ಹುಡುಕ ಬೇಕೆಂದಿದ್ದೆ……..

ಕವಿತೆಗಳ
ಹುಡುಕಬೇಕೆಂದಿದ್ದೆ
ಆಗಸದ ತಾರೆಗಳಲ್ಲಿ……
ಸಾಲುಗಳ
ಬರೆಯಬೇಕೆಂದಿದ್ದೆ
ತೆರೆಗಳ ಅಲೆಗಳಲ್ಲಿ …..
ಮೋಡಗಳ
ಮಾಲೆ ಮಾಡಬೇಕಿಂದಿದ್ದೆ
ತಂಗಾಳಿ ಬೀಸುವಲ್ಲಿ…….
ಸುಮ್ಮನೆ
ಕೂರಬೇಕೆಂದಿದ್ದೆ
ಕಡಲ ಮಡಿಲಲ್ಲಿ ……..
ಮಾತುಗಳ
ಮೌನದಿ ಅಡಗಿಸಬೇಕೆಂದಿದ್ದೆ
ಕಳೆದು ಹೋಗುವಲ್ಲಿ….
ಹೂಗಳ
ನೋಡುತಾ ನಿಲ್ಲಬೇಕೆಂದಿದ್ದೆ
ಬೇರಿನ ಸಾರದಲ್ಲಿ ……
ಸಿಕ್ಕ ಭಾವಗಳ
ಮಗುವೊಂದು ನಕ್ಕಿತು
ಪೂರ್ಣ ಅರ್ಥದಲ್ಲಿ…….
–ನಾಗರಾಜ ಬಿ.ನಾಯ್ಕ , ಕುಮಟಾ.
ಸರಳ ಸುಂದರ ಕವನ ಸಾರ್
ಧನ್ಯವಾದಗಳು
ಚಂದದ ಕವನ
ಧನ್ಯವಾದಗಳು ತಮ್ಮ ಓದಿಗೆ
ಚೆನ್ನಾಗಿದೆ
ಧನ್ಯವಾದಗಳು.
ಮಗುವಿನ ನಗುವಿನಲ್ಲಿ ನಿಮ್ಮ ಅಂತರಂಗದ ಬಯಕೆಗಳೆಲ್ಲಾ ಈಡೇರಿದ್ದು ಮುದ ನೀಡಿತು.
ಧನ್ಯವಾದಗಳು
ಸರಳ, ಸುಂದರ, ಭಾವಪೂರ್ಣ ಕವನ… ಭಾವಗಳ ಮಗು ನಕ್ಕ ಪರಿ ಅದ್ಭುತ!
ಧನ್ಯವಾದಗಳು