ವಿಶೇಷ ದಿನ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲೇ ವಿನೂತನ ಪ್ರಯೋಗ

Share Button

ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದೇ ಮೊದಲ ಬಾರಿಗೆ ಯೋಗ ದಿನಾಚರಣೆಗೆ ಮಹತ್ವ ನೀಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ ಎಂದು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿ. ನಾಗೇಶ್ ಬೆಟ್ಟಕೋಟೆ ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಯೋಗೋತ್ಸವದ ಅಂಗವಾಗಿ ಮಹಾ ಕವಯತ್ರಿ ಡಾ ಲತಾ ರಾಜಶೇಖರ್ ಉದ್ಯಮಿ ಎಂಕೆ ಪೋತರಾಜ್ ಶಿಕ್ಷಣ ತಜ್ಞೆ ಪ್ರೊ. ಪದ್ಮಿನಿ ಹೆಗಡೆ ಅವರನ್ನು ಸಾಂಕೇತಿಕವಾಗಿ 70 ರಲ್ಲೂ 20 ರ ಉತ್ಸಾಹದಿಂದ ಇರುವ ಸ್ವಾಸ್ಥ್ಯ ಸಾಧಕರು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಸಾಹಿತಿಗಳಿಗೆ, ಸಮ್ಮೇಳನಗಳಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ ಪರಿಷತ್ತಿನಲ್ಲಿ ವಿನೂತನವಾದ ವಿಭಿನ್ನ ಕಾರ್ಯಕ್ರಮ ಮಾಡಿರುವುದರಿಂದ ಪರಿಷತ್ತು ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇಡೀ ಕರ್ನಾಟಕದ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇಂತಹ ಪ್ರಯೋಗ ಇದೆ ಮೊದಲು ಎಂದರಲ್ಲದೆ ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅವರು ಯೋಗದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ದೇಹ ಮತ್ತು ಮನಸ್ಸಿನ ವಿಗ್ರಹವನ್ನು ಸಾಧಿಸಲು ಸಾಧ್ಯ ಎಂಬುದನ್ನು ಸಾಬೀತು ಪಡಿಸಿದಂತಾಗುತ್ತದೆ ಎಂದರು. ಮುಖ್ಯ ಅತಿಥಿ ಸಮಾಜಸೇವಕರಾದ ಡಾ. ಕೆ ರಘುರಾಂ ವಾಜಪೇಯಿ ಅವರು ಅಂದಿನ ಮಹಾರಾಜರಿಂದ ಹಿಡಿದು ಜನಸಾಮಾನ್ಯರವರೆಗೂ ಯೋಗ ಎಂಬುದು ನಮ್ಮ ಭಾರತದ ಭವ್ಯ ಪರಂಪರೆಯಲ್ಲಿ ಹಾಸುಹೊಕ್ಕಾಗಿ ನಡೆದುಕೊಂಡು ಬಂದಿದೆ ಇಡೀ ವಿಶ್ವದಾದ್ಯಂತ ಅದು ತನ್ನದೇ ಆದ ಖ್ಯಾತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಸಂಸ್ಕೃತ ವಿದ್ವಾಂಸರಾದ ಡಾ ಕೆ ಲೀಲಾ ಪ್ರಕಾಶ್ ಅವರು ಮಾತನಾಡುತ್ತಾ ಯೋಗ ಕಲಿತವನು ಕ್ಷೇಮವಾಗಿ ಇರಲು ಸಾಧ್ಯ. ಯೋಗದಿಂದ ಮೈ ಮನಸ್ಸುಗಳು ಹಗುರಾಗಿ ಪ್ರಫುಲ್ಲತೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು .
ಸನ್ಮಾನಿತರ ಪರವಾಗಿ ಮಾತನಾಡಿದ ಡಾ. ಲತಾ ರಾಜಶೇಖರ್ ಅವರು ಹಲವಾರು ವರ್ಷಗಳಿಂದ ನಾನು ಯೋಗ ಮಾಡುತ್ತಿರುವುದರಿಂದ ನನ್ನ ಆರೋಗ್ಯ ಸದೃಢವಾಗಿದ್ದು ಮಾನಸಿಕವಾಗಿ ನೆಮ್ಮದಿಯಾಗಿರಲು ಉಪಯುಕ್ತವಾಗಿದೆ. ಪ್ರತಿನಿತ್ಯ ಯೋಗ ಮಾಡಿ ಸಬಲಳಾಗಿದ್ದೇನೆ. ಯೋಗದಿಂದ ರೋಗ ಮುಕ್ತರಾಗಬಹುದು ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮ.ನ. ಲತಾ ಮೋಹನ್, ಸದಸ್ಯರುಗಳಾದ ಕೌಸಲ್ಯ, ಪದ್ಮಾ ಆನಂದ್, ಸುಮತಿ ಸುಬ್ರಮಣ್ಯ, ಹೇಮಲತಾ ಕುಮಾರಸ್ವಾಮಿ, ಜಿ ಕೆ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

-ಮ. ನ. ಲತಾ ಮೋಹನ್‌, ಮೈಸೂರು

4 Comments on “ಕನ್ನಡ ಸಾಹಿತ್ಯ ಪರಿಷತ್ತಿನಲ್ಲೇ ವಿನೂತನ ಪ್ರಯೋಗ

  1. ಉತ್ತಮವಾದ ಕಾರ್ಯಕ್ರಮ, ಹಾರ್ದಿಕವಾದ ಆಪ್ತ ವರದಿ. ಧನ್ಯವಾದಗಳು.

    ಹಿರಿಯರನು ನೋಡಿ ಬಹಳ ದಿನಗಳಾಗಿದ್ದವು. ಚಿತ್ರಗಳ ಮೂಲಕ ನೋಡುವಂತಾಯಿತು.

  2. ವಿಶೇಷ ಕಾರ್ಯಕ್ರಮವೊಂದರ ಕೂಲಂಕುಷ ವರದಿಯು ಅತ್ಯಂತ ಆಪ್ತವಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *