
ಮಕ್ಕಳ ಮೇಲಿರಲಿ ಬೆಟ್ಟದಷ್ಟು ಪ್ರೀತಿ
ತೋರಿಸಿಕೊಳ್ಳಬೇಡಿ ಎಲ್ಲವನ್ನೂ ಒಂದೇ ರೀತಿ
ಅಪ್ಪನೆಂದರೆ ಇರಲಿ ಮಕ್ಕಳಿಗೆ ಭಯ ಭಕ್ತಿ
ಒಂದೇ ಒಂದು ಚೂರು ಮನದೊಳಗೆ ಭೀತಿ
ತೋರಿದ ಪ್ರೀತಿಯು ಮುಳ್ಳಗಾದಿರಲಿ
ಮುಂದಿನ ಬದುಕಿಗೆ ಕತ್ತಲಾಗದಿರಲಿ
ಕಷ್ಟದ ಹಾದಿಯ ಅರಿವು ಜೊತೆಗಿರಲಿ
ಸೋಲನ್ನು ಎದುರಿಸುವುದ ಕಲಿತಿರಲಿ
ಬಾಳೆಂದರೆ ಹೂವಿನ ಹಾಸಿಗೆಯಲ್ಲ
ಕಷ್ಟ ನಷ್ಟ ದುಃಖಗಳೆಲ್ಲ ತುಂಬಿದೆಯಲ್ಲ
ಸುಖದಲ್ಲಿ ಬದುಕುವುದು ಸಾಧನೆಯಲ್ಲ
ಕತ್ತಲು ಕಳೆಯಲು ಮುಂದೆ ಬೆಳಕಿದೆಯಲ್ಲ
ನಾಳೆ ಏನೆಂಬುದು ಯಾರಿಗೂ ಗೊತ್ತಿಲ್ಲ
ಬದುಕಿನ ಮರ್ಮವನ್ನೆಲ್ಲ ಅರಿತವರಿಲ್ಲ
ಸೆಣಸಾಟಕ್ಕೆಂದೂ ಇಲ್ಲಿ ಕೊನೆಯೇ ಇಲ್ಲ
ಬದುಕನ್ನು ಪ್ರೀತಿಸುವುದ ಕಲಿಯಬೇಕೆಲ್ಲ
ಗುರು ಹಿರಿಯರ ಮೇಲಿರಲಿ ಗೌರವ ಭಕ್ತಿ
ಕಣ ಕಣದಲ್ಲೂ ತುಂಬಿರಲಿ ದೇಶಭಕ್ತಿ
ಬಳಸುವುದ ಕಲಿಸಬೇಕು ಬಾಳಲ್ಲಿ ಯುಕ್ತಿ
ಇರಬೇಕು ಎಲ್ಲವನ್ನೂ ಎದುರಿಸುವ ಶಕ್ತಿ
ಬದುಕೆಂದರೆ ಸೋಲು ಗೆಲುವವಷ್ಟೇ ಅಲ್ಲ
ನೋವು ನಲಿವಲ್ಲೇ ಮುಳುಗೇಳುವುದಲ್ಲ
ಬಂದುದೆಲ್ಲವ ಎದುರಿಸಿ ನಿಲ್ಲಲೇ ಬೇಕಿಲ್ಲಿ
ಎಲ್ಲವನ್ನೂ ಮೀರಿ ಬದುಕಿ ತೋರಿಸಬೇಕಿಲ್ಲಿ
ಗುಂಡಿಗೆಯನ್ನು ಗಟ್ಟಿ ಮಾಡಿಕೊಳ್ಳಬೇಕಿಲ್ಲಿ
ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
ಕವನ ಚೆನ್ನಾಗಿ ದೆ ಸಾರ್
ಧನ್ಯವಾದಗಳು
ಧನ್ಯವಾದಗಳು
ಮಕ್ಕಳಿಗೆ ನೀಡಬೇಕಾದ ಸಂಸ್ಕಾರಗಳನ್ನು ವಿವರಿಸಲಾಗಿದೆ ಇಲ್ಲಿ. Nice
ಧನ್ಯವಾದಗಳು
ಧನ್ಯವಾದಗಳು
ಉತ್ತಮ ಬೋಧನೆ….
ಜೀವನದ ಮೌಲ್ಯಗಳನ್ನು ಅಚ್ಚುಕಟ್ಟಾಗಿ ತಿಳಿಹೇಳುವ ಚಂದದ ಕವನ
ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಹಸನಾಗಿಸುವ ಕವಿತೆ.