ಬೆಳಕು-ಬಳ್ಳಿ

ಸಾವಿನ ಮನೆಯಲಿ….

Share Button

ಬದುಕಿದ್ದಾಗ ಬಡಿದಾಡುವರು
ಸತ್ತಾಗ ಸುತ್ತ ನೆರೆವರು,
ತೆಗಳಿದವನು ಹೊಗಳುವನು ಅಂದು,
ಕತ್ತಿ ಮಸೆದವನೆ ನಿಲ್ಲುವನು ಬಂದು
ಹಾರದೊಡನೆ ಎಲ್ಲರಿಗಿಂತಲೂ ಮುಂದು,
ಕಷ್ಟ ಸುಖದಲಿ ತಿರುಗಿಯೂ ನೋಡದವರು
ಹತ್ತಿರದ ಸಂಬಂಧಿಗಳೆಂದು ಹೇಳುವರು
ಜೊತೆಗೆ ಮಡಿಯ ಮಾಡುವರು,
ಸಿಕ್ಕಾಗ ಎದುರಿಗೆ
ಮಾತಾಡದೆ ಮುಖ ತಿರುಗಿಸಿದವನು
ಸತ್ತಾಗ ಬಂದು
ಆ ನಿರ್ಜೀವಕೆ ಅಂಟಿಕೊಂಡು
ಹೀಗಾಗಬಾರದಿತ್ತೆನ್ನುತ್ತಾ ನಿಲ್ಲುವನು.

ಕಷ್ಟದಿ ಹೆಗಲ ಕೊಡದ ಮಗ
ಮಡಿಕೆಯ ಹೊರಲು ಬರುವನಾಗ,,,
ನಿಜದ ಅನುತಾಪವಿದ್ದವರು
ಸುಳ್ಳು ಸಂತಾಪವಿದ್ದವರು,
ಬೆರತು ಹೋಗುವರು
ಕಲೆತು ಕಣ್ಣೀರುಗೆರೆಯುವರು,
ಅಯ್ಯೋ ಎಂದು ನಿಟ್ಟುಸಿರೆಳೆದವರೆ ಒಬ್ಬ
ಸಧ್ಯ ಎಂದು ನೆಮ್ಮದಿಯಿಂದುಸಿರೆಳೆವ ಇನ್ನೊಬ್ಬ,
ಆಸ್ತಿಯ ಅತಂಕ ಹಲವರಿಗೆ,
ಹಣದ ಹಂಚಿಕೆ ಯತ್ತ ಗಮನ ಕೆಲವರಿಗೆ,

ಇದ್ದಾಗ
ಹಿತವ ಹಾರೈಸದವರು
ಸತ್ತಾಗ
ಬಂದು ಹಾಲ ಹುಯ್ಯುವರು

ವಿದ್ಯಾ ವೆಂಕಟೇಶ. ಮೈಸೂರು

10 Comments on “ಸಾವಿನ ಮನೆಯಲಿ….

  1. ಲೋಕಾರೂಢಿಯ ಅಭಿಪ್ರಾಯ ಅನಿಸಿಕೆಗಳನ್ನು ಕವನದ ಮೂಲಕ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಸೋದರಿ ವಿದ್ಯಾ.

  2. ನಮ್ಮ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳ ಕಟುಸತ್ಯಗಳು ಬಹಳ ಭಾವನಾತ್ಮಕವಾಗಿ ಅನಾವರಣಗೊಂಡಿವೆ… ತಮ್ಮ ಕವನದಲ್ಲಿ.

  3. ಸ್ವಾರ್ಥ ಸಮಾಜದ ಮುಖವಾಡವನ್ನು ಕಳಚುವಂತಿದೆ ನಿಮ್ಮ ಕವನ ಮನಸ್ಸಿಗೆ ಹತ್ತಿರವಾಯಿತು.

  4. ಆ ಸಮಯದಲ್ಲಿ ನೆರವಾಗುವವರನ್ನು ಎಂದಿಗೂ ಮರೆಯಲಾಗದು

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *