ಬರಹ
ಬರೆಬರೆದು ಬಿಸುಟುವ ತವಕದಲಿ ಈ
ಮನ ಓಡುತಿಹುದೇ ವಿನಃ ಸಿರ ಕರಗಳಲ್ಲ
ಹಳೆಯ ಬರೆಯ ಮರೆಯಲು ಬರೆಯಲೇ
ಮರೆತ ಬೆರೆತಗಳೊಂದಿಗೆ ಮತ್ತೆ ಬೆರೆಯಲು ಬರೆಯಲೇ
ಅರಿವಿನಲಿ ಬರೆಯಲೇ ಇಲ್ಲಾ
ಅರಿವಳಿಕೆಯಲಿ ಬರೆಯಲೇ
ಬರೆಯ ಬಯಸಿದೆ ಮನವು ಏನೆಲ್ಲಾ ಭಾವಗಳ
ತಳೆಯದಾಗಿವೆಯಲ್ಲ ಅಕ್ಕರದ ರೂಪಗಳ
ಏನ ಬರೆದೇನು ನಾನು ಬಾಲ್ಯ-ಮಳೆ-ಸೈಹಾದ್ರಿ
ಎಲ್ಲ ಬರೆದರು ಅದರ ನಾನೇಕೆ ಬರೆಯಲಿ
ಬರಹವೆಂಬುವರೆ ಅದನು ಬೇಕೆಂದೇ ಬರೆದುದನು
ಬಂದಾಗ ಬರೆದರೇ ತಿಳಿಸೇನು ತಿಳಿಸುವದನು
ಕಾಯುವೆನು ಕಾದೇನು ಆ ಸಮಯಕ್ಕಾಗಿ
ಮನದೋಟ ಮೈತಳೆದು ಅಕ್ಕರಗಳಾಗಿ
ಅಕ್ಕರದ ಅಕ್ಕರಗಳ್ ಮೂಡ್ಯಾವು ಒಂದು ದಿನ
ಸಿರ ಕರಗಳ್ ಆಡ್ಯಾವು ಮನದ ಮಾತನ್ನ…
– ಕಿಟ್ಟು
ಕವಿತೆ ಹುಟ್ಟುವ ರೀತಿಯ ಅನಾವರಣದ ಸೂಕ್ಮನೋಟ. ಚೆನ್ನಾಗಿ ದೆ ಸಾರ್.
ಚಂದದ ಕವನ. ಮನಸಿನ ಭಾವಗಳು ಪದಗಳಾಗಿ ಹೊರ ಹೊಮ್ಮಿದಾಗ ಮನಸು ನಿರಾಳ
ಮನದಲ್ಲಿ ಥಕ ಥೈಎಂದು ಕುಣಿಯುವ ಹಾಡುವ ಭಾವನೆಗಳನ್ನು ಎಂತು ಬರೆಯಲು ಸಾಧ್ಯ
ಚೆಂದದ ಕವಿತೆ
ಮನದ ಭಾವನೆಗಳನ್ನು ಅಕ್ಷರ ರೂಪದಲ್ಲಿ ಭಟ್ಟಿ ಇಳಿಸುವ ಕಾರ್ಯ ಅದೆಷ್ಟು ಕಠಿಣ!..ಕವನ ಸೊಗಸಾಗಿದೆ.
ಕವಿತೆಯ ಉಗಮದ ತಾಕಲಾಟಗಳ ಸುಂದರ ಚಿತ್ರಣ.