ಆಡೋಣ ಬಾ ಆಟ ಆಡೋಣ ಬಾ
ಮರೆತ ಆಟ ನೆನಪಿಸೋಣ ಬಾ
ರಜೆಯಲ್ಲಿ ರಾಜನಂತೆ ಆಟ ಆಡೋಣ ಬಾ
ಹಳ್ಳಿಯ ಹೈಕ್ಳ ಹದವನರಿಯೋಣ ಬಾ
ಅವರಲ್ಲಿ ನಾವು ಒಂದಾಗೋಣ ಬಾ
ನಮ್ಮನೆ ಆಟ ಆಡೋಣ ಬಾ //ಪಲ್ಲವಿ//
ಅಂಗೈ ಮೇಲೆ ಬುಗುರು ತಿರುಗಿಸಿ ಬೆರಗಾಗಿಸೋ ಬುಗುರಿಯಾಟವ,
ಉದ್ದುದ ಮಾತಗಳ ಮನತಣಿಸುವ ಉದ್ದಿನ ಮೂಟೆಯ ಆಟವ,
ಕಲ್ಲನ್ನು ಅಣಕಿಸುವ ಅಣೀಕಲ್ಲು ಆಟವ,
ಕಾಡೇಗೂಡೆಯ ಕಣ್ಣು ಮುಚ್ಚಾಲೆ ಆಟವ,
ಕೈಚಳಕ ತೋರಿಸುವ ಬಚ್ಚದ ಕಲ್ಲಾಟವ,
ಕುಂಟುತ ಆಡುವ ಕುಂಟಲಪಿಯ,
ಕೊಕ್ಕೆಂದು ಕೂಗಿ ಎಬ್ಬಿಸುವ ಕೊಕ್ಕೋ ಆಟವ //ಆಡೋಣ//
ಗಜನಿಗೆ ಸವಾಲೆಸೆಯುವ ಆನೆ ಕುರಿ ಆಟವ
ಗೆಲ್ಲುವ ತನಕ ಬಿಡದೆ ಆಡುವ ಗೋಲಿಯಾಟವ
ಗುಂಪಿಗೆ ಲಗ್ಗೆ ಹಾಕುವ ಲಗೋರಿ ಆಟವ //ಆಡೋಣ//
ಚತುರತೆಗೆ ಚೌಕಬಾರವ ಚದುರಂಗವ, ಪಗಡೆಯಾಟವ
ಚಿನ್ನದ ಕೋಲಿನ ಚಿನ್ನಿದಾಂಡಾಟವ,
ಚಿಮ್ಮಿಸಿ ಹೊಡೆಯುವ ಚಿಣ್ಣಿಕೋಲಾಟವ,
ಚುರುಕಿನ ಮುಟ್ಟಿಸುವ ಟೋಪಿ ಆಟವ,
ಚೇಷ್ಟ ಮಾಡುವ ಮರಕೋತಿಯಾಟವ //ಆಡೋಣ//
ಬಚ್ಚಿಟ್ಟ ಕಡ್ಡಿ ಬಿಚ್ಚಿಡುವ ಊಪೂಪೆ ಕಡ್ಡಿ ಆಟವ,
ಮನಗಳನ್ನು ಅರಳಿಸುವ ಹರಳು ಮಣೆ ಆಟವ,
ಮೈ ಮನ ಹುರಿದುಂಬಿಸುವ ಕಬ್ಬಡಿ ಆಟವ //ಆಡೋಣ//
ಹಬ್ಬದೂಟದಂತೆ ರಸದೌತಣ ನೀಡುವ ಕೋಲಾಟವ..
ಹೊಂಚು ಹಾಕುವ ಹುಲಿಕುರಿ ಆಟವ
ಎಲ್ಲರೂ ಒಂದಾಗಿ ಸಿಹಿಯ ಹಂಚುತ ಆಟ ಆಡೋಣ ಬಾ
ಸೋದರತೆಯ ಸಿಹಿಯ ಸವಿಯುತ ಆಟ ಆಡೋಣ ಬಾ //ಆಡೋಣ//*
-ದಿವಾಕರ್ ಡಿ ಮಂಡ್ಯ
Beautiful.
Thanks
Thanks
ಹಳೆಯ ಆಟಗಳನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ ಸಾರ್
ನಿಮ್ಮ ಈ ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಮ್.
ಗ್ರಾಮೀಣ ಕ್ರೀಡೆಗಳೆಲ್ಲಾ ಇಂದು ಹಳೆಯದು ಎನಿಸಿಬಿಟ್ಟಿದೆ ಎಲ್ಲರಿಗೂ.. ಅದರ ಕುರಿತು ಒಂದು ಕವನ ಬರೆದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅದಕ್ಕೆ ಬರೆದೆ ಮೇಡಮ್
ನನ್ನ ಇತರೆ ಬರಹಗಳನ್ನು ಓದಿ ಪ್ರೋತ್ಸಾಹಿಸಿ ಎಂದು ಕೋರುತ್ತಾ..
ಧನ್ಯವಾದಗಳೊಂದಿಗೆ.
ಹಳ್ಳಿಜೀವನದ ನಮ್ಮ ಬಾಲ್ಯದ ಆಟಗಳ ನೆನಪು ಮರುಕಳಿಸಿತು . ಚೆಂದದ ಕವನ.
ಎಷ್ಟೋ ಗ್ರಾಮೀಣ ಕ್ರೀಡೆಗಳು ಇಂದು ಆಧುನಿಕತೆಯ ಹೆಸರಿನಲ್ಲಿ ನಮ್ಮಿಂದ ಮಾಯಾವಾಗಿ ಬಿಟ್ಟಿವೆ.
ಎಲ್ಲವೂ ಕಂಪ್ಯೂಟರ್ ಮತ್ತು ಮೊಬೈಲ್ ಮಯವಾಗಿ ಬಿಟ್ಟಿದೆ.
ಇನ್ಮೊಂದು ವರ್ಷಗಳು ಕಳೆದರೆ ಈ ಕ್ರೀಡೆಗಳ ಬಗೆಗಿನ ಅರಿವಿದ್ದವರು
ಸುಮ್ಮನಾದರೇ ಸಾಕು…ಆಟಗಳು ನಶಿಸಿ ಹೋಗುವುದರಲ್ಲಿ ಸಂಶಯವಿಲ್ಲ.
ಧನ್ಯವಾದಗಳು ಮೇಡಮ್
ಸುಂದರ ಪದಜೋಡಣೆಯೊಂದಿಗೆ ಬಾಲ್ಯದಲ್ಲಿ ದೇಹ ಮತ್ತು ಮನೋವಿಕಾಸಕ್ಕೆ ಒತ್ತು ನೀಡುವ ಹಲವಾರು ಆಟಗಳ ವಿವರಣೆಯುಳ್ಳ ಸುಂದರ ಕವಿತೆ.
ಗ್ರಾಮೀಣ ಕ್ರೀಡೆಗಳ ಮೂಲ ಉದ್ದೇಶವೇ ದೇಹ ಮತ್ತು ಮನೋವಿಕಾಶಕ್ಕೆ ಒತ್ತು ನೀಡುವಂತಹ ಆಟಗಳೇ ಆಗಿವೆ . ಆದರೆ ಇಂದು ಆಧುನಿಕತೆಯ ಹೆಸರಿನಲ್ಲಿ ಅವುಗಳ ಮಹತ್ವದ ಬಗೆಗಿನ ಅರಿವಿನ ಕೊರತೆ ಎದ್ದು ಕಾಣಿಸುತ್ತಿದೆ..
ನಿಮ್ಮ ಈ ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಮ್.
ನನ್ನ ಇತರ ಬರಹಗಳನ್ನು ಓದಿ ಅಭಿಪ್ರಾಯ ತಿಳಿಸಿ…ಎಂದು ಕೋರುತ್ತಾ
ಮರೆತ ಆಟಗಳನ್ನು ನೆನಪಿಸುತ್ತಾ ನಮ್ಮನ್ನೂ ಬಾಲ್ಯದ ಕಡೆಗೊಯ್ದ ಸೂಪರ್ ಕವನ.
ಮರೆತು ಹೋದ ಎಷ್ಟೋ ಘಟನೆಗಳನ್ನು ಈಗ ಕವನ ಕವಿತೆ ಪದ್ಯ ಗದ್ಯದ ರೀತಿಯಲ್ಲಿ ಬರದು ಅದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳಲ್ಲಿ ..ಉದಾಹರಣೆಗೆ ನಮ್ಮ ಕಾಡುಪ್ರಾಣಿಗಳು ಎಷ್ಟೋ ಪ್ರಬೇಧಗಳು ಅಳಿವಿನಂಚಿನಲ್ಲಿವೆ…ಹೀಗೆ ಸುಮಾರು ಅಂಶಗಳು ಕಣ್ಣಿನ ಮುಂದೆ ಇಲ್ಲದಿದ್ದಾಗ …ಅದನ್ನು ಮರುಕಳಿಸುವ ಪ್ರಯತ್ನವಾದರೂ ಆಗಬೇಕು ಅಲ್ಲವೆ..
ನಿಮ್ಮ ಈ ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಮ್ …
Super sir
Thank You for your appreciation of my writings about the Village sports