ಕಾವ್ಯ ಭಾಗವತ 38: ಅಜಾಮಿಳ

Share Button

ಷಷ್ಠ ಸ್ಕಂದ – ಅಧ್ಯಾಯ-1
ಅಜಾಮಿಳ

ವೇದ ಶಾಸ್ರ್ತಾದಿಗಳ ಅಭ್ಯಸಿಸಿ
ಆಚಾರಶೀಲ ವಿಪ್ರ ಅಜಾಮಿಳ
ಪ್ರಾರಬ್ಧ ಕರ್ಮದ ಫಲವೋ
ಎಂಬಂತೆ
ಕಾಮೋನ್ಮಾದದ ಅಮಲಿನಲಿ
ತನ್ನೆಲ್ಲ ಕುಲ, ಜಾತಿ, ಧರ್ಮದ
ಹಿರಿಮೆಯನ್ನೆಲ್ಲ ಮರೆತು
ಮಾತಾ, ಪಿತೃ, ಪತ್ನಿಯರೆಲ್ಲರ
ಪ್ರೀತಿ ವಿಶ್ವಾಸಗಳ ಸಮಾಧಿ ಕಟ್ಟಿ
ಶೂದ್ರ ದಾಸಿಯೊಡನೆ
ಕಾಮಕೇಳಿಯಾಟದಲಿ
ಜೀವ, ಜೀವನವನ್ನೆಲ್ಲ ಸವೆಸಿ
ಹತ್ತು ಮಕ್ಕಳ ಪಡೆದು
ವೃದ್ಧಾಪ್ಯದಲಿ
ದಣಿದ ಬಸವಳಿದ ಜರ್ಜರಿತ ದೇಹದ
ಅಜಮಿಳಗೆ
ಅಂತಿಮ ಕ್ಷಣ ಬಂದಂತೆನಿಸಿ
ಯಮದೂತರು ಮೃತ್ಯು ಪಾಶವ
ಬೀಸಿದ ಘಳಿಗೆಯಲಿ
ಕಿರಿಯ ಮುದ್ದಿನ ಮಗು
ನಾರಾಯಣನ
ನಾಮ ಕರೆದರಘಳಿಗೆಯಲಿ
ಅಜಾಮಿಳನ ಕುತ್ತಿಗೆಗೆ
ಬಿಗಿದ ಯಮಪಾಶ
ಸಡಿಲವಾಗಿ
ಪಾಶದಿಂ ಬಿಡುಗಡೆಯಾದ ಪರಿ
ಹರಿನಾಮ ಸ್ಮರಣೆಯ
ಅಗಾಧ ಮಹಿಮೆಯೇ ಸರಿ

ನಿಜ, ನಿಜಪಶ್ಚಾತಾಪದಿಂ
ಗೈದ ಪಾಪಕರ್ಮಗಳಿಗೆಲ್ಲ
ಪರಿತಪಿಸಿ
ಪ್ರಾಯಶ್ಚಿತ್ತವಂ ಗೈದು
ನಾರಾಯಣ ಸ್ಮರಣೆ ಮಾಡ್ಪ
ಎಲ್ಲ ಪಾಪಿಗಳ
ಪಾಪ ತೊಳೆದು
ಮುಕ್ತಿ ಮಾರ್ಗವ
ತೋರ್ಪ ನಾರಾಯಣ

ಈ ಜಗದ ಸೃಷ್ಟಿ, ಸ್ಥಿತಿ, ಲಯಗಳೆಲ್ಲದರ
ಕಾರಣ ಕರ್ತ,
ವಸ್ರ್ತದ ಹಾಸುಹೊಕ್ಕಾಗಿಹ
ನೂಲಿನಂತೆ
ಸರ್ವತ್ರ ವ್ಯಾಪಿಸಿ
ಸರ್ವ ಪ್ರಾಣಿಗಳ
ಅಂತರಾತ್ಮ
ಅವನೊಬ್ಬನೇ ನಾರಾಯಣ

ಆ ನಾರಾಯಣ ನಾಮಸ್ಮರಣೆಯೇ
ಭಕ್ತಿಯೋಗ, ಅದೇ ಭಾಗವತ ಧರ್ಮ
ಎಲ್ಲ ಜೀವಿಗಳಿಗೊಂದು
ಜೀವನ ಧರ್ಮ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42217
(ಮುಂದುವರಿಯುವುದು)

-ಎಂ. ಆರ್.‌ ಆನಂದ, ಮೈಸೂರು

6 Responses

  1. ಭಗವಂತ ನಾಮ ಸ್ಮರಣೆಯ ಶಕ್ತಿ ಅಜಾಮಿಳನ ಪಾತ್ರದ ಮೂಲಕ ಅನಾವರಣ ಮಾಡಿಸಿರುವ ರೀತಿ…ಚೆನ್ನಾಗಿದೆ ಸಾರ್

  2. ಭಗವಂತನ ನಾಮ ಸ್ಮರಣೆಯ ಶಕ್ತಿ ಅಜಾಮಿಳನ ಪಾತ್ರದ ಮೂಲಕ ಅನಾವರಣ ಮಾಡಿಸಿರುವ ರೀತಿ…ಚೆನ್ನಾಗಿದೆ ಸಾರ್

  3. MANJURAJ H N says:

    ಜೀವನಧರ್ಮದ ಸವಿವರ ಕವಿತೆಗೆ ಧನ್ಯವಾದ ಸರ್.‌
    ಮುಂದುವರೆಯಲಿ

  4. ಪದ್ಮಾ ಆನಂದ್ says:

    ಅಜಾಮಿಳನ ಕುರಿತಾಗಿ ಭಾಗವತದ ಈ ಭಾಗವೂ ಚೆನ್ನಾಗಿದೆ.

  5. ನಯನ ಬಜಕೂಡ್ಲು says:

    ಚೆನ್ನಾಗಿದೆ

  6. ಶಂಕರಿ ಶರ್ಮ says:

    ಅಜಮಿಳನ ಕಥೆಯನ್ನು ರಸವತ್ತಾಗಿ, ಅರ್ಥಗರ್ಭಿತವಾಗಿ ನಿರೂಪಿಸಿದ ಕಾವ್ಯ ಭಾಗವತವು ಬಹಳ ಚೆನ್ನಾಗಿ ಮೂಡಿಬಂದಿದೆ.

Leave a Reply to MANJURAJ H N Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: