ಬೆಳಕು-ಬಳ್ಳಿ

ಕಷ್ಟಗಳ ಜಡಿ ಮಳೆ

Share Button


ಕಷ್ಟವೆಂಬ‌ ಮಳೆಯ ಆ ವಿಧಿ ಸುರಿಸುತ್ತಿದೆ
ಚಿಂತೆಯ ಪ್ರವಾಹಕೆ ಭರವಸೆಯ ನೆಲ ಕುಸಿಯುತ್ತಿದೆ

ಆತಂಕದ ಕಾರ್ಮೋಡ ಬದುಕ ಆವರಿಸುತ್ತಿದೆ
ಅಪನಂಬಿಕೆಯ ಸುಳಿಗಾಳಿ ಬೀಸಿ ಅಶಾಂತಿ ಎಬ್ಬಿಸುತ್ತಿದೆ

ನಂಬಿಕಸ್ಥ ನಾವಿಕನೇ  ಕೈ ಚೆಲ್ಲಿ ಕುಳಿತಾಗಿದೆ
ದಡ ಸೇರಬಹುದು ಎಂಬ ನಿರೀಕ್ಷೆ ಸುಳ್ಳಾಗಿ ಮನ ದುಗುಡದಲ್ಲಿ‌ ಮುಳುಗಿದೆ

ಪರಿಸ್ಥಿತಿಯ ಒತ್ತಡಕೆ ಮುಂದಿನ ದಾರಿ ಗೋಚರಿಸದಾಗಿದೆ
ಜೊತೆಗಿದ್ದ ಸರಿಕರು ದೂರವಾಗುವ ದಿನ ಹತ್ತಿರವಾಗುತ್ತಿದೆ

ಸ್ಪರ್ಧಾತ್ಮಕ ಯುಗದಲ್ಲಿ  ನೀತಿ ನೈತಿಕತೆ ಮೂಲೆ ಗುಂಪಾಗಿದೆ
ಹಳೆಯ ವಿಧಾನಗಳ ನಂಬಿಕೊಂಡ ವ್ಯವಸ್ಥೆ ಹಿಂದೆ ಬೀಳುತ್ತಿದೆ

ಬಂದ ಅವಕಾಶಗಳ ದೂರ ಮಾಡಿಕೊಂಡ ಮನಕೆ ದಿಕ್ಕೇ ತೋಚದಾಗಿದೆ
ಯಾರೋ ಎಸಗಿದ ತಪ್ಪುಗಳಿಗೆ ಯಾರಿಗೋ ಶಿಕ್ಷೆ ದೊರೆಯುತ್ತಿದೆ

ಹೊಣೆ ಯಾರು ಈ ಪರಿಣಾಮಗಳಿಗೆ
ತಲೆ ಕೊಡುವವರು ಯಾರು ಈ ನಿರ್ಧಾರಗಳಿಗೆ
ಗಣನೀಯ ಪ್ರಮಾಣದ ಹಿಂಜರಿಕೆಗೆ ಕಾರಣಗಳೇನು ಎಂದು ಮನ ಅರಸುತ್ತಿದೆ

ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವ ಮಾತುಂಟು ಈ ಜಗದಲಿ
ಬರುವುದೆಲ್ಲಾ ಬರಲಿ ಜೊತೆಗೆ ಆ ದೇವನ ದಯೆಯೊಂದಿರಲಿ ಎಂಬ ನುಡಿಯುಂಟು ಬಳಕೆಯಲಿ

ರಾತ್ರಿ ಕಳೆದು ಹೊಸ ಹಗಲು ಬರುವಂತೆ
ಕವಿದ ಮೋಡ ಕರಗಿ ಹೊಸ ಬೆಳಕು ಮೂಡುವಂತೆ

ನವ ಜೀವನ ನವ ಭಾವ ಒಡಮೂಡಿ ಬರಲಿ
ಸೆಡ್ಡು ಹೊಡೆದು ಸವಾಲುಗಳ ಎದುರಿಸುವಂತಾಗಲಿ

ಶರಣಬಸವೇಶ ಕೆ. ಎಂ

6 Comments on “ಕಷ್ಟಗಳ ಜಡಿ ಮಳೆ

  1. ವಾಸ್ತವ ಜೀವನದ ಕಟು ಸತ್ಯ ನಿಮ್ಮ ಬರಹದಲ್ಲಿ ಮನ ಮುಟ್ಟುವoತೆ ಮೂಡಿ ಬಂದಿದೆ

  2. ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿರುವ ಕವನವು ಚಿಂತನಯೋಗ್ಯವಾಗಿದೆ.

  3. ಸಡ್ಡು ಹೊಡೆದು ಸವಾಲುಗಳ ಎದುರಿಸುವಂತಾಗಲಿ ಎಂಬ ಭರವಸೆಯ ಬೆಳಕು ಎಲ್ಲ ನಿರಾಶೆಗಳನ್ನೂ ಹೊಡದೋಡಿಸಲು ಸಹಕಾರಿಯಾಗಬಹುದು. ಸುಂದರ ಕವಿತೆ.

Leave a Reply to ಮಂಗಳ. ಕೆ. ವಿ. Cancel reply

 Click this button or press Ctrl+G to toggle between Kannada and English

Your email address will not be published. Required fields are marked *