ಸ್ನೇಹದ ತಿರುಳು
.
ಮೋಸ ಬೇಡ ಮನುಜ
ನೀ ಬಾಳಬೇಕು ಸಹಜ
ಮೋಸ ವಂಚನೆ ಬೇಡ ಎಮಗೆ
ದ್ರೋಹಿಯಾಗಬೇಡ
ವೇಷ ಮರೆಸಿ ಬಣ್ಣ ಬದಲಿಸಿ
ಮಾತು ಮರೆಸಬೇಡ
ನಿನ್ನ ನಂಬಿದ ಜೀವಗಳಿಗೆ
ಕಣ್ಣೀರು ಇಡಿಸಬೇಡ
ಚುಚ್ಚುಮಾತು ಬಲುಕುತ್ತು ತರುವುದು
ಒಮ್ಮೆ ಅರಿತು ನೋಡ
ನಂಬಿಕೆಯಲಿ ಜೀವ ನಡೆಸು ನೀ
ವೈರತ್ವ ಗಳಿಸಬೇಡ
ವಿಶ್ವಾಸಭರಿತ ಪ್ರೀತಿಯಿಂದ
ಸ್ನೇಹ ಗಳಿಸಿ ನೋಡ
ಹಮ್ಮು ಬಿಮ್ಮು ತೊರೆದು ಬಿಟ್ಟು
ಅಭಿಮಾನಿ ಬಳಗ ನೋಡ
ಎಲ್ಲರೊಳುಗೊಂದಾಗಿ ಬದುಕುತ
ಸ್ನೇಹ ಮಧುರ ನೋಡ
ನಾನು ನಮ್ಮದು ಎಂಬ ಮಾತು
ದೂರ ಸರಿಸಿ ನೋಡ
ನಾವು ನಮ್ಮದು ನಮ್ಮದೆಲ್ಲವು
ಎಂದ ಬಾಳು ಪಾಡ
-ಮಧುಮತಿ ರಮೇಶ್ ಪಾಟೀಲ್, ಬಳ್ಳಾರಿ
ಅರ್ಥಗರ್ಭಿತ ಕವನ
ಸಹಜ ಬದುಕನ್ನು ಬಾಳು ಎಂಬ ಸುಂದರ ಸಂದೇಶ
ಸಹಜ ಸುಂದರ ಬಾಳಿನ ಪರಿಯನ್ನು ಮನಮುಟ್ಟುವಂತೆ ಬಿಂಬಿಸಿದ ಕವನ ಬಹಳ ಸೊಗಸಾಗಿದೆ.
ನೀತಿ ಕವನ ಚೆನ್ನಾಗಿದೆ