ಗಝಲ್
ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತು
ನಾಳಿನ ಕನಸಿನ ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು
ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇ
ಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು
ಮಾರ್ದವ ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯು
ಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು
ಜೀವನ ನೌಕೆಯು ಸಿಲುಕಿ ಬಿರುಗಾಳಿಗೆ ಹೊಯ್ದಾಡುತಿದೆ ಹೀಗೇಕೆ?
ದೇವನ ಒಲುಮೆ ಭದ್ರತೆ ನೀಡುತ ಭರವಸೆಯಲಿ ಖುಷಿಯಾಗಿಸಿತು
ಹಂಬಲ ಕಾಮನೆ ಮನುಜನ ಬದುಕಲಿ ನನಸಾದರೆನಿತು ಒಳಿತು
ನಂಬಿದ ದೈವದ ಸನ್ನಿಧಿ ಸುಜಿಯ ಅಂತರಂಗದಲಿ ಮೊರೆಯಾಗಿಸಿತು
-ಸುಜಾತಾ ರವೀಶ್
ಗಝಲ್… ಚೆನ್ನಾಗಿ ದೆ ಗೆಳತಿ… ಅಭಿನಂದನೆಗಳು.
ಧನ್ಯವಾದಗಳು ಗೆಳತಿ
ಸುಜಾತಾ ರವೀಶ್
ಸೊಗಸಾಗಿದೆ