ಬೆಳಕು-ಬಳ್ಳಿ

ಕಾಡುವ ಕವಿತೆ

Share Button

ಮನವ ಕಾಡುವುದ ಅರಿತೆ
ಮನದೊಳಗೆ ಅಡಗಿ ಕುಳಿತೆ
ಸಮಯದ ಪರಿವೆಯ ಮರೆತೆ
ಒಳಗೊಳಗೆ ದಿನವೂ ಅವಿತೆ

ತುಂಬುವುದು ಹೊಸ ಬಯಕೆ
ಮನದಿ ಭಾವನೆಗಳ ಹೊದಿಕೆ
ಸಿಹಿ ಸಿಹಿ ನೆನಪುಹಳ ಕಾಣಿಕೆ
ಸಾಗಿದೆ ನಿತ್ಯವೂ ಹೊಸ ಕಲಿಕೆ

ತಂಗಾಳಿ ಸೋಕಿ ಹೋದಂತೆ
ಮನದಿ ಬೆಳದಿಂಗಳು ಚೆಲ್ಲಿದಂತೆ
ಭಾವನೆಗಳ ಗುಚ್ಛ ಅರಳಿದಂತೆ
ಆಗಸದಿ ಮೂಡಿದ ಚಂದ್ರಿಕೆಯಂತೆ

ಬದುಕಿನೊಳಗೆ ಏನೋ ಹರುಷ
ಸಂಭ್ರಮವು ಪುಟಿದೇಳುತ್ತಿದೆ
ಸಾಗರದಿ ಮೂಡುವ ಅಲೆಯಂತೆ
ಪುಳಕವ ನೀಡುತ್ತಿದೆ ಪ್ರತಿ ನಿಮಿಷ

ಕವಿತೆಯು ಹುಟ್ಟುವ ಈ ಸಮಯವು
ಮನದೊಳಗೆ ಅಪರಿಮಿತ ಹರುಷವು
ಏನೋ ಹೊಸ ಸಂಚಲನ ಒಳಗೊಳಗೆ
ಬಿಡುಗಡೆಯ ಭಾವ ಈ ಭಾವನೆಗಳಿಗೆ

ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.

7 Comments on “ಕಾಡುವ ಕವಿತೆ

  1. ಕವಿತೆ ಹುಟ್ಟಿದ ಸಮಯ
    ಬಹುಶಃ ಛಂದಸ್ಸೂ ಆಗಲೇ ಹುಟ್ಟಿಬಿಟ್ಟಿರಬೇಕು.

    ತಾಳ, ಲಯಬದ್ಧ ಪದ್ಯಪಾದ. ಅರ್ಥಪೂರ್ಣ ಆವರಣ
    ಓದುವಾಗ ಸರಳ ಎನಿಸಿದರೂ ಬರೆಯುವುದು ಸರಳವಲ್ಲ.

    ಹಾಗೆನ್ನುವವರು ಒಮ್ಮೆ ಬರೆದು ನೋಡಲಿ, ತಿಳಿಯವುದು.
    ಅಭಿನಂದನೆ ಮತ್ತು ಧನ್ಯವಾದ ಸರ್‌, ನಿಮ್ಮ ಕವಿತೆಗಳ ಛಂದೋಲಯವೇ
    ವಿಸ್ಮಯಕಾರಿ ಜೊತೆಗೆ ಆಹ್ಲಾದಕಾರಿ.

  2. ನವನವೀನ ಭಾವನೆ, ಹೊಸಹೊಸ ಕಲಿಕೆ, ನಿತ್ಯನೂತನವೆನಿಸುವ ಕವಿತೆಗಳು ಹೀಗೆಯೇ ಹುಟ್ಟಿ ಮನಕೆ ಮುದ ನೀಡುತಿರಲಿ…ಚೆನ್ನಾಗಿದೆ.

  3. ಕವಿತೆ ಹುಟ್ಟುವ ಸಮಯದ ಭಾವಪೂರ್ಣ ಅನಾವರಣವಾಗಿರುವ ಕವನ ಚೆನ್ನಾಗಿದೆ.

  4. ಕವಿತೆ ಹುಟ್ಟುವ ಸಮಯದಲ್ಲಿ ಮನದಲ್ಲುಂಟಾಗುವ ಭಾವನೆಗಳನ್ನು ಚಂದದಿಂದ ಸೆರೆಹಿಡಿದಿಡಲಾಗಿದೆ.

Leave a Reply to ವಿನಯಾ ಎನ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *