ಸಂಪಾದಕೀಯ

ಮುಗ್ದತೆಯ ಮಂತ್ರ

Share Button

ನೀವು ನೋಡಿಹಿರೇನು ನಮ್ಮ ಕಾಡಿನೊಳಿರುವ ಹೂವುಗಳಲಿದು
ಒಂದು ಹೊಚ್ಚ ಹೊಸ ಹೂವು
ಮಿಕ್ಕ ಹೂವಂತಲ್ಲ ಚಿಕ್ಕ ಹೂವಿದು ನೋಡಿ ಅಕ್ಕ ಕಂಡಿಹಿರೇನು ಇದರ ಎಸಳ ?
ಕೋಮಲತೆಯೊಳು  ಸಮವು ಇದಕ್ಕಿಲ್ಲ ಜಗದೊಳು  ಬಣ್ಣ ಬಣ್ಣದ
ಚುಕ್ಕಿಗಳ   ನಭದಿ   ಸುರಿದಿಹರೆನು
ಎಷ್ಟೊಂದು ಬಣ್ಣಗಳು  ಚದುರಿಹವು   ಒಂದೇ  ಕಡೆ
ಮಂಜ  ಹನಿಯಲಿ  ಹಲವು ಮಿಂದು ಬಂದಿಹವಿಲ್ಲಿ
ಮಂದಹಾಸವು ಮೂಡಿ ಮರೆಯಾಗುತಲಿದೆ ನಸು ತೆರೆದ ತುಟಿಯ ಮೇಲೆ
ಖಗ ಮೃಗಗಳೂ  ಸ್ಪರ್ಶಿಸಲಾರವೀ  ನುಗುಮೊಗದ  ಮಂತ್ರಪುಷ್ಪವ

ಥಟ್ಟನೆ ಒಮ್ಮೆ  ಹೊಳೆದು ಮರೆಯಾಯಿತು ಕೇವಲ ವನಸುಮವಿದೆಂದು
ನಾಡ  ಕಲುಷಿತ ಗಾಳಿ  ಬೀಸಿಲ್ಲವಿದರಕಡೆ
ಕಪಟನಾಟಕಗಳ   ಸುಳಿವಿಲ್ಲ
ನಾಗರೀಕತೆಯ ಉತ್ಕಟತೆಯು  ಸೋಕಿಲ್ಲ ಇತ್ತ  ಕಡೆ
ಜಗಹೊರಳಿದಹಾಗೆ  ಹೊರಸೂಸಿ ಬಂದಿದೆ
ಮುಗ್ದತೆಯ ಮಂತ್ರ ಯುಗದ ಕೊರಳಿಂದ
ಮಹಾ ಮನ್ವಂತರದ ನೆಪದಲ್ಲಿ ಸುಮವು ಬಂಧನವಾಗದಿರಲಿ
ಆಧುನಿಕತೆಯ  ಸರಳಿಂದ
ಆಧುನಿಕತೆಯ ಸರಳಿಂದ

– ಸುಮಾ ಆನಂದರಾವ್ ,ಪಾವಗಡ ತಾಲ್ಲೂಕು 

4 Comments on “ಮುಗ್ದತೆಯ ಮಂತ್ರ

  1. ಬಣ್ಣದ, ಮುಗ್ಧ ಕಾಡಹೂವಿನ ಕ್ಷಣಿಕ ಜೀವನಕ್ಕೂ ಇರುವ ಮಹತ್ವವನ್ನು ಸಾರುವ ಸುಂದರ ಕವನ.

Leave a Reply to Chethan Cancel reply

 Click this button or press Ctrl+G to toggle between Kannada and English

Your email address will not be published. Required fields are marked *