
ಮಾಯೆಯಿಂದಲೂ ಮಂತ್ರದಿಂದಲೂ
ಪ್ರೀತಿ ಚಿಗುರುವುದಿಲ್ಲ.
ಅದು ಅತೃಪ್ತ ಸ್ವಾತಂತ್ರ್ಯವಲ್ಲ,
ಅನುರಾಗದ ಕಾಂಕ್ಷೆ.
ಜೀವನ ಹಳೆಯದಾಗಬಹುದು,
ಪ್ರೀತಿ ಮಾತ್ರ ನಿತ್ಯನೂತನ.
ಪ್ರೀತಿಗಿರುವ ವಿದ್ಯೆ ಒಂದೇ
ಜೀವನವನ್ನು ಪುನರ್ನಿಮಿ್ರಸುವುದು.
ದುಃಖದ ಮೋಡಗಳನ್ನೂ ಮರಳು ಬಿರುಗಾಳಿಗಳನ್ನೂ
ಎದುರಿಸಿ ನಿಲ್ಲುವುದು.
ಪ್ರತೀಕಗಳೊಂದಿಗೆ, ಪದಚಿತ್ರಗಳೊಂದಿಗೆ,
ತುಟಿಗಳನ್ನು ಒದ್ದೆ ಮಾಡಿಕೊಳ್ಳುತ್ತಾ,
ಪ್ರೇಮ ಪತ್ರಗಳನ್ನು ಬರೆಯುತ್ತಾನೆ ಕವಿ.
ಮೌನದಿಂದ, ತನ್ಮಯತೆಯಿಂದ,
ಮೃದುವಾಗಿ ನಡುಗುತ್ತಾ,
ಪದಗಳನ್ನು ಆಯ್ದುಕೊಂಡು
ವಾಕ್ಯಗಳನ್ನು ನಿರ್ಮಿಸಿಕೊಳ್ಳುತ್ತಾನೆ.
ಪ್ರೀತಿಯಿಂದ ಕರೆದರೆ ಸಮುದ್ರದ ಅಲೆಗಳು
ಪಾದಗಳನ್ನು ತೊಳೆಯುತ್ತವೆ.
ನದಿ ನೀರು ನಗುತ್ತಾ ಮಾತನಾಡಿಸುತ್ತವೆ.
ತೆಲುಗು ಮೂಲ : ಡಾ|| ರಾಧೇಯ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಪ್ರೇಮದ ಕುರಿತಾದ ವಿಭಿನ ವ್ಯಾಖ್ಯಾನ ಸುಂದರವಾಗಿದೆ. ಅನುವಾದವೂ ಸೊಗಸಾಗಿದೆ,
ಧನ್ಯವಾದಗಳು ಮೇಡಮ್
ಚಂದದ ಕವನ
ಧನ್ಯವಾದಗಳು ಮೇಡಮ್
ಸುಂದರ ಕವನ…
ಧನ್ಯವಾದಗಳು ಮೇಡಮ್
ಅಬ್ಬಾ ! ಕೊನೆಯ ಸಾಲುಗಳು ಎಂಥ ಚೆಂದ ಇದೆ ಸರ್…………….
ಈ ಸಂಚಾರಿ ಭಾವವನ್ನು ಬೆಳೆಸಿಯೇ ಇನ್ನೊಂದು ಕವಿತೆ ಬರೆಯಬಹುದು. ಸೂಪರ್
ಭಾವಪೂರ್ಣವಾದ ಅನುವಾದಿತ ಕವನ ಚೆನ್ನಾಗಿದೆ.