ಆಮಂತ್ರಣ-ದರ್ಪಣ
.
ಆಮಂತ್ರಣ ಆಗಿರಲಿ ಅರ್ಥಪೂರ್ಣ
ಇಲ್ಲವಾದರೆ ಮನದಲ್ಲಾದೀತು ಹಗರಣ
ಆಮೇಲೆ ಮಾಡಿದರೇನು ಶುದ್ಧೀಕರಣ
ತೋರುತ್ತದೆ ತಿದ್ದಿದಂತೆ ವ್ಯಾಕರಣ
ಕ್ಷಣ ತಾಣ ಆಗುತ್ತದೆ ಪ್ರಮಾಣ
ಮನಸ್ಸು ವಿಲಕ್ಷಣದ ಅಸಾಧಾರಣ ಮಿಶ್ರಣ
ಸಂಬಂಧ ಪುನರ್ ನಿರ್ಮಾಣ ಆಗ ಕಠಿಣ
ಸಂಪೂರ್ಣಗೊಳಿಸಿ ವಿಶ್ಲೇಷಣದ ಭ್ರಮಣ
ನೋಡಿಕೋ ಮನುಜ ನೀನಾಗಿ ನಿನದೇ ದರ್ಪಣ
–ಲತಾಪ್ರಸಾದ್
Great latha super dear
ಬಹಳ ಚೆನ್ನಾಗಿ ವಿವರಿಸಿದ್ದೀರಿ ಈಗಿನ ಪರಿಸ್ಥಿತಿಯ ತಕ್ಕಂತೆ ನಾವು ಮಾಡಿಕೊಂಡು ಹೋದರೆ ಆಮೇಲೆ ನಾವು ಎಲ್ಲವನ್ನು ಸರಿಪಡಿಸಿಕೊಳ್ಳಬಹುದು
ಮಾತು ಕೆಲಸಗಳು ಆಗುವುದು ಅರ್ಥಪೂರ್ಣ
ಸಾಧ್ಯ ತೊಡಗಿಸಿಕೊಂಡಾಗ ತನ್ನನ್ನು ಸಂಪೂರ್ಣ
ನುಡಿ ನಡೆಗಳು ಆದಾಗ ಕ್ಷಣಕ್ಷಣವೂ ಭಾವಪೂರ್ಣ
ಜೀವನದುದ್ದ ಕಾಣ ಸಿಗುವುದು ವಿಧ ವಿಧದ ವರ್ಣ
ಧನ್ಯವಾದಗಳು
Nice
ಚೆನ್ನಾಗಿದೆ ಕವಿತೆ
ಕವಿತೆ ಮೆಚ್ಚಿದ ಸರ್ವರಿಗೂ ಧನ್ಯವಾದಗಳು
ಕವಿತೆ ಬಹಳ ಅರ್ಥಪೂರ್ಣ!