ಬೆಳಕು-ಬಳ್ಳಿ

ಗ್ರಹಣ 

Share Button

ಗ್ರಹಣ
ಸೂರ್ಯ ಚಂದ್ರರಿಗಷ್ಟೇ ಅಲ್ಲ
ದೇಶಕ್ಕೂ .

ರಾಜಕಾರಣಿಗಳು,ಭ್ರಷ್ಟರು
ಉಗ್ರಗಾಮಿಗಳು,ಅತ್ಯಾಚಾರಿಗಳು
ಹಗಲುದರೋಡೆಕೋರರು, ಅಧಿಕಾರಶಾಹಿಗಳು
ಎಡಪಂಥೀಯರು, ಬಲಪಂಥೀಯರು
ಢೋಂಗಿ ಸ್ವಾಮಿಗಳು,ದಿಕ್ಕು ತಪ್ಪಿಸುವ ಮಾಧ್ಯಮಗಳು
ದೇಶಕ್ಕಡರಿಕೊಂಡಿರುವ  ರಾಹು ಕೇತುಗಳು.

ಇವರಿಂದ ನಾಡಿಗೆ
ನಿತ್ಯ ಖಗ್ರಾಸ ಗ್ರಹಣ
ಈ ಗ್ರಹಣಕೆ ಮೋಕ್ಷ ಯಾವಾಗ ?

ನಿತ್ಯ ನಿರೀಕ್ಷಿಸುತ್ತಲೇ ಇರುವೆವು.
ಬರುತ್ತಿಲ್ಲ ಜ್ಯೋತಿಷಿಗಳು
ಬರುತ್ತಿಲ್ಲ ಸ್ವಾಮಿಗಳು
ಹೇಳಲು ದೇಶದ ಭವಿಷ್ಯ
ಬಿಡಿಸಲಾಗುತ್ತಿಲ್ಲ ಗ್ರಹಣ.

ಗ್ರಹಣ ಮೋಕ್ಷ ಎಂದೋ ಏನೋ
ಹಾತೊರೆಯುತ್ತಿರುವರು ನಾಡಿಗರು.

ಗ್ರಹಣ ಸ್ಪರ್ಶವೂ ಜನರಿಂದಲೇ
ಗ್ರಹಣ ಮೋಕ್ಷವೂ ಜನರಿಂದಲೇ
ಜಾಗೃತರಾಗುವರೆಂದು ಇವರು
ದೇಶದ ಭವ್ಯ ಭವಿಷ್ಯಕೆ !

ಕೂಡಿ ಬಂದೀತೆಂದು ಕಾಲ ?
ದೇಶದ ಒಳಿತಿಗೆ
ಗ್ರಹಣ ಮೋಕ್ಷಕೆ
ನಾಡ ಹಿತರಕ್ಷಣೆಗೆ

ನಿತ್ಯ ನಿರೀಕ್ಷೆಯಲಿರುವೆವು
ಮತ್ತೊಬ್ಬ ಮಹಾತ್ಮನುದಯಕೆ
ಗ್ರಹಣ ಮೋಕ್ಷದ ಕಾಲ ನಿರ್ಣಯಕೆ
ಆತ್ಮ ನಿರ್ಭರ ನಾಡೋದಯಕೆ .

-ಪ್ರಕಾಶ ದೇಶಪಾಂಡೆ, ಹುಕ್ಕೇರಿ

   

5 Comments on “ಗ್ರಹಣ 

  1. ಚಿಂತನೆಗೆ ಹಚ್ಚುವಲ್ಲಿ ಯಶಸ್ಸು ಹೊಂದಿದ ಸಂದರ್ಭೋಚಿತ ಕವಿತೆ

  2. ದೇಶ ಒಳಿತಿಗೆ ಗೃಹಣ ಮೋಕ್ಷಕೆ ಕಾಲ ಕೂಡಿ ಬಂದಿದೆ ಎಂದು ಸಂದೇಶದ ಕವನ ಬಹಳ ಚೆನ್ನಾಗಿದೆ.

  3. ಇವತ್ತಿನ ಪರಿಸ್ಥಿತಿ ಯಲ್ಲಿ ಯಾರೊಬ್ಬನ ಭವಿಷ್ಯವನ್ನು ನಿರ್ಧರಿಸಲಾಗದು. Nice one sir

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *