ಮನ ಕಾದಿದೆಯೇ ??
ಓ ನನ್ನ ಮನದನ್ನೆ , ನೇಸರನ
ಹೊಂಗಿರಣಗಳು ಆ ನಿನ್ನ ಸುಂದರ
ನಯನಗಳ ಸ್ಪರ್ಶ ದರ್ಶನಕೆ ಬಹಳ
ಆತುರದಿ ಕಾಯುತಿರುವಾಗ ………
ನಯನಗಳ ಸ್ಪರ್ಶ ದರ್ಶನಕೆ ಬಹಳ
ಆತುರದಿ ಕಾಯುತಿರುವಾಗ ………
.
ಮುಂಜಾವಿನ ಆ ತಿಳಿ ಮಂಜು
ನಿನ್ನ ಬಿಸಿಯುಸಿರಿನ ಆಹ್ಲಾದಕೆ
ಕರಗಿ ನೀರಾಗಿ ಸಾರ್ಥಕತೆಯ…
ದಡ ಸೇರುವಾಸೆಯಲಿರುವಾಗ ……
ನಿನ್ನ ಬಿಸಿಯುಸಿರಿನ ಆಹ್ಲಾದಕೆ
ಕರಗಿ ನೀರಾಗಿ ಸಾರ್ಥಕತೆಯ…
ದಡ ಸೇರುವಾಸೆಯಲಿರುವಾಗ ……
.
ಚಿಲಿ ಪಿಲಿ ಹಕ್ಕಿಗಳು ತಮ್ಮ ಇಂಪಾದ
ಆ ಕಲರವದ ತಂಪು ನಿನಾದವ
ನಿನ್ನಾ ಕರ್ಣ ಕಮಲದ್ವಯ ಗಳಿಗೆ
ಸಂಗೀತವೆಂದರ್ಪಿಸ ಬೇಕೆಂದಿರುವಾಗ …..
ನೀನಿನ್ನೂ ಏಳದೆ ನನ್ನೊಲವಿನ
ಭಾವತುಂಬಿದ ಸುಂದರ ಅಕ್ಷರಗಳ
ಕವನೋದಾಪದಿಯ ಸುಪ್ರಭಾತದ
ಸಿಹಿ ಸ್ಪರ್ಶಕೆ ನಿನ್ನ ಮನ ಕಾದಿದೆಯೇ ?
– ಲೋಕೇಶ್ ಬಿ.ಎಸ್.
ಸೂಪರ್! 🙂