ಹೆಮ್ಮೆಯ ದೇಶ..

Share Button

ಹೆಮ್ಮೆಯ ದೇಶ
ಭಾರತ ದೇಶ
ಆಚರಿಸುತಿದೆ ಅಮೃತ ವರ್ಷಾ
ಸ್ವಾತಂತ್ರ್ಯ ಉತ್ಸವದ ಆಮೃತ ವರ್ಷ—ಪ-

ಪ್ರಕೃತಿ ಸೌಂದರ್ಯದ ಖನಿ ಈ ದೇಶ
ಪರಮ ಪುರುಷರು ಜನಿಸಿದ ದೇಶ
ಪರಮೋಚ್ಚ ಸಂಸ್ಕೃತಿ ಯ ಪುಣ್ಯ ಪ್ರದೇಶ..
ಹೆಮ್ಮೆಯ ದೇಶ ಭಾರತ ದೇಶ..1

ಪರಕೀಯರೊಂದಿಗೆ ಹೋರಾಡಿ
ಗುಲಾಮಗಿರಿಯಿಂದ ಪಾರುಮಾಡಿದ
ಸ್ವಾತಂತ್ರ್ಯ ಯೋಧರು ನೆಲೆಸಿಹ ದೇಶ..
ಹೆಮ್ಮೆಯ ದೇಶ ಭಾರತ ದೇಶ..2

ಸರ್ವ ಜನಾಂಗದ ಸುಂದರ ದೇಶ
ಭಾವೈಕ್ಯತೆಯನು ಮೆರೆವಾ ದೇಶ
ವಿಶ್ವಕೆ ಮಾದರಿ ನಮ್ಮ ಈ ದೇಶ
ಹೆಮ್ಮೆಯ ದೇಶ ಭಾರತ ದೇಶ.3

ವಿಶಿಷ್ಟ ರೀತಿಯ ಆಚರಣಾ
ಮನೆ ಮನೆ ತಿರಂಗಾ ಅಭಿಯಾನಾ
ಉಕ್ಕಿಸಿದೆ ನಮಗೆ ರಾಷ್ಟ್ರ ಅಭಿಮಾನ
ಭಾರತ ಮಾತೆಗೆ ನಮ್ಮಯ ನಮನಾ
ಭಾರತ ಮಾತೆಗೆ ನಮ್ಮಯ ನಮನಾ..
ಹೆಮ್ಮೆಯ ದೇಶ ಭಾರತ ದೇಶ..4

-ಮಾಲತೇಶ ಹುಬ್ಬಳ್ಳಿ

4 Responses

  1. ದೇಶಭಕ್ತಿ ಯನ್ನು ವ್ಯಕ್ತಪಡಿಸುವ.. ಕವನ ಚೆನ್ನಾಗಿದೆ… ಧನ್ಯವಾದಗಳು ಸಾರ್.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್. ಕವನ ಓದುವಾಗ ಹೆಮ್ಮೆಯ ಭಾವ ಮೂಡುತ್ತದೆ.

  3. ಶಂಕರಿ ಶರ್ಮ says:

    ದೇಶಭಕ್ತಿ ಉಕ್ಕಿಸುವ ಗೀತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: