ಬೆಳಕು-ಬಳ್ಳಿ

ಬದುಕೆಂದರೆ..

Share Button

ಮಕ್ಕಳ ಮೇಲಿರಲಿ ಬೆಟ್ಟದಷ್ಟು ಪ್ರೀತಿ
ತೋರಿಸಿಕೊಳ್ಳಬೇಡಿ ಎಲ್ಲವನ್ನೂ ಒಂದೇ ರೀತಿ
ಅಪ್ಪನೆಂದರೆ ಇರಲಿ ಮಕ್ಕಳಿಗೆ ಭಯ ಭಕ್ತಿ
ಒಂದೇ ಒಂದು ಚೂರು ಮನದೊಳಗೆ ಭೀತಿ

ತೋರಿದ ಪ್ರೀತಿಯು ಮುಳ್ಳಗಾದಿರಲಿ
ಮುಂದಿನ ಬದುಕಿಗೆ ಕತ್ತಲಾಗದಿರಲಿ
ಕಷ್ಟದ ಹಾದಿಯ ಅರಿವು ಜೊತೆಗಿರಲಿ
ಸೋಲನ್ನು ಎದುರಿಸುವುದ ಕಲಿತಿರಲಿ

ಬಾಳೆಂದರೆ ಹೂವಿನ ಹಾಸಿಗೆಯಲ್ಲ
ಕಷ್ಟ ನಷ್ಟ ದುಃಖಗಳೆಲ್ಲ ತುಂಬಿದೆಯಲ್ಲ
ಸುಖದಲ್ಲಿ ಬದುಕುವುದು ಸಾಧನೆಯಲ್ಲ
ಕತ್ತಲು ಕಳೆಯಲು ಮುಂದೆ ಬೆಳಕಿದೆಯಲ್ಲ

ನಾಳೆ ಏನೆಂಬುದು ಯಾರಿಗೂ ಗೊತ್ತಿಲ್ಲ
ಬದುಕಿನ ಮರ್ಮವನ್ನೆಲ್ಲ ಅರಿತವರಿಲ್ಲ
ಸೆಣಸಾಟಕ್ಕೆಂದೂ ಇಲ್ಲಿ ಕೊನೆಯೇ ಇಲ್ಲ
ಬದುಕನ್ನು ಪ್ರೀತಿಸುವುದ ಕಲಿಯಬೇಕೆಲ್ಲ

ಗುರು ಹಿರಿಯರ ಮೇಲಿರಲಿ ಗೌರವ ಭಕ್ತಿ
ಕಣ ಕಣದಲ್ಲೂ ತುಂಬಿರಲಿ ದೇಶಭಕ್ತಿ
ಬಳಸುವುದ ಕಲಿಸಬೇಕು ಬಾಳಲ್ಲಿ ಯುಕ್ತಿ
ಇರಬೇಕು ಎಲ್ಲವನ್ನೂ ಎದುರಿಸುವ ಶಕ್ತಿ

ಬದುಕೆಂದರೆ ಸೋಲು ಗೆಲುವವಷ್ಟೇ ಅಲ್ಲ
ನೋವು ನಲಿವಲ್ಲೇ ಮುಳುಗೇಳುವುದಲ್ಲ
ಬಂದುದೆಲ್ಲವ ಎದುರಿಸಿ ನಿಲ್ಲಲೇ ಬೇಕಿಲ್ಲಿ
ಎಲ್ಲವನ್ನೂ ಮೀರಿ ಬದುಕಿ ತೋರಿಸಬೇಕಿಲ್ಲಿ
ಗುಂಡಿಗೆಯನ್ನು ಗಟ್ಟಿ ಮಾಡಿಕೊಳ್ಳಬೇಕಿಲ್ಲಿ

ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
 

9 Comments on “ಬದುಕೆಂದರೆ..

  1. ಮಕ್ಕಳಿಗೆ ನೀಡಬೇಕಾದ ಸಂಸ್ಕಾರಗಳನ್ನು ವಿವರಿಸಲಾಗಿದೆ ಇಲ್ಲಿ. Nice

  2. ಜೀವನದ ಮೌಲ್ಯಗಳನ್ನು ಅಚ್ಚುಕಟ್ಟಾಗಿ ತಿಳಿಹೇಳುವ ಚಂದದ ಕವನ

  3. ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಹಸನಾಗಿಸುವ ಕವಿತೆ.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *