ಕರೋನಾ ವೇದನೆ… ನಮ್ಮ ಪ್ರಾರ್ಥನೆ
ಈ ಮಾರಿ ಎಲ್ಲರಿಗೂ ವೈರಿ
ವಿಶ್ವಕ್ಕೆ ಪಾಠ ಕಲಿಸುವುದೇ ಇದರ ಗುರಿ
ವೇಗದ ಬದುಕಿಗೆ ಬ್ರೇಕ್ ಹಾಕಿದ ಪರಿ
ಮನೆಮಂದಿಯನ್ನು ಹತ್ತಿರ ತರುವ ವೈಖರಿ
ಶುಚಿ ಮಡಿಯ ಅಲ್ಲಗಳೆಯುವ ಜನಕೆ
ದೇವ ಭಯ, ಜೀವ ಭಯ ನಂಬುವಂತೆ ಮಾಡಿರಿ
ನೀವು ನಂಬುವ ದೇವರಿಗೆ ಅಡ್ಡಬಿದ್ದು ಬೇಡಿರಿ
ನಮ್ಮ ಮನೆಯ ಜೀವಗಳಿಗೆ ಹಾನಿ ಮಾಡಬೇಡಿರಿ
ಮನೆಯಲ್ಲೇ ಹಾಯಾಗಿರಿ ಬೇರೆಯವರಿಂದ ದೂರವಿರಿ
ದೇಶಕ್ಕಾಗಿ ಪ್ರಾರ್ಥಿಸಿ ವಿಶ್ವಶಾಂತಿಗಾಗಿ ಕೈಮುಗಿಯಿರಿ
-ಪರಿಮಳಾ , ಮೈಸೂರು
ಸತ್ಯ ಅಮ್ಮ. ಈಗಿರುವ ಪರಿಸ್ಥಿತಿ ಕಲಿಸಿದ ಪಾಠಗಳು ಹಲವು. ವಾಸ್ತವದ ಚಿತ್ರಣವನ್ನು ಕವನದ ಮೂಲಕ ಪರಿಚಯಿಸಿದ ಪರಿ ಚೆನ್ನಾಗಿದೆ.
ತಾನೇ ಬರಮಾಡಿಕೊಂಡ ದುಸ್ಥಿತಿ! ಮರುಗಿ ಪ್ರಯೋಜನವಿಲ್ಲ, ನಿಜವನ್ನರಿತು ನಡೆ ತಿದ್ದಿಕೊಳ್ಳಲು ಸಕಾಲ. ಸಕಾಲಿಕ ಕವನ.