ಕನಸು ಮಾರುವ ಹುಡುಗ
ನಿನ್ನ ಕಣ್ಣ ನೀಲ ಕೊಳದಿ ನಾನು
ಕಂಡಿದ್ದೆ ಬಣ್ಣ ಬಣ್ಣದ ಮೀನು
ಸ್ವಪ್ನಗಣ್ಣಿನ ಆ ಸಂಚು
ಕಾರ್ಮುಗಿಲಿನ ಕೋಲ್ಮಿಂಚು
ಎಲ್ಲಿ ಎಲ್ಲಿ ತಪ್ಪಿತು ತಾಳ
ಧರೆಗಪ್ಪಿತೆ ಅಂತರಂಗದ ಮೇಳ
ಕನಸ ಹುಡುಕುವ ಆ ಹೊತ್ತಿನಲಿ
ಎಲ್ಲಿದ್ದೆ ಸ್ವಪ್ನ ಗಣ್ಣಿನೊಡೆಯ
ಎಲ್ಲೊ ಮೊಳೆತು ಸಸಿಯಾಗಿ
ಹೂವಾಗಿ ನಕ್ಕೆಯಲ್ಲ
ಬೇಕಿತ್ತೇ ಈ ಹಿಡಿಯೊಳಗಿನ
ಮಿಸುಕು
ತಪ್ಪಿತ್ತೇ ಎದೆಯೊಳಗಿನ ಪಲುಕು
ಪ್ರತೀಕ್ಷೆ ನಿರೀಕ್ಷೆಗಳೆಲ್ಲ
ಸೋತು ಸೊಪ್ಪಾಗಿ
ಮನದ ಭಾವಗಳೆಲ್ಲ ಈಗ
ಸ್ತಬ್ಧ ನಿಶಬ್ಧ
ಅಂತರಾಳದ ಮೂಲೆ ಮೂಲೆಯಲಿ
ಆರ್ತನಾದ, ಮನದ ಮಿಡಿತದ
ದಿವ್ಯ ಮೌನ
ಸಾಕು ಸಾಕು ಮಾಡು
ಬಿಟ್ಟು ಬಿಡು ಕನಸ ಮಾರುವ
ಕಾಯಕ
ಇಲ್ಲಿ ಗೆಲುವು ನನ್ನದೆ
ಸದ್ಯ ಮಾರಲಿಲ್ಲ ಕನಸ ಉಳಿದಿವೆ ನನ್ನಲಿ
ಕನಸುಗಳಿನ್ನು
-ಎನ್. ಶೈಲಜಾ ಹಾಸನ
.
Madam ji, ಕವನ ಸೊಗಸಾಗಿದೆ.
ಮನದ ಮಿಡಿತದ ದಿವ್ಯ ಮೌನ
ಮಾತಿಲ್ಲದೆ ಸಾಗಿತ್ತು ಕನಸಿನೂರಿನ ಕಡೆಗೆ ಹೃದಯದ ಪಯಣ.
ಧನ್ಯವಾದಗಳು ನಯನ
SUPER
ಚಂದದ ಕವನ