ಸಂಕ್ರಾಂತಿ ಸರಿಗಮ
ಬರುತಲಿದೆ ಸಂಕ್ರಾಂತಿ
ಹೊಸವರುಷದ ಉತ್ಸಾಹ ಚಿಗುರೊಡೆಯುತಿದೆ..
ಹೊಲದ ಸುತ್ತ ಹಸಿರ ತೆನೆಯು ಉಕ್ಕುತಿದೆ
ಹೊಸ ಚಿಲುಮೆಯ ಚಿತ್ತಾರ ಬಿತ್ತಿದೆ
ವರುಷಗಳ ಕಷ್ಟಗಳ ಹೊತ್ತು ಬೆಳೆಸಿದ
ಅನ್ನದಾತನ ಮನವು ಹಿಗ್ಗಿದೆ
ಹೊಸ ಹರುಷದ ಹೊಸತನದ
ಕಾಮನ ಬಿಲ್ಲು ಜಗದಲಿ ಚಾಚಿದೆ.
ಅಸ್ಸಾಮಿನ ನೆಲದಲಿ ಚೆಲುವೆಯರ ನೃತ್ಯದ
ನಾಟ್ಯಧಾಮ ರಂಗೇರುತಿದೆ.
ಕನ್ನಡ ನೆಲದಲಿ ಎಳ್ಳು ಬೆಲ್ಲದ ಮಂದಹಾಸವು
ಬದುಕಿನ ಹೊಸ ಸರಿಗಮ ಬರೆಯುತಿದೆ
ತಮಿಳಿನ ಜಲ್ಲಿಕಟ್ಟುವಿನ ರಣದ ಅಬ್ಬರ ಶುರುವಾಗಿದೆ
ಉತ್ತರದ ದಿಕ್ಕಿನಲಿ ಸಿಹಿಯ ಸ್ಪರ್ಶ ಸಂಗಮವಾಗಿದೆ
ಗಾಳಿಪಟಗಳು ಸೂರ್ಯನ ತೇಜೋಮಂಡಲಕೆ ಗುರಿ ಇಟ್ಟಿವೆ
ಜಗದ ಜನರ ಮನದಲಿ ಹೊಸ ಉತ್ಸಾಹ ಉಕ್ಕಿದೆ.
– ರಾಘವ್ ರಾವ್
SUPER
ಕವನದ ತುಂಬಾ ಹಬ್ಬದ ವಾತಾವರಣ. Nice
ಫುಲ್ ಸಂಕ್ರಾಂತಿ ನೋಡಿದ ಹಾಗಾಯ್ತು!