ಬೆಳಕು-ಬಳ್ಳಿ

 ಎಲ್ಲವೂ ಸಾಧ್ಯವಿಲ್ಲಿ

Share Button

ಕಲ್ಲು ಮುಳ್ಳು ಕೊರಕಲು
ತುಂಬಿದೆ ಸಾಗುವ ದಾರಿಯಲ್ಲಿ
ಸುಲಭದಲ್ಲಿ ಸಿಗದು ಗೆಲುವು
ನಮ್ಮ ಈ ಬಾಳಿನಲ್ಲಿ
ಮುಗಿದು ಹೋಗಬಾರದು
ಬದುಕು ಬರೀ ಗೋಳಿನಲ್ಲಿ

ಕಷ್ಟ ಎಂದುಕೊಂಡು ಸುಮ್ಮನಾದರೆ
ಯಾವುದೂ ಅಸಾಧ್ಯವಿಲ್ಲಿ
ಹೊಸತನವನ್ನು ತುಂಬಲು
ಎಲ್ಲವೂ ಸಾಧ್ಯವಿಲ್ಲಿ
ಕಷ್ಟಪಟ್ಟು ಇಷ್ಟಪಟ್ಟು ದಿನವೂ
ದುಡಿದರೆ ಮಾತ್ರ ಗೆಲ್ಲಬಹುದಿಲ್ಲಿ
ಹಣೆಬರಹವ ಶಪಿಸುತ ಕುಳಿತರಿಲ್ಲಿ
ಬದುಕು ಎಂದಿಗೂ ಬದಲಾಗದಿಲ್ಲಿ

ಏನೇ ಬಂದರೂ ಎದೆಗುಂದದೆ
ಎದುರಿಸಿ ನಿಲ್ಲಬೇಕು ಗೆಲ್ಲಬೇಕು
ಕಲ್ಲು ಮುಳ್ಳಿನ ಹಾದಿಯನ್ನೂ
ನಾವು ಹೂವಾಗಿ ಅರಳಿಸಬೇಕು
ಸುರಿಸಿದ ಪ್ರತಿ ಬೆವರ ಹನಿಯು
ಮುತ್ತಾಗಿ ಮರಳಿ ನಮಗೆ ಸಿಗಬೇಕು
ದುಡಿಮೆಯೇ ದೇವರು ಎಂದು ತಿಳಿದು
ಸದಾ ನಾವು ದುಡಿಯಬೇಕು ಬೆಳೆಯಬೇಕು
ಗೆಲುವು ನಲಿವು ಪಡೆಯಬೇಕು
ಯಶಸ್ಸಿನ ಓಟವ ಮುಂದುವರೆಸಬೇಕು

ನಾಗರಾಜ ಜಿ. ಎನ್. ಬಾಡ 

3 Comments on “ ಎಲ್ಲವೂ ಸಾಧ್ಯವಿಲ್ಲಿ

  1. ಜೀವನದ ಹಾದಿಯಲ್ಲಿರುವ ಕಲ್ಲುಮುಳ್ಳುಗಳಿಗೆ ಹೆದರದೆ, ಎದೆಗುಂದದೆ ಮುನ್ನಡೆಯುವ ಛಲ ನಮ್ಮದಾಗಬೇಕೆಂಬ ಸ್ಫೂರ್ತಿಯುತ ಸಾಲುಗಳು ಓದುಗರಿಗೆ ಪ್ರೇರಣಾದಾಯಕವಾಗಿವೆ.

  2. ಮನಸ್ಸನ್ನು ಸಕಾರಾತ್ಮತೆಯಡೆಗೆ ಒಯ್ಯುವಲ್ಲಿ ಕವಿತೆ ಗೆದ್ದಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *