ದುಂಡು ಮಲ್ಲಿಗೆ ಮುಖದ ಮೇಲೆ
ಕವಳಿ ಹಣ್ಣಿನ ಕಣ್ಣೊಳಗ ಪ್ರೇಮ ಶಾಲೆ
ಕಲಿಸಿದಳಾಕೆ ಪ್ರೀತಿಸಲೆನಗೆ
ಸೇರಿಕೊಂಡಿಹಳೆನ್ನ ಎದೆಯೊಳಗೆ….
ಮೆಲ್ಲ ಮೆಲ್ಲನೆ ಹೆಜ್ಜೆಯ ನಡಿಗೆ
ಕೋಗಿಲೆಯೇ ನಾಚಿದೆ ಅವಳ ನುಡಿಗಳಿಗೆ
ಹೂವಿನ ದಳದಂತ ಮೆತ್ತನೆ ತುಟಿಯಿಂದ
ಕೊಟ್ಟಳು ಗಲ್ಲಕ ಬೆಲ್ಲದ ಆನಂದ….
ಆ ಕಡೆ – ಈ ಕಡೆ ಕಣ್ಣೋಟ ಹಾಕಿ
ಹತ್ತಿರ ಬಂದಳು ನಾಚಿಕೆ ಹೊರ ನೂಕಿ
ಬಿಸಿ ಅಪ್ಪುಗೆ ಸಿಂಚನ ಸಮಯವೇ ಚೆನ್ನ
ಆಗಲೇ ಯಾರೋ ಕರೆದಂತಾಯ್ತು ನನ್ನ.
ಮುಚ್ಚಿದ ಕಣ್ಣ ಬಿಟ್ಟು ನೋಡಿದೆ
ಯಾರೋ ಅಂದರು “ಇಲ್ಲವೆ ನಿನಗೆ ಮಾನ ಮರ್ಯಾದೆ?”
ಯಾಕಂದ್ರೆ ಅದು ಹನ್ನೆರಡು ಘಂಟೆಯ ಬಿಸಿಲಿನ ಶಾಖ
ಕನಸಿನ ಕನ್ಯೆಯ ಧ್ಯಾನದಿ ನಾ ಮರೆತಿದ್ದೆ
–ವಿದ್ಯಾ ಶ್ರೀ. ಬಿ. ಬಳ್ಳಾರಿ
ಹಗಲುಗನಸು ಕಾಣುವಷ್ಟು ಹಿತವಾಗಿಹುದೆ ಬಿಸಿಲು? nice one
ಹಗಲುಗನಸು ವಿಪರೀತವಾದ್ರೆ ಹೀಗೇ ಆಗೋದು…ಅಲ್ವಾ.
SUPER kavna