ಅರಿಯಬೇಕೆಲ್ಲರು.

ಅವನಾಡಿಸಿದಂತೆ
ಆಡುತಿರಬೇಕು ನಾವೆಲ್ಲರು.
ಇರುವುದೆಲ್ಲವ ಬಿಟ್ಟು
ಈಶ್ವರನೆಡೆಗೆ ನಡೆಯಬೇಕೆಲ್ಲರು.
ಉಸಿರು ನಿಲ್ಲುವ ಮುಂಚೆಯೇ
ಊರ ಜನ ಕೊಂಡಾಡಬೇಕೆಲ್ಲರು.
ಋಣತ್ರಯಗಳ ತೀರಿಸಿಯೇ
ಎಲ್ಲವ ತೊರೆದು ನಡೆಯಬೇಕೆಲ್ಲರು.
ಏನಿದ್ದರೂ ಏನಿಲ್ಲದವರಂತೆ
ಐಹಿಕ ಸುಖಿಗಳಾಗಬೇಕೆಲ್ಲರು.
ಒಂದೊಂದು ಕ್ಷಣವ ಮಕ್ಕಳಂತೆ
ಓಜಸ್ಸು ಮೊಗದಿ ಬೆರೆಯಬೇಕೆಲ್ಲರು.
ಔಚಿತ್ಯಪೂರ್ಣ ಮಾತುಗಳೆಲ್ಲರೂ
ಅಂತಃಕರಣದಿ ಅರಿಯಬೇಕೆಲ್ಲರು.
–ಶಿವಮೂರ್ತಿ.ಹೆಚ್, ದಾವಣಗೆರೆ.
ಹೌದು, ಇರುವುದೆಲ್ಲವ ಬಿಟ್ಟು ಹೊರಡಬೇಕೆಲ್ಲರು. ಈ ತತ್ವವನ್ನು ಅರಿತರೆ ಬದುಕು ಎಷ್ಟು ಸುಂದರ! ಇಹಪರದ ಸತ್ಯವರುಹುವ ಸುಂದರ ಕವನ ಸರ್
……ಶುಭಲಕ್ಷ್ಮಿ
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು
ಹೇಳುವುದ ಕಹಿ ಎನಿಸಿದರೂ ಅದು ಸತ್ಯ ಸುಂದರ ಕವನ ಸಾರ್
ಸೊಗಸಾಗಿದೆ ಸರ್. ಈ ಸಲದ ಸುರಹೊನ್ನೆ ವಿಶೇಷವಾಗಿದೆ.
ಬದುಕಿನ ತತ್ತ್ವ – ಶಾಸ್ತ್ರವೇ ಎಲ್ಲರಲೂ ಬರೆಸಿಕೊಂಡಿದೆ.
ಖುಷಿಯಾಯಿತು. ಸುರಹೊನ್ನೆಯು ನಿಜಕೂ ಸುರರೇ
ಸಂಭ್ರಮಿಸುವಷ್ಟು ಸುಗಂಧ ಹರಡುತ್ತಾ ಊರ್ಧ್ವಮುಖಿಯಾಗುತಿದೆ.
ನಾವದರ ಜೊತೆಗೂ ಮೇಲಕೇರುತ್ತಿದ್ದೇವೆ. ಬರೆಯುವವರಿಗೆ ಮತ್ತು
ಓದುವವರಿಗೆ ಹಾಗೂ ಬರೆಯುವವರೂ ಓದುವ ಮಹನೀಯರಿಗೆ
ಚಾಚಿಟ್ಟ ಏಣಿಯಾಗಿದೆ. ಇನ್ನೇಕೆ ತಡ, ಮನಸಲೇ ಏರುತಾ ಹಾರೋಣ.
ಕವಿತೆಯಲ್ಲಿ ಒಂಚೂರು “ವರದಿತನ” ಇಣುಕಿದೆ. ಅದು ಕಾವ್ಯಮಯ ಅಥವಾ
ಕಾವ್ಯದ ಮೈ ಪಡೆದರೆ ಇನ್ನಷ್ಟು ಸೊಗಸಾದೀತು. ನಿಮ್ಮ ಕಾವ್ಯಧಾರೆ
ಹೀಗೆಯೇ ಹರಿಯಲಿ; ಸಹೃದಯ ಸಡಗರಿಸಲಿ. ವಂದನೆಗಳು.
ಚೆನ್ನಾಗಿದೆ
ಬದುಕಿನ ಸಾರವನ್ನು ತಿಳಿಸುವ ಚಂದದ ಕವನ.