ಕಾವ್ಯ ಭಾಗವತ 34: ಜಡಭರತ – 1

34. ಪಂಚಮ ಸ್ಕಂದ
ಅಧ್ಯಾಯ – 2
ಜಡಭರತ – 1
ಕರ್ಮಾಂತರ ಫಲದಿಂ
ಜಿಂಕೆಯಾಗಿ ಜನಿಸಿದ
ಭರತಂಗೆ
ಈ ಜನುಮದಲ್ಲಾದರೂ
ನಿರ್ಮೋಹಿಯಾಗಿ
ಭಗವತಾರಾಧನೆ
ಮಾಡಬೇಕೆಂದೆನಿಸಿ
ಪೂರ್ವಜನ್ಮದ ಭರತನಿದ್ದ
ಸಾಲಿಗ್ರಾಮ ಕ್ಷೇತ್ರವ ತಲುಪಿ
ಏಕಾಂಗಿಯಾಗಿ
ದೇಹಾವಸಾನದ ನಿರೀಕ್ಷೆಯಲಿ
ಕೇವಲ ಪ್ರಾಣಧಾರಣೆಯ
ಸಲುವಾಗಿ
ತರಗೆಲೆಯ ಸೇವಿಸಿ
ನದಿಯಲಿ ಮುಳುಗಿ
ಪಶುಜನ್ಮವ ತ್ಯಜಿಸಿದ ಭರತ
ಮರುಜನ್ಮದಲಿ
ಬ್ರಾಹ್ಮಣನಾಗಿ ಜನಿಸಿದರೂ
ಏಕಾಂಗಿ, ಮೊದ್ದು ಹುಡುಗ
ಜಡಭರತನೆಂದ
ಅನ್ವರ್ಥನಾಮದಲಿ
ಇದ್ದವಗೆ,
ಉಪನಯನ, ಸಂಸ್ಕಾರದ ನಂತರದಲಿ
ಪೂರ್ವ ಜನ್ಮ ಸ್ಮರಣೆಯಾಗಿ
ರಾಜರ್ಶಿಯಾಗಿ, ಭಾಗವತ
ಶ್ರೇಷ್ಟನಾಗಿ
ಪಶುಮೋಹದಿಂ, ಪಶುವಾಗಿ ಜನಿಸಿ,
ಕರ್ಮಾಂತರ ಸವೆಸಿ,
ಬ್ರಾಹ್ಮಣ ಜನ್ಮ ಪಡೆದುದರಿವಾಗಿ
ಈ ಜನುಮದಲಿ, ಕೇವಲ
ಭಗವಂತನಾರಾಧನೆಯೇ
ಜೀವನವಾಗಿ
ಮಿಕ್ಕೆಲ್ಲ ಲೌಕಿಕ ಕ್ರಿಯೆಯ ಮರೆತು
ಎಲ್ಲ ಮೋಹ, ಪಾಶ ವಿಚಾರಗಳ ತ್ಯಜಿಸಿ
ಭಗವತ್ ಧ್ಯಾನದಲಿ
ಮುಳುಗಿದ ಭರತ
ಲೋಕಕ್ಕೆ ಜಡಭರತನಾದ
ಹರಿಸಂಕಲ್ಪವೇ ಸರಿ,
ಅಂತರ್ಯೋಗಿ ಭರತ
ಎಲ್ಲರ ಪಾಲಿಗೆ
ಕೊಳಕು ಬ್ರಾಹ್ಮಣ,
ದೇಹದಂಡಿಸಿ ದುಡಿದರೂ
ಕೊಟ್ಟ, ಹಳಸನ್ನ, ಅಕ್ಕಿನುಚ್ಚು
ಹಿಂಡಿಯಂ ತಿಂದೇ
ದಷ್ಟಪುಷ್ಟ ಜಡಭರತ
ಸಾಣಿಯಿಕ್ಕದ ಮಹಾರತ್ನ
ಅದ್ವಿತೀಯ ಬ್ರಹ್ಮತೇಜವ
ಗೌಪ್ಯವಾಗಿಟ್ಟುಕೊಂಡ
ಹರಿಪ್ರೇಮಿ
ಜಡಭರತ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42085
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭರತನ ಜನ್ಮಾಂತರ ಕಥೆ.. ಕಾವ್ಯ ಭಾಗವತ ದಲ್ಲಿ ಚೆನ್ನಾಗಿ ಬಂದಿದೆ.. ಸಾರ್
ಚೆನ್ನಾಗಿದೆ
ಜಡಭರತನ ಕಥೆಯು ಯಥಾವತ್ತಾಗಿ, ಅತ್ಯಂತ ಸುಂದರವಾಗಿ ಮೂಡಿಬಂದಿದೆ…ಧನ್ಯವಾದಗಳು ಸರ್.
ಜಡಭರತನ ಜನ್ಮಜನ್ಮಾತರದ ಕಥೆ ಸಂಕ್ಷಿಪ್ತ ಕಾವ್ಯರೂಪದಲ್ಲಿ ಸರಳವಾಗಿ ನಿರೂಪಿಸಲ್ಪಟ್ಟಿದೆ.
ಪ್ರಕಟಿಸಿದ “ಸುರಹೊನ್ನೆ” ಗೂ, ಓದಿ ಪ್ರತಿಕ್ರಿಯಿಸಿದ ಸಾಹಿತ್ಯಾಸಕ್ತರಿಗೂ ವಂದನೆಗಳು