ಸಂತೆಗೆ ಹೋದನು ಭೀಮಣ್ಣ..

Share Button

ನಿನ್ನೆ ಚಾಮರಾಜನಗರ ಜಿಲ್ಲೆಯ ‘ನಾಗಮಲೆ’ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದೆವು. ಈ ಬೆಟ್ಟವು, ದಂತಚೋರ ವೀರಪ್ಪನ್ ನ ಅಡಗುದಾಣವಾಗಿದ್ದ ಮಲೈಮಹದೇಶ್ವರ ಬೆಟ್ಟದಿಂದ 14 ಕಿ.ಮಿ ದೂರದಲ್ಲಿದೆ. ಇಲ್ಲಿ ಬದುಕು ನಿಜಕ್ಕೂ ಕಷ್ಟ. ಕನಿಷ್ಟ ಅನುಕೂಲತೆಗಳಿಲ್ಲದ ಈ ಊರಿಗೆ ಸಾಮಾನು-ಸರಂಜಾಮುಗಳನ್ನು ಕತ್ತೆಗಳ ಮೂಲಕ ಸಾಗಿಸುತ್ತಿರುವುದು ಕಂಡುಬಂತು. 

 

 

Donkeys

ಏನನ್ನೂ ಹೊರದೆ ಇದ್ದರೂ ಕಷ್ಟಪಟ್ಟು ನಡೆಯುವ ನಮಗೆ,ಅದೆಷ್ಟು ಉಪಕಾರಿ ಕತ್ತೆ ಎಂಬ ಪ್ರಾಣಿ!

ತತ್ಕ್ಷಣ ಮನಸ್ಸು ರಿವರ್ಸ್ ಗೇರ್ ನಲ್ಲಿ ಮಿಂಚಿನ ವೇಗದಲ್ಲಿ 3 ದಶಕಕ್ಕೂ ಹಿಂದಕ್ಕೆ ಓಡಿ ಪ್ರಾಥಮಿಕ ಶಾಲೆಯಲ್ಲಿ ಕುಳಿತು ರಾಗವಾಗಿ ಕೋರಸ್ ನಲ್ಲಿ:

“..ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣ..ಕತ್ತೆಗ ಬೆನ್ನಿಗೆ ಏರಿಸಿದ, ಕುದುರೆಯ ಜತೆಯಲಿ ಸಾಗಿಸಿದ..” ಎಂದು ಹಾಡತೊಡಗಿತು.

 ಇದ್ದಕ್ಕಿಂತ ಹೆಚ್ಚು ಸಾಲುಗಳು ಮತ್ತು ಈ ಗೀತಯನ್ನು ಬರೆದವರು ಯಾರೆಂದು ಈಗ ನೆನಪಿಲ್ಲ. ಯಾಕೆಂದರೆ, ಶಾಲಾದಿನಗಳಲ್ಲಿ “ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತು” ಎಂಬ ಕೀರ್ತಿಗೆ ಭಾಜನಳಾಗಿದ್ದ ನನಗೆ ಇಷ್ಟು ನೆನಪಿರುವುದು ‘ಕತ್ತೆ’ಯ ಪುಣ್ಯ!

 

-ಹೇಮಮಾಲಾ.ಬಿ  ಮೈಸೂರು

3 Responses

  1. Jennifer Shawn says:

    Very Nice snap Hema! You have good photographic skill too!

  2. Balasubramanya Hosoor says:

    ಜನ ಮನುಷ್ಯರಿಗೆ ಕತ್ತೆ ಎಂದು ಬೈದು ಕತ್ತೆಗೆ ಅವಮಾನ ಮಾಡುವ ಕ್ರಮ ಇಟ್ಟುಕೊಂಡಿದ್ದಾರೆ

  3. Yashu Vittla says:

    ಕಯ್ಯಾರ ಕಿಂಞಣ್ಣ ರೈ ಅವರ ಕವನ.

Leave a Reply to Jennifer Shawn Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: