ಸಾವೆ ಸತ್ತೆಹೋಯಿತೇನೋ ಎಂಬಂತೆ
ಅಕ್ಷರವ ನೆಕ್ಕಿ
ಅಳಿಸಿಬಿಡಬಹುದು
ಅರ್ಥಗೌರವವನ್ನು
ಒರಸಬಹುದೆ?
ಆಕಳಿಕೆ ಸದ್ದನ್ನು
ಅಡಗಿಸಿಡಬಹುದು
ಆಲಸ್ಯನೆರಿಗೆಗಳ
ಮರೆಸಬಹುದೆ?
ನಿಜದ ಬಾಯಿಗೆ
ಬೀಗ ಜಡಿಯಲುಬಹುದು
ಕಣ್ಣಿನಾಳದ ದಿಟವ
ಮುಚ್ಚಬಹುದೆ?
ಒಂದೆ ನಿಮಿಷದಿ
ಸಾವು ಬಂದಿಳಿಯಬಹುದು
ಜೀವ ಸಾವಿನ
ನೆಂಟು ಹಳೆಯದಂತೆ
ಆದರೂ ಅಲ್ಲೆ ಮೂಲೆಯಲೆಲ್ಲೊ
ಸೃಷ್ಟಿಮಾಟದ ಸದ್ದು
ಸಾವೆ ಸತ್ತೇಹೋಯಿತೇನೊ
ಎಂಬಂತೆ
-ಡಾ.ಮಹೇಶ್ವರಿ. ಯು
ತುಂಬಾ ಚೆನ್ನಾಗಿದೆ ಕವನ
ಅರ್ಥಪೂರ್ಣವಾದ ಕವನ ಅಭಿನಂದನೆಗಳು ಮೇಡಂ.
ಅರ್ಥಗರ್ಭಿತವಾಗಿದೆ.
ಅರ್ಥಗರ್ಭಿತವಾಗಿರುವ ಕವನ ಮನಮುಟ್ಟುವಂತಿದೆ.
ಚೆನ್ನಾಗಿದೆ
ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ನನ್ನ ಹಾರ್ದಿಕ ಧನ್ಯವಾದಗಳು.