ಬೆಳಕು-ಬಳ್ಳಿ

ಅಮ್ಮ

Share Button

ಅಂತಃಕರಣ
ಮಮತೆ ಎಂಬ ಸುಂದರ ಶಬ್ದಗಳ
ಪ್ರಥಮ ಅಕ್ಷರ
ಅಂ ಮ ಎಷ್ಟು ಚೆಂದ
ಅಮ್ಮಾ ಎಂದು ಕರೆಯುವಾಗ ಆಗುವದೆನಗೆ
ಅವ್ಯಕ್ತ ಆನಂದ…

ಮಲಗದೇ ನಾ ಹಠ ಮಾಡಿ ಅಳುತ್ತಿರುವಾಗ
ಯಾಕೆ ಕಿರಿ ಕಿರಿ ಮಾಡುವೆ ಕಂದ
ಎನ್ನುತ ಚಂದಪ್ಪನನ್ನು ತೋರಿಸುತ್ತಾ
ಅಚ್ಚಿ ತುಪ್ಪ ತಿನಿಸುತ್ತಾ
ಗಾಯಕಿಯಾಗಿ ತಾರಮ್ಮಯ್ಯ ಹಾಡು ಹೇಳುತ್ತಾ
ನನ್ನನು ಮಲಗಿಸುತ್ತಿದ್ದೆಯಲ್ಲಾ
ಆ ನೆನಪು ಎಷ್ಟು ಚೆಂದಾ ಅಮ್ಮಾ.
ನೆನೆದಾಗ ಆಗುವದೆನಗೆ
ಅವ್ಯಕ್ತ ಆನಂದಾ….

ಸ್ವಲ್ಪ ನಾ ಬೆಳೆದಂತೆ
ಅಆಇಈ ಅಕ್ಷರ ಕಲಿಸಿ
ಓದಿಸಿ ಬರೆಯಿಸಿ
ಕನ್ನಡದ ಕಂಪು ಹರಿಸಿ
ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ಮೊದಲ ಶಿಕ್ಷಕಿಯಾದೆಯೆಲ್ಲಾ
ಅಮ್ಮಾ
ಆ ನೆನಪು ಎಷ್ಟು ಚೆಂದಾ
ನೆನೆದಾಗ ಆಗುವದೆನಗೆ
ಅವ್ಯಕ್ತ ಆನಂದಾ…

ಮುಖ ತೊಳೆಸಿ,ಸ್ನಾನ ಮಾಡಿಸಿ ಬಟ್ಟೆ ಬದಲಾಯಿಸಿ
ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಅವಶ್ಯಕ ವಿದ್ದಾಗ ಗಾವಠಿ ಔಷದಿ ತಿನಿಸಿ
ಶುಶ್ರೂಷಕಿಯಾಗಿ ನನ್ನ ಸೇವೆ ಮಾಡಿದೆಯಲ್ಲಾ ಅಮ್ಮಾ.
ಆ ನೆನಪು ಎಷ್ಟು ಚೆಂದಾ
ನೆನೆದಾಗ ಆಗುವದೆನಗೆ
ಅವ್ಯಕ್ತ ಆನಂದ..

ಬೆಳೆದು ಮತ್ತಷ್ಟು ದೊಡ್ಡವನಾದ ನಂತರ
ಸ್ವಲ್ಪ ತಿಳುವಳಿಕೆ ಬಂದ ನಂತರ
ಸರಿ ತಪ್ಪುಗಳ ಬಗ್ಗೆ ಮಾಹಿತಿ ನೀಡಿ
ಮಾರ್ಗದರ್ಶಕಿಯಾಗಿ ಸಲಹೆ ನೀಡಿದೆಯೆಲ್ಲಾ ಅಮ್ಮಾ.
ಆ ನೆನಪು ಎಷ್ಟು ಚೆಂದಾ
ನೆನೆದಾಗ ಆಗುವದೆನಗೆ ಅವ್ಯಕ್ತ ಆನಂದಾ…..

ಹೀಗೆ ಗಾಯಕಿಯಾಗಿ, ಶುಶ್ರೂಷಕಿಯಾಗಿ
ಶಿಕ್ಷಕಿಯಾಗಿ ಮಾರ್ಗದರ್ಶಕಿಯಾಗಿ
ತ್ಯಾಗಮಯಿಯಾಗಿ ಜೀವ ಸವೆಸಿದೆಯೆಲ್ಲಾ,
ಯಾರೂ ಇಲ್ಲ ನಿನ್ನ ಸಮಾ ಅಮ್ಮಾ.
ನಿನಗೆ ನನ್ನ ಹೃತ್ಪೂರ್ವಕ   ಸಾಷ್ಟಾಂಗ ಪ್ರಣಾಮಾ….

-ಮಾಲತೇಶ ಎಂ ಹುಬ್ಬಳ್ಳಿ

  

7 Comments on “ಅಮ್ಮ

  1. ಅಹಾ ಅಮ್ಮನ ಬಗ್ಗೆ ವರ್ಣನೆ ‍ಅತೀ ಅದ್ಬುತ.

  2. ತಾಯಿಯ ಮಹತ್ವ ಕುರಿತು ಸುಂದರ ಪದಗಳ ಸಂೋಜನೆಯಲ್ಲಿ ಕವನ ಚೆನ್ನಾಗಿ ಬಂದಿದೆ. ಧನ್ಯವಾದಗಳು

Leave a Reply to ಧರ್ಮಣ ಧನ್ನಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *