
ಬಿದ್ದ ನೆರಳಿಗೂ
ಜೀವಂತ ಭಾವ
ಎದ್ದ ಕನಸಿಗೂ
ತುಂಬಿರುವ ಜೀವ
ಜೀವ ಭಾವಗಳ
ಉಸಿರೇ ನೆರಳು
ಭಾವ ಎಳೆಗಳ
ಉಸಿರೇ ಹಸಿರು
ನೆರಳು ಹೊರಳುವಾಗ
ಕನಸು ಗರಿ ಬಿಚ್ಚಿ
ಹಾರುವ ಮೋಡವಾಗಿ
ಹನಿಮಳೆಯ ಕರೆದು
ಮುತ್ತಾಗುವುದಂತೆ
ಉಪಕಾರಿ ಒಡನಾಡಿ
ನೆರಳೊಂದು ಜೀವಂತ
ಒಡಲಾಳ ಒಳಭಾವ
ಒಡಲೆಲ್ಲಾ ಕಡಲಾಗಿ
ನೀರೆಲ್ಲಾ ಝರಿಯಾಗಿ
ತುಂಬಿ ಹರಿಯಿತು
ನೆರಳು ಹೊರಳುವಾಗ
ಬೆಳಕು ಪರಿಚಿತ
ಬೆಳಕು ಇರದಾಗ
ನೆರಳು ಅಪರಿಚಿತ.
-ನಾಗರಾಜ ಬಿ.ನಾಯ್ಕ, ಕುಮಟಾ.
ಚೆನ್ನಾದ ಕವನ.. ಚಿತ್ರ ವೂ ಚೆನ್ನಾಗಿದೆ..
ಸೊಗಸಾಗಿದೆ ಕವನ. ಕೊನೆಯ ಸಾಲುಗಳು ಬಹಳ ಚಂದ. ನೆರಳು ಬೆಳಕಿನ ಆಟದೊಳಗೆ ಬದುಕು ಮಿಳಿತ.
ನೆರಳು, ಬೆಳಕಿನ ಆಟದೊಂದಿಗೆ ಜೀವನದ ಆಂತರ್ಯವನ್ನು ಮೇಳೈಸಿದ ಭಾವಪೂರ್ಣ ಕವನ.
ನೆರಳಿಗೂ ನೀಡಿದ ಕವನ ಸುಂದರವಾಗಿದೆ.