ವಿಶೇಷ ದಿನ

ನವೆಂಬರ್ ನೆನಪು !

Share Button


ಕನ್ನಡ ನನಗೆ ಅನ್ನ, ನನ್ನಂಥ ಎಷ್ಟೋ ಮಂದಿಗೂ;
ಆದರೆ ಎಲ್ಲರಿಗೂ ಅಲ್ಲ
ಇದು ಸುಡು-ವಾಸ್ತವ, ಏಕೆಂದರಿದು ಪ್ರಾ-ದೇಶಿಕ
ಇಂಗ್ಲಿಷಂತಲ್ಲ; ಅದು ಜಗತ್ತಿನ ಬೆಲ್ಲ !

ಕನ್ನಡ ನನ್ನ ಕರುಳು ಮತ್ತು ಹೃದಯದ ಭಾವ
ನಲ್ಲೆಗಿದ್ದಂತೆ ನಲ್ಲ; ವೀಣೆಯ ಸೊಲ್ಲ
ಏನು ಹೇಳಲೂ ಸಲೀಸು, ಹಬೆಯಾಡುವ ಅನ್ನ
ತುಪ್ಪದ ಜೊತೆ ತಿಳಿಸಾರು ಕಲೆಸು !

ಕನ್ನಡ ಸಹಸ್ರಾರು ವರುಷಗಳ ಪ್ರಾಚೀನ ಚಿನ್ನ
ಹಾಗಂತ ಸುಮ್ಮನೆ ಬಡಬಡಿಸುವುದಲ್ಲ;
ಈ ಕಾಲಕೆ, ವಿಜ್ಞಾನ ತಂತ್ರಜ್ಞಾನಕೆ ನುಡಿಯನ್ನ
ಹದಗೊಳಿಸಿ ಬೆಳೆಸು, ನೀನಾಗ ರನ್ನ ಚೆನ್ನ !

ಕನ್ನಡ ಬರೀ ಭಾಷೆಯಲ್ಲ, ತಾಯಿ-ನೀರು-ಬೆಂಕಿ
ಮರೆತರೆ ಜೀವಂತ ಸಾವು, ಆತ್ಮಕೇ ನೋವು.
ವಿಶ್ವವೇ ನಿನ್ನ ಮನೆ, ಅದರಲಿ ಕನ್ನಡ ದೇವರಕೋಣೆ
ನಮಿಸು, ನಲಿಸು, ಕಲಿಸು, ‘ಸರಿ-ಘಮ’ ನುಡಿಸು !!

– ಡಾ. ಹೆಚ್‌ ಎನ್‌ ಮಂಜುರಾಜ್

14 Comments on “ನವೆಂಬರ್ ನೆನಪು !

    1. ಧನ್ಯವಾದಗಳು ಮೇಡಂ,

      ನಿಮ್ಮ ಪ್ರೋತ್ಸಾಹದುತ್ಸಾಹದೈಶ್ವರ್ಯ

      ಊ ಊ ಊ ಊ ಊ ಕನ್ನಡದ ಕೈಂಕರ್ಯ

      ನಮಗೆಲ್ಲ ಸ್ಫೂರ್ತಿ ಮತ್ತು ಧೈರ್ಯ !!

      ನಮನಗಳು, ಮಂಜುರಾಜ್

  1. ಕನ್ನಡದ ಆಪ್ತತೆಯು, ನಮ್ಮ ಬಳಕೆಯಲ್ಲಿ ಹಾಗೂ ಭಾವದಲ್ಲಿ ಅಡಗಿದೆ ; ಒಪ್ಪಿ , ನೆಡೆಯುವಂತೆ ಹುರಿದುಂಬಿಸುತ್ತಿದೆ, ನಿಮ್ಮ ಕವನ

  2. ಕನ್ನಡಮ್ಮನಿಗೆ ನಮಿಸಿ ನಲಿದ ಸೊಗಸಾದ ಕವನ

  3. ಕವನ ವಿಭಿನ್ನವಾದ ಕನ್ನಡದ ಪರಿಮಳದಿಂದ ಬಾಯಲ್ಲಿ ನೀರೂರಿಸುವಂತೆ ಘಮಘಮಿಸುತ್ತಿದೆ ಸರ್.

Leave a Reply to ಎಂ. ಕುಸುಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *