ಕ್ಷೀರ ದಿನ – ಜೂನ್ 01
ಜನನಿ ಕಂದನಿಗುಣಿಸುವ ಪ್ರಥಮ ಆಹಾರ
ಸೃಷ್ಠಿಯ ನವಜಾತರಿಗೆಲ್ಲ ಇದೇ ಜೀವಕಾಧಾರ
ಅಮೃತಕ್ಕೆ ನೀ ತತ್ಸಮಾನ ಪದ ಕ್ಷೀರ
ಹಾಲೆಂದರೆ ಸಕಲ ಜೀವಗಳ ಪ್ರಾಣಾಧಾರ.
ನಿರ್ಮಲತೆˌಪರಿಶುದ್ಧತೆಗೆ ನೀ ಇನ್ನೊಂದು ಹೆಸರು
ದಧಿˌನವನೀತ ಧೃತಗಳು ನಿನ್ನ ಇತರ ಅವತಾರ
ಆರೋಗ್ಯಕ್ಕಿರಲಿ ಸ್ವಾದಿಷ್ಟಕ್ಕಿರಲಿ ನೀನೇ ರುಚಿಕರ
ಸಾತ್ವಿಕತೆಯ ಪ್ರತಿರೂಪˌನೀ ದೈವೀಕತೆಯ ಸಾಕ್ಷಾತ್ಕಾರ.
ಕಾಮಧೇನುವಿನ ಕೆಚ್ಚಲಿನಿಂದ ನಿನ್ನ ಉಗಮ
ಅಭಿಷೇಕ ನೈವೇದ್ಯವೆಂದರೆ ನೀನೇ ಸೂಕ್ತ ಉಪಮ
ಉಪಚಾರˌಉಪಹಾರ ಉಪವಾಸಗಳು ನಿನ್ನಿಂದ ಸುಗಮ
ಎಷ್ಟು ಬಣ್ಣಿಸಿದರೂ ಸಾಲದು ನಿನ್ನ ಮಹಿಮ.
–ಸುಜಾತಾ ರವೀಶ್
ಕವನ ಚೆನ್ನಾಗಿದೆ.
Nice
ಬಹುರೂಪಿ ಕ್ಷೀರದ ವರ್ಣನೆ ಕವನದಲ್ಲಿ ಚೆನ್ನಾಗಿ ಮೂಡಿಬಂದಿದೆ.