ಬೆಳಕು-ಬಳ್ಳಿ

ಗರಿಕೆಯಂಥಾ ಕನ್ನಡ

Share Button

ಅಮ್ಮಾ ಎಂದುಲಿದು ಪಾದ ತಬ್ಬಿದರೆ ಸಾಕು
ಎತ್ತಿ ಎದೆಗಪ್ಪಿಕೊಳ್ಳುವಳು
ಭುವನ ಸುಂದರಿ ಭಾವಸಾಗರಿ
ಬಾರೆನ್ನ ಕಂದನೆಂದು ಭರಸೆಳೆವ ಕರುಣಜಲ ವಿಹಾರಿ
ಲೋಕಲೋಕಗಳಲೂ ಬಹು ಮಾನ್ಯಳು
ನನ್ನಮ್ಮ ಕರುಣಾಳು ಕನ್ನಡಾಂಬೆ

ಯಾವ ಜನ್ಮದ ಪುಣ್ಯ ಶೇಷವೋ
ಯಾರ ಕರುಣೆಯ ಹಾರೈಕೆಯೋ
ಹುಟ್ಟಿದೆನು ಬೆಳೆದೆನು ನಿನ್ನ ಮಡಿಲಲಿ
ಬದುಕ ಕಟ್ಟಿಕೊಂಡೆನು ನಿನ್ನ ನಿಸರ್ಗಸಿರಿಯಲಿ

ನಿನ್ನ ಭಾವವಿದೆ ರಸಿಕ ಕವಿಗಳೆದೆಯಲಿ
ನಿನ್ನ ಜೀವವಿದೆ ಮುತ್ತಿನಕ್ಕರದ ಹೊತ್ತಗೆಯಲಿ
ನಿನ್ನ ಬದುಕಿದೆ ನಿನ್ನನೇ ನುಡಿವ
ನಮ್ಮ ನಾಲಿಗೆಯಂಚಿನಲಿ
ನಿನ್ನ ನಗುವಿದೆ ಕನ್ನಡದ ಗೀತಗೀತಗಳುಲಿತದಲಿ

ಯಾರೆಷ್ಟೆ ತುಳಿದು ಹೊಸಕಿದರು
ಮತ್ತೆ ಮತ್ತೆ ಮೈತೊಳೆದು ಮೈತಳೆದು ರೂಪುಗೊಳುವೆ
ಚಿಗುರಿನಂಚಿನಲೇ ನಗುತ ಪುಳಕಗೊಳುವೆ
ಎಲ್ಲರೆದೆಯಲಿ ಇಬ್ಬನಿ ಹೊತ್ತ ಗರಿಕೆ ನೀನು
ಗರಿಗೆದರಿ ನಲಿವೆ ನಮ್ಮೆಲ್ಲರ ಕನ್ನಡತನದಲಿ
ಕಲ್ಮಶವಿಲ್ಲದ ಹೃದಯಗಳಲಿ

– ಬಿ.ಕೆ. ಮೀನಾಕ್ಷಿ, ಮೈಸೂರು

5 Comments on “ಗರಿಕೆಯಂಥಾ ಕನ್ನಡ

  1. ಬಹಳ ಸೊಗಸಾದ ಭಾಷೆ ಕನ್ನಡವನ್ನು ಎಳೆ ಗರಿಕೆಗೆ ಹೋಲಿಸಿದುದು ಬಹಳ ಇಷ್ಟವಾಯ್ತು.

  2. ನಿಜ, ಗರಿಗೆದರಿ ನಲಿಯುವಳು ಕನ್ನಡಮ್ಮ ʼನಮ್ಮೆಲ್ಲರ ಕನ್ನಡತನದಲಿ ಕಲ್ಮಶವಿಲ್ಲದ ಹೃದಯಗಳಲಿʼ!

  3. ಚಂದದ ಕವನ. ಕನ್ನಡ ಭಾಷೆಯಂತಹ ಮತ್ತೊಂದು ಮಧುರ ಭಾಷೆ ಇಲ್ಲ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *