ಹೊಂದಿದ್ದರೂ, ಶಾಲೆಗೆ ಹೋಗುವ ಮುನ್ನ ಆಗಾಗ ಕಣ್ಣುಗಳ ತಪಾಸಣೆ ಮಾಡಿಸಬೇಕು. ಈಗ ಹೇಳುವ ಸಂದರ್ಭಗಳು ನಿಮ್ಮ ಮಗುವಿಗೆ ಬಂದರೆ ನೀವು ಅದನ್ನು ತಕ್ಷಣ ಗಮನಿಸಿ ಅದಕ್ಕೆ ಯೋಗ್ಯ ತಪಾಸಣೆ, ಚಿಕಿತ್ಸೆ ಮಾಡಿಸಬೇಕಾದ್ದು ಪಾಲಕರ ಆದ್ಯ ಕರ್ತವ್ಯ. ಆಗಾಗ ಕಣ್ಣುಗಳನ್ನು ವೀಕ್ಷಿಸಿದಾಗ ಮೆಳ್ಳೆಗಣ್ಣು ಅಥವಾ ವಾರೆಗಣ್ಣು ಕಂಡರೆ, ನೇರವಾಗಿ ದೃಷ್ಟಿಯನ್ನು ಕೇಂದ್ರಿಕರಿಸಲಾಗದಿದ್ದರೆ ಅಥವಾ ಏನನ್ನಾದರೂ ನೋಡಲು ಮಗು ದಿಟ್ಟಿಸಿ ನೋಡುತ್ತಿದ್ದರೆ, ಕಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ದರೆ, ಟಿವಿಗೆ ಅತ್ಯಂತ ಹತ್ತಿರ ಕುಳಿತು ನೋಡುತ್ತಿದ್ದರೆ, ಓದಲು ಕಷ್ಟ ಪಡುತ್ತ ತಡವರಿಸುತ್ತಿದ್ದರೆ, ತಕ್ಷಣ ಡಾಕ್ಟರ ಬಳಿ ಹೋಗಿ ತಪಾಸಣೆ ಮಾಡಿಸಿ. ಕ್ರೀಡೆಗಳಲ್ಲಿ ಭಾಗವಹಿಸುವಾಗ ಕಣ್ಣಿಗೆ ರಕ್ಷಣಾ ಕವಚ ಹಾಕಿಕೊಳ್ಳಬೇಕು. ಗಾಯಗಳಾಗುವ ಚಟುವಟಿಕೆಗಳಲ್ಲಿ ರಕ್ಷಣಾ ಕವಚ ಹಾಕಿಕೊಳ್ಳಬೇಕು.ಎಲ್ಲಕ್ಕಿಂತ ಮುಖ್ಯವಾಗಿ ಮೊಬೈಲ್, ಟಿವಿ ಇತ್ಯಾದಿಗಳನ್ನು ಹೆಚ್ಚು ಕಾಲ ನೋಡುತ್ತಿದ್ದರೆ, ಈಗಾಗಲೇ ಇರುವ ದೃಷ್ಟಿ ಸಮಸ್ಯೆಗಳೊಂದಿಗೆ, ಇದು ಸೇರಿಕೊಂಡು ದೃಷ್ಟಿ ಸಮಸ್ಯೆಗಳು ಜಾಸ್ತಿ ಆಗಬಹುದು. ಹೀಗಾಗಿ ಇವುಗಳನ್ನು ನೋಡುವ ಸಮಯವನ್ನು ಕಡಿಮೆ ಮಾಡಬೇಕು. ಇಲ್ಲವೇ ಆಗಾಗ ಮಧ್ಯಂತರ ಕಾಲದಲ್ಲಿ ಅವುಗಳನ್ನು ನೋಡುವುದನ್ನು ನಿಲ್ಲಿಸಿ ಹೊರಗೆ ಓಡಾಡಿ ನಂತರ ಮುಂದುವರೆಸಬಹುದು. ಮಕ್ಕಳ ಕಣ್ಣಿನ ರಕ್ಷಣೆಗೆ ಸೂರ್ಯನ ಬೆಳಕಿನಲ್ಲಿ ಅವರು ಬೆಳೆಯಬೇಕು. ಆದರೆ ಸೂರ್ಯನಿಂದ ಹೊರಬರುವ ನೇರಳಾತೀತ ಕಿರಣಗಳ ಅಪಾಯ ತಪ್ಪಿಸಿಕೊಳ್ಳಲು ಕಣ್ಣಿಗೆ ಸೂಕ್ತ ಕನ್ನಡಕಗಳನ್ನ ಮತ್ತು ತಲೆಗೆ ಟೋಪಿಗಳನ್ನ ಹಾಕಿಕೊಳ್ಳಬೇಕು.
–ಎನ್.ವ್ಹಿ.ರಮೇಶ್
ಮಕ್ಕಳ ಕಣ್ಣಿನ ಆರೋಗ್ಯದ ಕುರಿತಾದ ಉಪಯುಕ್ತ ಮಾಹಿತಿಗಳನ್ನು ನೀಡುವ ಲೇಖನ.
ಮಾಹಿತಿ ಪೂರ್ಣ ಲೇಖನ.
ಮಾಹಿತಿ ಯುಳ್ಳ ಲೇಖನ ಸಾರ್
ಉಪಯುಕ್ತ ಬರೆಹ; ಮಾಹಿತಿಪೂರ್ಣ
ನಮ್ಮಂಥ ಶಿಕ್ಷಕರಿಗೂ ಸಹಾಯಕಾರಿ, ಧನ್ಯವಾದ ಸರ್
ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ!
ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಅದರ ಬಗ್ಗೆ ಚಿಕ್ಕಂದಿನಲ್ಲೇ ಎಚ್ಚರಿಕೆ ತೋರಲು ಎಚ್ಚರಿಸುವ ಮಾಹಿತಿಯುಕ್ತ ಲೇಖನ ಚೆನ್ನಾಗಿದೆ.